ಬ್ರೇಕಿಂಗ್ ನ್ಯೂಸ್
06-03-24 10:39 pm Mangalore Correspondent ಕರಾವಳಿ
ಉಳ್ಳಾಲ, ಮಾ. 6: ಹರೇಕಳ, ಪಾವೂರು, ಅಂಬ್ಲಮೊಗರು, ಬೋಳಿಯಾರು ಗ್ರಾಮದ ನೇತ್ರಾವತಿ ನದಿ ಪಾತ್ರದ ಪ್ರದೇಶಗಳಲ್ಲಿ ವಿಶೇಷ ಯೋಜನೆ ರೂಪಿಸುತ್ತಿದ್ದು , ಮುಂದಿನ ದಿನಗಳಲ್ಲಿ ಈ ಭಾಗವು ಪ್ರವಾಸೋದ್ಯಮ ಸ್ಥಳವಾಗಿ ಜನಾಕರ್ಷಣೆ ಪಡೆಯಬೇಕೆಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು.
ಹರೇಕಳ ಕಡವಿನ ಬಳಿ ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೇತ್ರಾವತಿ ಎಡದಂಡೆ ಖಾರ್ ಲ್ಯಾಂಡ್ ನಿರ್ಮಾಣಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಈ ಭಾಗ ಪ್ರವಾಸೋದ್ಯಮ ಸ್ಥಳವಾಗಿ ಆಕರ್ಷಣೆ ಪಡೆಯಬೇಕು. ದೇಶದ ಮೂಲೆಗಳಿಂದ ಜನರು ಇಲ್ಲಿಗೆ ಬರಬೇಕು. ಪ್ರಥಮ ಹಂತವಾಗಿ ಡ್ಯಾಂ ಕಮ್ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಅಂಬ್ಲಮೊಗರಿನಿಂದ ಹರೇಕಳ ತನಕ ಪಾರ್ಕ್ ಮತ್ತು ವಾಕಿಂಗ್ ಟ್ರ್ಯಾಕ್ ನಿರ್ಮಾಣ ಮಾಡಿ ಜನಸಾಮಾನ್ಯರಿಗೆ ಪ್ರಯೋಜನವಾಗುವಂತೆ ಮಾಡಲಾಗಿದೆ.
ಹರೇಕಳ ಬೈತಾರ್ ನಿಂದ ಗಡುವು ತನಕ 6.5ಕೋಟಿ ರೂ. ಗಳ ಯೋಜನೆ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಅಂಬ್ಲಮೊಗರು ಭಾಗದಲ್ಲಿ 2 ಕೋಟಿ ರೂ. ಅನುದಾನ ಇಡಲಾಗಿದೆ. ಪಾವೂರು ತನಕ ಒಟ್ಟಾರೆ 20 ಕೋಟಿ ರೂ. ಯೋಜನೆ ಆಗಿದ್ದು ರಸ್ತೆ ಮತ್ತು ಸೌಂದರೀಕರಣ ಆಗಲಿದ್ದು ಅದಕ್ಕಾಗಿ 10 ಕೋಟಿ ರೂ. ಮೀಸಲಿಡಲಿದ್ದೇನೆ ಎಂದರು.
ಮೊದಲ ಹಂತದ ಯೋಜನೆಯಾಗಿ ಹಲವು ಕೋಟಿ ರೂ. ವೆಚ್ಚದ ಡ್ಯಾಂ ನಿರ್ಮಾಣದ ಮೂಲಕ ಮನೆ ಮನೆಗೂ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ. ಎರಡನೇ ಹಂತ ಪೈಪ್ ಲೈನ್ ಓವರ್ ಹೆಡ್ ಟ್ಯಾಂಕ್ ನಳ್ಳಿ ಸಂಪರ್ಕಕ್ಕೆ 240 ಕೋಟಿ ರೂ. ಮೀಸಲಿಡಲಾಗಿದೆ. ಈಗ ನಗರ ಉಳ್ಳಾಲ ಪ್ರದೇಶಕ್ಕೆ ಹೆಚ್ಚುವರಿಯಾಗಿ 160 ಕೋಟಿ ರೂ. ಅನುದಾನ ಕೇಳಲಾಗಿದೆ. ಒಟ್ಟಿನಲ್ಲಿ ಇಪ್ಪತ್ತನ್ನಾಲ್ಕು ಗಂಟೆ ಕುಡಿಯುವ ನೀರು ಸೌಲಭ್ಯ ಸಿಗಲಿದೆ. ಮುಂದಿನ ಮೂವತ್ತು ವರ್ಷಗಳ ಕಾಲ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಗಳು, ಕಾರ್ಖಾನೆಗಳು, ಸಂಸ್ಥೆಗಳು ಬಹಳಷ್ಟು ಸಂಖ್ಯೆಯಲ್ಲಿ ನಿರ್ಮಾಣಗೊಂಡರೂ ನೀರಿನ ಸಮಸ್ಯೆ ಬಾರದಂತೆ ಲೋಡ್ ಶೆಡ್ಡಿಂಗ್ ಆಗದಂತೆ ವಿದ್ಯುತ್ ಅಭಾವ ಬರದಂತೆ ಬೇರೆ ಬೇರೆ ಯೋಜನೆ ಬರಲಿದೆ ಎಂದರು.
ಕೊಂಡಾಣ ಕ್ಷೇತ್ರದ ವಿಚಾರದಲ್ಲಿ ನನ್ನ ಹಸ್ತಕ್ಷೇಪವಿಲ್ಲ
ನನ್ನ ಕ್ಷೇತ್ರದಲ್ಲಿ ಏನೇ ವಿಚಾರವಾದರೂ ಮಧ್ಯೆ ಯು.ಟಿ. ಖಾದರ್ ಹೆಸರು ಇಲ್ಲದಿದ್ದರೆ ಯಾರಿಗೂ ಸಮಾಧಾನವಿಲ್ಲ. ಭಂಡಾರಮನೆ ಪುಡಿಗೈದವರನ್ನ ಬಿಡಿಸಲು ನನ್ನ ಕೈವಾಡವಿದೆ ಎಂದು ಉಳ್ಳಾಲಕ್ಕೆ ಹೊರಭಾಗದಿಂದ ಬಂದವರು ಆರೋಪಿಸುತ್ತಿದ್ದಾರೆ. ಯಾರೇ ಆರೋಪ ಮಾಡಿದರೂ ನಾನು ಒಂದು ಸೆಂಟಿ ಮೀಟರೂ ಕುಗ್ಗುವುದಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಿದರೆ ದೇವರು ಅವರನ್ನು ಶಿಕ್ಷಿಸುವುದು ಬೇಡ, ಕ್ಷಮಿಸಲಿ. ಭಂಡಾರಮನೆ ಕಟ್ಟಡ ಅನಧಿಕೃತವೇ, ಅಧಿಕೃತವೇ ಎಂದು ಕ್ಷೇತ್ರಕ್ಕೆ ಸಂಬಂಧಿಸಿದವರು ನಿರ್ಧರಿಸಲಿದ್ದಾರೆ. ಜೆಸಿಬಿ ಮೂಲಕ ಕೆಡವಿದ್ದು ಸರಿಯಲ್ಲ. ಹಿಂದಿನ ಬಿಜೆಪಿ ಸರಕಾರವು ತರಾತುರಿಯಲ್ಲಿ ದೈವಸ್ಥಾನಗಳನ್ನೂ ಧಾರ್ಮಿಕ ಪರಿಷತ್ ಅಡಿಗೆ ತಂದಿರೋದರಿಂದಲೇ ಎಡವಟ್ಟುಗಳು ನಡೀತಿವೆ ಎಂದರು.
ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಅಬ್ದುಲ್ ಮಜೀದ್, ಪಂಚಾಯತ್ ಮಾಜಿ ಅಧ್ಯಕ್ಷ ಬದ್ರುದ್ದೀನ್, ಗುತ್ತಿಗೆದಾರ ರಫಿ ಮೊದಲಾದವರು ಉಪಸ್ಥಿತರಿದ್ದರು.
Plans to develope Harekala as tourism spot says speaker U T Khader in Mangalore. Set up of Car land in six crores to be be granted.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 02:42 pm
Mangalore Correspondent
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm