ಬ್ರೇಕಿಂಗ್ ನ್ಯೂಸ್
05-03-24 10:54 pm Mangalore Correspondent ಕರಾವಳಿ
ಮಂಗಳೂರು, ಮಾ.5: ಪಾಕ್ ಪರ ಘೋಷಣೆ ವಿಚಾರದಲ್ಲಿ ಆ ರೀತಿಯ ಘಟನೆ ನಡೆದೇ ಇಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಲು ಹೋದ ಸಚಿವ ಪ್ರಿಯಾಂಕ ಖರ್ಗೆ, ಮಂಗಳೂರಿನ ಕಾಂಗ್ರೆಸ್ ಮುಖಂಡ ಎಂ.ಜಿ ಹೆಗ್ಡೆ ಸಾರ್ವಜನಿಕರ ಮುಂದೆ ನಗೆಪಾಟಲಿಗೀಡಾಗಿದ್ದಾರೆ.
ಫೆ.27ರಂದು ಸಂಜೆ ಪಾಕ್ ಪರ ಘೋಷಣೆ ಕೇಳಿಬಂದ ಬಳಿಕ ಮಂಗಳೂರಿನ ಕೇಬಲ್ ಸುದ್ದಿ ವಾಹಿನಿಯಲ್ಲಿ ಚರ್ಚಾ ಗೋಷ್ಠಿಗೆ ಬಂದಿದ್ದ ಎಂಜಿ ಹೆಗ್ಡೆಯವರು, ಮೂವರು ರಾಜ್ಯ ಮಾಧ್ಯಮ ವಾಹಿನಿಯ ಪ್ರಮುಖರ ಹೆಸರೇಳಿ ವಾಗ್ದಾಳಿ ನಡೆಸಿದ್ದರು. ಒಂದ್ವೇಳೆ ಪಾಕ್ ಪರ ಘೋಷಣೆಯ ವಿಡಿಯೋ ಕುರಿತು ಎಫ್ಎಸ್ ಎಲ್ ವರದಿಯಲ್ಲಿ ಆ ರೀತಿ ಘಟನೆ ನಡೆದೇ ಇಲ್ಲವೆಂದು ಬಂದಲ್ಲಿ ಈ ಮೂವರ ಫೋಟೋ ಇಟ್ಟು ಉಗಿಯಬೇಕೆಂದು ಹೇಳಿದ್ದರು. ಒಂದು ವಾರ ಕಾಲ ಆ ಮೂವರ ಫೋಟೋ ಇಟ್ಟು ಅದರ ಮೇಲೆ ನಿರಂತರ ಉಗಿಯುತ್ತೇನೆ, ಅದನ್ನು ಪ್ರಸಾರ ಮಾಡಬೇಕೆಂದು ಸುದ್ದಿ ವಾಹಿನಿಯವರಿಗೆ ಸವಾಲು ಹಾಕಿದ್ದು ವೈರಲ್ ಆಗಿತ್ತು.

ಸವಾಲಿನ ರೂಪದಲ್ಲಿ ಎಂಜಿ ಹೆಗ್ಡೆಯವರು ಹೇಳಿಕೆಯನ್ನು ನೀಡಿದ್ದರು. ಇದೀಗ ಪಾಕ್ ಪರ ಘೋಷಣೆ ಕುರಿತು ಎಫ್ಎಸ್ಎಲ್ ವರದಿ ಬಂದಿದ್ದು ಘೋಷಣೆ ಕೂಗಿದ್ದು ನಿಜವೆಂದು ಬಂದಿದೆ. ಇದರ ಬೆನ್ನಲ್ಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮೂವರ ಬಂಧನ ವಿಚಾರದ ಸುದ್ದಿಯನ್ನು ಪ್ರಸಾರ ಮಾಡಿದ ವೇಳೆ, ಸುವರ್ಣ ವಾಹಿನಿಯ ಅಜಿತ್ ಹನುಮಕ್ಕನವರ್, ಎಂಜಿ ಹೆಗ್ಡೆ ಹೆಸರೆತ್ತದೆ ಸವಾಲನ್ನು ಉಲ್ಲೇಖಿಸಿದ್ದಾರೆ. ಮಂಗಳೂರಿನ ಒಬ್ಬರು ನಮ್ಮ ಮೇಲೆ ಉಗಿಯಬೇಕು ಎಂದು ಹೇಳಿದ್ದರು. ಈಗ ಅವರು ಯಾರ ಮೇಲೆ ಉಗಿಯುತ್ತಾರೆ. ಆ ರೀತಿ ಘೋಷಣೆ ಆಗಿಯೇ ಇಲ್ಲ ಎಂದು ವಾದಿಸಿದ್ದವರ ಮೇಲೆ ಉಗಿಯುತ್ತಾರೆಯೇ ಕಳ್ಳ ಎಂದು ಪ್ರಶ್ನೆ ಮಾಡಿದ್ದಾರೆ.
ಒಂದ್ವೇಳೆ ಎಫ್ಎಸ್ಎಲ್ ವರದಿಯಲ್ಲಿ ಪಾಕ್ ಪರ ಘೋಷಣೆ ದೃಢಪಡದೇ ಇರುತ್ತಿದ್ದರೆ ನಾವು ಮಾಧ್ಯಮ ಭಯೋತ್ಪಾದಕರು ಅನ್ನುವ ಹಣೆಪಟ್ಟಿ ಹೊತ್ತು ಕೊಳ್ಳಬೇಕಿತ್ತಲ್ಲಾ ಎಂದು ಅಜಿತ್ ಖೇದ ಪಟ್ಟುಕೊಂಡಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಮುಖಂಡ ಎಂಜಿ ಹೆಗ್ಡೆ ತಮ್ಮ ಸವಾಲು ಠುಸ್ಸಾಗುತ್ತಲ್ಲೇ ಮರು ಹೇಳಿಕೆ ನೀಡಿದ್ದು, ತಾನು ಮಾಧ್ಯಮ ಪ್ರಮುಖರ ಹೆಸರು ಹೇಳಬಾರದಿತ್ತು. ಹೆಸರೇಳಿ ತಪ್ಪು ಮಾಡಿದ್ದೇನೆ. ಆ ಮಾತನ್ನು ವಾಪಸ್ ಪಡೆಯುತ್ತೇನೆ. ಆದರೆ ಮಂಗಳೂರನ್ನು ಶಾಂತಿಯ ನಾಡಾಗಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಭರಾಟೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.

ಪಾಕ್ ಪರ ಘೋಷಣೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಅದೆಲ್ಲ ಕಾಲ್ಪನಿಕ ಘಟನೆ. ಅಂತಹ ಘೋಷಣೆ ಯಾರೂ ಕೂಗಿಯೇ ಇಲ್ಲ ಎಂದು ಷರಾ ಹೇಳಿದ್ದರು. ಅಲ್ಲದೆ, ಪಾಕ್ ಪರ ಘೋಷಣೆಯನ್ನು ಹೈಲೈಟ್ ಮಾಡಿದ ಮಾಧ್ಯಮವನ್ನು ಭಜನೆ ಮಾಡೋರು ಎಂದು ಹೇಳಿ ಮೂದಲಿಸಿದ್ದರು. ಭಜನೆ ಎಂದು ಹೇಳಿ ಮೂದಲಿಸಿದ್ದಕ್ಕೆ ಪ್ರಿಯಾಂಕ ಖರ್ಗೆ ಹೆಸರೆತ್ತದೆ ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್, ಎಫ್ಎಸ್ಎಲ್ ವರದಿ ಬರುತ್ತಲೇ ಖರ್ಗೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ತಂದೆ- ತಾಯಿ ಮಾಡಿಟ್ಟ ಆಸ್ತಿಯಲ್ಲಿ ಕಾರುಬಾರು ಮಾಡುತ್ತಿದ್ದಾರೆ. ಇವರಿಗೆ ಒಂಚೂರಾದ್ರೂ ಕಾಮನ್ ಸೆನ್ಸ್ ಇದೆಯಾ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
Congress M G Hegde lands in trouble over Pakistan Zindabad debate, News anchors slams Hedge live. M G Hedge had called for slamming News Anchor of Suvarna News Ajit Hanamakkanavar, Ranganath Bharadwaj and Jayprakash Shetty if there is no Pakistan Zindabad heard in FSL Reports, as the reports confirmed that slogans were shouted Anchors have slammed M G Hedge live on Tv.
30-05-26 06:45 pm
HK News Staffer
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ! ವಿಧಾನಸೌಧ ಮೆಟ...
29-05-26 10:41 pm
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
30-05-26 09:52 pm
HK News Desk
Mangalore News, Traffic: ಹೆದ್ದಾರಿ ಅಪಘಾತ ತಡೆಗೆ...
30-05-26 08:06 pm
Master Travels Bus, Mangalore: ಕಾವೂರಿನಲ್ಲಿ ಬಸ...
30-05-26 02:10 pm
ಹಿಂದೆ ವೀರೇಂದ್ರ ಪಾಟೀಲ್ ಗೆ ಆದ ಅವಮಾನ ಈಗ ಸಿದ್ದರಾಮ...
28-05-26 02:45 pm
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am