ಬ್ರೇಕಿಂಗ್ ನ್ಯೂಸ್
26-02-24 07:51 pm Mangalore Correspondent ಕರಾವಳಿ
ಮಂಗಳೂರು, ಫೆ.26: ಕರಾವಳಿಯಲ್ಲಿ ಇತಿಹಾಸ ಬರೆದವರಲ್ಲಿ ಪ್ರಮುಖ ಪಾತ್ರವನ್ನು ಬಿಎ ಸಾಲೆತ್ತೂರು, ಗೋವಿಂದ ಪೈ ಮೊದಲಾದವರು ಹೊಂದಿದ್ದಾರೆ. ಆದರೆ ನಮ್ಮ ಕರಾವಳಿಯ ಇತಿಹಾಸವನ್ನು ಕಟ್ಟಿದವರು ಯಾರು ಎಂಬ ಪ್ರಶ್ನೆ ಬಂದಾಗ ಅದರಲ್ಲಿ ಮೊದಲ ಸ್ಥಾನವನ್ನು ಪಡೆಯುವುದು ಬಾಸೆಲ್ ಮಿಷನರಿಗಳು. ಕರಾವಳಿಗೆ ಒಂದು ಚಲನೆಯನ್ನು ಕೊಟ್ಟವರು ಮಿಷನರಿಗಳು ಎಂದು ಹಿರಿಯ ಚಿಂತಕ ಪುರುಷೋತ್ತಮ ಬಿಳಿಮಲೆ ಹೇಳಿದರು.
ಡಿವೈಎಫ್‌ಐನ 12ನೇ ರಾಜ್ಯ ಸಮ್ಮೇಳನದ ಎರಡನೆಯ ದಿನ ನಡೆದ “ ಕರಾವಳಿ ಕಟ್ಟಿದ ಬಗೆ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪಾರಂಪರಿಕತೆಯನ್ನು ಸಾರ್ವತ್ರಿಕಗೊಳಿಸಿದ ಕ್ರಾಂತಿ ಕರಾವಳಿಯಲ್ಲಿ ಮಿಷನರಿಗಳು ಮಾಡಿದ್ದಾರೆ. ಈ ಮಿಷನರಿಗಳಿಗೆ ನಾವೆಲ್ಲರೂ ಅಭಾರಿಯಾಗಿರಬೇಕು. ನಮ್ಮಲ್ಲಿರುವ ಮಠಗಳು ಸಾವಿರಾರು ವರ್ಷಗಳ ಹಿಂದಿನದ್ದು ಎಂದು ಹೇಳಲಾಗುತ್ತದೆ. ಆದರೆ ನಮ್ಮ ಕರಾವಳಿಯಲ್ಲಿ ಮೊದಲ ಬಾರಿಗೆ ಮುದ್ರಣಾಲಯವನ್ನು ಈ ಮಠದವರು ಹಾಕಿದ್ದಾರಾ? ಅದಕ್ಕಾಗಿ ಮಿಷನರಿಗಳು ಬರಬೇಕಾಯಿತು. ಈ ನಿಟ್ಟಿನಲ್ಲಿ ನಾವು ಮಿಷನರಿಗಳ ಕೊಡುಗೆಯನ್ನು ಸ್ಮರಿಸಬೇಕು ಎಂದು ಶ್ಲಾಘಿಸಿದರು.
'ನಾನು ಕೋಮುವಾದ ಮಾಡುತ್ತೇನೆ. ಅದರಲ್ಲಿ ತಪ್ಪೇನಿಲ್ಲ, ಅದುವೇ ಸರಿ ಎನ್ನುವವರ ನಡುವೆ ಕೋಮುವಾದ ಮಾಡುವುದು ತಪ್ಪು ಎನ್ನುವ ಒಬ್ಬರು ಇದ್ದರೆ ಸಾಕು ಎಂದ ಬಿಳಿಮಲೆ, ಈ ಹಿಂದೆ ಬ್ರಾಹ್ಮಣರೇನು ಮತಾಂತರ ಆಗುತ್ತಿರಲಿಲ್ಲ. ಮತಾಂತರ ಆದವರು ಎಂಜಲು ತಿನ್ನುತ್ತಿದ್ದವರು, ಭಿಕ್ಷೆ ಬೇಡುತ್ತಿದ್ದವರು. ಆದರೆ ಈಗ ಅವರು ಕೂಡಾ ತಮ್ಮ ಸ್ವಇಚ್ಛೆಯಿಂದ ಮತಾಂತರವಾಗಲು ಸಾಧ್ಯವಾಗದಂತಾಗಿದೆ ಎಂದರು. ಈ ಹಿಂದೆ ಸಮಾಜಕ್ಕೆ ಕೊಡುಗೆ ನೀಡಿದವರು ಎಂದರೆ ಮಂಗಳೂರಿಗರು ಆಗಿದ್ದರು. ಆದರೆ ಈಗ ಯಾವುದೇ ಜಿಲ್ಲೆ, ಪ್ರದೇಶದಲ್ಲಿ ಗಲಾಟೆ, ಗಲಭೆ ನಡೆದರೂ ಆ ಜಿಲ್ಲೆಯನ್ನು "ಮಂಗಳೂರಿನಂತೆ" ಎಂದು ಹೋಲಿಕೆ ಮಾಡಲಾಗುತ್ತದೆ. ಆ ಮಟ್ಟಿಗೆ ನಮ್ಮ ನಗರ ತಲುಪಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಒಂದು ಮೇಲ್ಸೆತುವೆ ನಿರ್ಮಾಣ ಮಾಡಲು ಎರಡು ಬಾರಿ ಗೆದ್ದು ಬಂದ ಎಂಎಲ್‌ಎಗಳ ನಡುವೆ ನಾವು ಶ್ರೀನಿವಾಸ ಮಲ್ಯರ ಕೊಡುಗೆಯನ್ನು ನೆನೆಯಬೇಕು ಎಂದರು. ಜಾತಕವನ್ನು ಬರೆಯುವಾಗ ಎಂದಿಗೂ ಕೂಡ ಬ್ರಾಹ್ಮಣರೇತರಿಗೆ ವಿದ್ಯೆ ಇಲ್ಲ ಎಂದು ಬರೆಯಲಾಗುತ್ತದೆ. ನನಗೂ ಹಾಗೆಯೇ ಬರೆಯಲಾಗಿತ್ತು. ಆದರೆ ಆ ಜ್ಯೋತಿಷಿ ಬರೆದ ಜಾತಕಕ್ಕೆ ಸಡ್ಡು ಹೊಡೆದವರು ನಮ್ಮ ತಾಯಿ. ನನಗೆ ತನ್ನ ಕಿವಿಯೋಳೆ ಅಡವಿಟ್ಟು ವಿದ್ಯೆ ನೀಡಿದರು. ಇಂದು ನಾನು ಪ್ರೊಫೆಸರ್ ಆಗಿ ಬೆಳೆದಿದ್ದೇನೆ ಎಂದು ತಿಳಿಸಿದರು.
ಕನ್ನಡ ಪರ ಹೋರಾಟಗಾರ ರಮೇಶ್ ಬೆಲ್ಲದಕೊಂಡ ಪ್ರತಿಕ್ರಿಯೆ ನೀಡಿದರು. ವೇದಿಕೆಯಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್ ಉಪಸ್ಥಿತರಿದ್ದರು. ಜಿಲ್ಲಾ ಮುಖಂಡ ಮನೋಜ್ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು.
Ba Salettur, Govinda Pai and others have played an important role in the history of coastal areas. But when it comes to the question of who built the history of our coast, it is the Basel missionaries who take the first place. Senior thinker Purushothama Bilimale said that it was the missionaries who gave a movement to the coast.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm