ಬ್ರೇಕಿಂಗ್ ನ್ಯೂಸ್
26-02-24 02:15 pm Mangalore Correspondent ಕರಾವಳಿ
ಮಂಗಳೂರು, ಫೆ.26: ಕನ್ನಡಿಗ ಮೀನುಗಾರರ ಮೇಲೆ ತಮಿಳುನಾಡು ಮತ್ತು ಕೇರಳದ ಮೀನುಗಾರರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಕಳೆದ ಎರಡು ತಿಂಗಳಲ್ಲಿ ಮಂಗಳೂರಿನಿಂದ ಮೀನುಗಾರಿಕೆ ತೆರಳಿದ್ದ 50ರಷ್ಟು ಬೋಟುಗಳಿಗೆ ಹಾನಿ ಮಾಡಿದ್ದಲ್ಲದೆ, ಮೀನು ಕಾರ್ಮಿಕರ ಮೇಲೆಯೂ ಹಲ್ಲೆ ನಡೆಸಿದ್ದಾರೆಂದು ಮಂಗಳೂರಿನ ಮೀನುಗಾರರು ಹೇಳಿದ್ದಾರೆ.
ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ಬಳಿಕ ಆಳ ಸಮುದ್ರ ಮೀನುಗಾರಿಕೆ ತೆರಳುತ್ತಾರೆ. ಬೆಲೆಬಾಳುವ ರಿಬ್ಬನ್ ಫಿಶ್ ಹಿಡಿಯುವ ಉದ್ದೇಶದಿಂದ ದಕ್ಷಿಣದತ್ತ ತೆರಳಿ, ಆಳ ಸಮುದ್ರದಲ್ಲಿ ಬಲೆ ಹಾಕುತ್ತಾರೆ. ತಮಿಳುನಾಡಿನ ರಾಮೇಶ್ವರಂ ವರೆಗೂ ಮೀನುಗಾರಿಕೆಗೆ ತೆರಳಿ, ಹಿಂತಿರುಗುವುದು ವಾಡಿಕೆ. ಈ ಬಾರಿ ಆಳ ಸಮುದ್ರಕ್ಕೆ ಹೋಗಿದ್ದಾಗ ಕನ್ನಡಿಗರನ್ನು ಟಾರ್ಗೆಟ್ ಮಾಡಿ, ತಮಿಳು ಮತ್ತು ಕೇರಳದ ಮೀನುಗಾರರು ಹಲ್ಲೆ ನಡೆಸಿದ್ದಾರೆ.
ಕರ್ನಾಟಕದ ಬೋಟುಗಳನ್ನು ಸುತ್ತುವರೆದು ಹಲ್ಲೆ ಮತ್ತು ಬೋಟಿಗೆ ಹಾನಿ ಎಸಗಿರುವ ಘಟನೆಯ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಮಂಗಳೂರಿನ ಮೀನುಗಾರರು ಇದನ್ನು ಮೊಬೈಲಿನಲ್ಲಿ ಸೆರೆಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ. ಅಲ್ಲದೆ, ಮೀನುಗಾರಿಕಾ ಇಲಾಖೆಯ ಗಮನಕ್ಕೂ ತಂದಿದ್ದಾರೆ. ಜನವರಿ, ಫೆಬ್ರವರಿ ತಿಂಗಳಲ್ಲಿ ಈ ರೀತಿ ಆಳ ಸಮುದ್ರ ಮೀನುಗಾರಿಕೆ ತೆರಳುವ ಸಂದರ್ಭದಲ್ಲಿ ಪ್ರತಿ ಬಾರಿಯೂ ಇಂತಹ ಘಟನೆಗಳಾಗುತ್ತವೆ. ಕಳೆದ ಬಾರಿ ಮಂಗಳೂರಿನ ಮೀನುಗಾರರು ಪ್ರತಿ ಹಲ್ಲೆ ನಡೆಸಿದ ಬಗ್ಗೆ ಕೇರಳದ ಕಣ್ಣೂರಿನಲ್ಲಿ ಕೇಸು ದಾಖಲಾಗಿತ್ತಲ್ಲದೆ, ಇಬ್ಬರನ್ನು ಅರೆಸ್ಟ್ ಮಾಡಿದ್ದ ಘಟನೆಯೂ ನಡೆದಿತ್ತು.
ಸಮುದ್ರ ಮೀನುಗಾರಿಕೆಗೆ ಗಡಿಯ ಭೇದ ಇರುವುದಿಲ್ಲ. ತಮಿಳುನಾಡು ಮೀನುಗಾರರು ಉತ್ತರದತ್ತ ಬಂದು ಕರ್ನಾಟಕದ ಕರಾವಳಿಯಲ್ಲೂ ಮೀನುಗಾರಿಕೆ ನಡೆಸುತ್ತಾರೆ. ಹಾಗೆಂದು ಅವರ ಮೇಲೆ ನಾವೆಂದೂ ಹಲ್ಲೆ ನಡೆಸಿದ್ದಿಲ್ಲ. ನಾವು ಬ್ಯಾಂಕ್ ಸಾಲ ಮಾಡಿ, ಕಾರ್ಮಿಕರನ್ನು ಗುತ್ತಿಗೆ ಪಡೆದು ಆಳಸಮುದ್ರಕ್ಕೆ ಬೋಟ್ ಕಳಿಸುತ್ತೇವೆ. ಅಂಥದ್ದರಲ್ಲಿ ಈ ರೀತಿ ಹಲ್ಲೆಗಳಾದರೆ ನಾವೇನು ಮಾಡೋದು ಎಂದು ಬೋಟ್ ಮಾಲೀಕ ಅರುಣ್ ಪ್ರಶ್ನಿಸುತ್ತಾರೆ. ಈ ಬಾರಿಯೂ ಕರಾವಳಿಯಲ್ಲಿ ಮೀನು ಸಿಗುತ್ತಾ ಇಲ್ಲ. ಮೀನು ಕಡಿಮೆ ಇರುವುದರಿಂದ ಮಂಗಳೂರಿನ ಸಾವಿರ ಬೋಟುಗಳ ಪೈಕಿ 50-60 ಬೋಟುಗಳಷ್ಟೇ ತಮಿಳುನಾಡು ಕಡೆಗೆ ಹೋಗುತ್ತವೆ. ಅಂತಹ ಸಂದರ್ಭದಲ್ಲಿ ಇವರು ಗುಂಪು ಕಟ್ಟಿ ಕಲ್ಲು ಬಿಸಾಕಿ ಹಲ್ಲೆ ನಡೆಸಿದರೆ ನಾವು ಬದುಕೋದು ಹೇಗೆ ಎಂದು ಪ್ರಶ್ನಿಸುತ್ತಾರೆ.
ವಿಡಿಯೋದಲ್ಲಿ ಕನ್ನಡಿಗರ ಮೀನುಗಾರಿಕಾ ಬೋಟನ್ನು ವಶಕ್ಕೆ ಪಡೆದು ಅದರಲ್ಲಿದ್ದ ಬಲೆ ಇನ್ನಿತರ ಪರಿಕರಗಳನ್ನು ಸಮುದ್ರಕ್ಕೆ ಎಸೆಯುವ ಚಿತ್ರಣ ಇದೆ. ಆಮೂಲಕ ಸಮುದ್ರದಲ್ಲಿಯೂ ಮೀನುಗಾರರು ರಾಜ್ಯ, ಭಾಷೆಯ ಆಧಾರದಲ್ಲಿ ಹಕ್ಕು ಸ್ಥಾಪನೆ ಮಾಡುವುದಕ್ಕೆ ಹೊರಟಂತಿದೆ. ಭಾರತೀಯ ಜಲರೇಖೆ ಎಂದ ಮೇಲೆ ಅಲ್ಲಿ ದೇಶದ ಯಾವ ರಾಜ್ಯದವರೂ ಕೂಡ ಮೀನುಗಾರಿಕೆ ನಡೆಸಬಹುದು. ಈ ರೀತಿ ಗಡಿ, ಭಾಷೆ ಮುಂದಿಟ್ಟು ಹಲ್ಲೆ ನಡೆಸಿದರೆ, ಮೀನುಗಾರರು ಮುಯ್ಯಿಗೆ ಮುಯ್ಯಿ ಮಾಡೋಕೆ ಹೋದರೆ ಮುಂದೆ ಎಲ್ಲರಿಗೂ ತೊಂದರೆಯಾದೀತು. ಮೀನುಗಾರಿಕೆ ಸಂದರ್ಭದಲ್ಲಿ ಸಮುದ್ರವನ್ನು ಮಾಲಿನ್ಯ ಮಾಡದಂತೆ ಎಚ್ಚರಿಕೆ ವಹಿಸಬೇಕಾದ ಕರ್ತವ್ಯ ಮೀನುಗಾರರಿಗೆ ಇರಬೇಕು. ಪ್ಲಾಸ್ಟಿಕ್ ವಸ್ತುಗಳನ್ನು ಸಮುದ್ರಕ್ಕೆ ಎಸೆಯುವುದು ಮೀನುಗಳಿಗೆ ಅಪಾಯಕಾರಿಯಾಗಿದ್ದರಿಂದ ಮೀನಿನ ಕ್ಷಾಮಕ್ಕೆ ಇವರೇ ಕೊಡುಗೆ ಕೊಟ್ಟಂತಾಗುತ್ತದೆ.
Mangalore Fishermen and boats attacked by Tamil Fishermen in deep see fishing, more than 50 boats damaged in the last two months.
21-01-25 10:59 pm
HK News Desk
BJP MLA BP Harish, B. Y. Vijayendra, Yatnal:...
20-01-25 07:00 pm
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
ಮುಡಾ ಸೈಟ್ ಹಗರಣ ; 300 ಕೋಟಿ ಮೌಲ್ಯದ 142 ಆಸ್ತಿಗಳನ...
18-01-25 05:05 pm
21-01-25 11:02 pm
HK News Desk
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್ಗಳ ನಿರಂತ...
19-01-25 08:17 pm
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
21-01-25 11:51 pm
Mangalore Correspondent
Mangalore Praveen Nettaru murder case, NIA ar...
21-01-25 09:43 pm
Mangalore University, Phd courses: ಪಿಎಚ್ ಡಿ ಪ...
21-01-25 08:11 pm
Mangalore Kotekar bank robbery, president: 15...
21-01-25 07:43 pm
Mangalore Kotekar Bank Robbery, Accused Photo...
21-01-25 12:21 pm
21-01-25 06:00 pm
Mangaluru Correspondent
Hubballi Bank Robbery, Kotekar, Bidar: ಬೀದರ್...
20-01-25 10:18 pm
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm
Mysuru Robbery, Bidar Mangalore, Crime; ಬೀದರ್...
20-01-25 01:25 pm