ಬ್ರೇಕಿಂಗ್ ನ್ಯೂಸ್
05-03-24 04:28 pm Mangalore Correspondent ಕರಾವಳಿ
ಉಳ್ಳಾಲ, ಮಾ.5: ಗಟ್ಟಿ ಸಮುದಾಯದವರ ಬಗ್ಗೆ ಕ್ಷುಲ್ಲಕವಾಗಿ ಹೇಳಿಕೆ ನೀಡಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ವಿರುದ್ಧ ಗಟ್ಟಿ ಸಮಾಜ ಬಾಂಧವರು ತಿರುಗಿ ಬಿದ್ದಿದ್ದು ಸದಾಶಿವ ಉಳ್ಳಾಲ್ ಅವರು ತಕ್ಷಣ ಬಹಿರಂಗ ಕ್ಷಮೆ ಯಾಚಿಸದಿದ್ದರೆ ಅವರ ಮನೆ, ಕಚೇರಿಯೆದುರು ಉಗ್ರ ಪ್ರತಿಭಟನೆ ನಡೆಸೋದಾಗಿ ಎಚ್ವರಿಸಿದ್ದಾರೆ.
ಭಾನುವಾರ ತೊಕ್ಕೊಟ್ಟಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ಗಟ್ಟಿ ಸಮಾಜವನ್ನು ಬೊಟ್ಟು ಮಾಡಿ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಕ್ರೋಶ ವ್ಯಕ್ತವಾಗಿತ್ತು.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ಬಲ್ಲಿ ಈ ಬಗ್ಗೆ ಗಟ್ಟಿ ಸಮಾಜದ ಪ್ರಮುಖರು ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಪ್ರಮುಖರಾದ ಪವಿತ್ರ ಗಟ್ಟಿ ಮಾತನಾಡಿ ನಮ್ಮ ಸಮುದಾಯವನ್ನ ಬಹಿರಂಗವಾಗಿ ಅವಹೇಳನ ಮಾಡಿದ ಸದಾಶಿವ ಉಳ್ಳಾಲ್ ಅವರು ತಕ್ಷಣವೇ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ಮನೆ, ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.
ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ವಿಶ್ವನಾಥ ಗಟ್ಟಿ ಮಾತನಾಡಿ ಕೊಂಡಾಣ ಕ್ಷೇತ್ರದಲ್ಲಿ ನಡೆದಿದ್ದ ಗಲಾಟೆ ವಿಚಾರದಲ್ಲಿ ಸದಾಶಿವ ಉಳ್ಳಾಲ್ ಅವರು ನಮ್ಮ ಸಮಾಜವನ್ನ ವಿನಾಕಾರಣ ಎಳೆ ತಂದು ಅವಮಾನಿಸುವ ಹೇಳಿಕೆ ನೀಡಿರುವುದು ಖಂಡನೀಯ. 1930 ಇಸವಿಯಿಂದ 1988 ಇಸವಿಯ ವರೆಗೆ ಗಟ್ಟಿ ಸಮಾಜದವರೇ ಸೋಮನಾಥ ದೇವಸ್ಥಾನದ ಆಡಳಿತ ನಡೆಸಿದ್ದು, ಕ್ಷೇತ್ರದಲ್ಲಿ ನಡೆಯುವ ಪಂಚ ಪರ್ವ, ವಾರ್ಷಿಕ ಉತ್ಸವಗಳನ್ನ ಸಮಾಜದ ಜನರ ಸಹಕಾರದೊಂದಿಗೆ ಅತ್ಯಂತ ಸುಂದರವಾಗಿ ನಡೆಸಿಕೊಂಡು ಬರುತ್ತಿದ್ದರು. ಅಂದಿನ ಕಾಲದಲ್ಲಿ ಬಹಳ ಕಷ್ಟದಲ್ಲಿ ಸಮುದಾಯದವರ ಪ್ರತೀ ಮನೆಯಿಂದಲೂ ಒಂದು ಮುಷ್ಟಿ ಅಕ್ಕಿ, ಒಂದು ಗಿಂಡೆ ಎಲ್ಲೆಣ್ಣೆಯನ್ನು ಕುಲ ಸ್ವಾಮಿ ಸೋಮನಾಥನಿಗೆ ಅರ್ಪಿಸುತ್ತಿದ್ದರು. ಸೋಮನಾಥನಿಲ್ಲದೆ ಗಟ್ಟಿ ಸಮಾಜವಿಲ್ಲ ಎಂಬ ನಂಬಿಕೆ ನಮ್ಮದು. ಈಗಲೂ ಸೋಮನಾಥನ ವಾರ್ಷಿಕ ಜಾತ್ರೆಗೆ ಗಟ್ಟಿ ಸಮಾಜ ಬಾಂಧವರು ಮನೆ, ಮನೆಯಿಂದ ದೇಣಿಗೆ ಸಂಗ್ರಹಿಸಿ ಹೊರೆ ಕಾಣಿಕೆ ಅರ್ಪಿಸುತ್ತಾರೆ. ಸದಾಶಿವ ಉಳ್ಳಾಲ್ ಅವರು ಗಟ್ಟಿ ಸಮಾಜದ ಮೇಲೆ ಮಾಡಿರುವ ಆರೋಪ ನಮ್ಮ ಲೋಪದಿಂದ ಆಗಿರುವುದಲ್ಲ. ನಮ್ಮದೇ ಹಿಂದೂ ಬಾಂಧವರ ಕೆಲವು ವಿಕೃತ ಮನಸ್ಥಿತಿಯ ಜನರಿಂದ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಗಟ್ಟಿ ಸಮಾಜದ ನಾಯ್ಗರಾದ ಹರೀಶ್ಚಂದ್ರ ಗಟ್ಟಿ ಬೊಂಬಾಯಿ ಮನೆ, ಮೇಲ್ಡರಾದ ಯಾದವ ಗಟ್ಟಿ, ಪ್ರಮುಖರಾದ ಜಯರಾಮ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Mangalore Gatti community warns of protest for controversial remkars by sadashiv ullal on kondana temple row.
09-08-25 08:00 pm
HK Staff
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
09-08-25 07:38 pm
HK Staff
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
09-08-25 09:42 pm
Mangalore Correspondent
ಧರ್ಮಸ್ಥಳ ಕ್ಷೇತ್ರದ ಘನತೆ ಕುಗ್ಗಿಸಲೆತ್ನಿಸುತ್ತಿರುವ...
09-08-25 08:10 pm
Father Muller Medical College, Hospital, Mang...
09-08-25 04:22 pm
Dharmasthala,16th Spot at Bahubali Hill: ಧರ್ಮ...
09-08-25 02:16 pm
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm