ಬ್ರೇಕಿಂಗ್ ನ್ಯೂಸ್
09-03-24 06:16 pm Mangalore Correspondent ಕರಾವಳಿ
ಮಂಗಳೂರು, ಮಾ.9: ಕೆಲವು ಕ್ಷೇತ್ರಗಳಿಂದ ಕೆಲವು ಸಚಿವರು ಸ್ಪರ್ಧಿಸಿದರೆ ಲಾಭವಾಗುತ್ತೆ ಎನ್ನುವ ಅಭಿಪ್ರಾಯವನ್ನು ಕಾರ್ಯಕರ್ತರು, ಮುಖಂಡರು ವ್ಯಕ್ತಪಡಿಸಿದ್ದಾರೆ. ಯಾರು ಸ್ಪರ್ಧೆ ಮಾಡಬೇಕು ಅನ್ನೋದನ್ನ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಸಂಪುಟದ ಸಚಿವರುಗಳು ಸ್ಪರ್ಧೆ ಮಾಡಬೇಕೋ ಬೇಡವೋ ಅನ್ನುವ ನಿರ್ಧಾರದಲ್ಲಿ ಸಿಎಂ ಅವರೂ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಸಚಿವ ಕೃಷ್ಣ ಭೇರೇಗೌಡ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಾಗಲೇ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದೇನೆ. ಮೊದಲ ಬಾರಿ 2009 ರಲ್ಲಿ ನಾನು ಶಾಸಕನಾಗಿದ್ರೂ ಪಕ್ಷದ ಸೂಚನೆಯಂತೆ ಸ್ಪರ್ಧಿಸಿದ್ದೆ. ಆ ಸಂದರ್ಭದಲ್ಲಿ ಕೇವಲ ಪಕ್ಷದ ಸೂಚನೆ ಪಾಲಿಸಲು ಸ್ಪರ್ಧಿಸಿದ್ದೆ. 2019 ರ ಚುನಾವಣೆಯಲ್ಲೂ ಕೊನೆ ಕ್ಷಣದಲ್ಲಿ ಪಕ್ಷದ ಸೂಚನೆಗೆ ಗೌರವ ಕೊಟ್ಟು ಸ್ಪರ್ಧಿಸಿದ್ದೆ. ಎರಡು ಬಾರಿಯೂ ಚುನಾವಣೆಯಲ್ಲಿ ಸೋತಿದ್ದೇನೆ.
ಪಕ್ಷ ಹೇಳಿದಂತೆ ಎರಡು ಬಾರಿ ಸ್ಪರ್ಧಿಸಿದ್ದು ಕರ್ತವ್ಯ ನಿರ್ವಹಿಸಿದ್ದೇನೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಯಾವುದೇ ಇಚ್ಛೆಯನ್ನು ಹೊಂದಿಲ್ಲ. ಈಗಾಗಲೇ ಪಕ್ಷದ ವರಿಷ್ಠರಿಗೆ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ವರಿಷ್ಠರೂ ಕೂಡ ನನ್ನ ಅಭಿಪ್ರಾಯಕ್ಕೆ ಗೌರವ ಕೊಟ್ಟಿದ್ದಾರೆ ಅಂತ ತಿಳಿದಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಎರಡೂ ಬಾರಿ ನನಗೆ ಮನಸಿಲ್ಲದಿದ್ದರೂ ಪಕ್ಷದ ಸೂಚನೆ ಮೇರೆಗೆ ಸ್ಪರ್ಧಿಸಿದ್ದೇನೆ. ಪದೇ ಪದೇ ಈ ರೀತಿ ಸೂಚನೆ, ಒತ್ತಡ ನೀಡುವುದು ಸೂಕ್ತವಲ್ಲ. ಈಗಾಗಲೇ ಎಐಸಿಸಿ ಪ್ರತಿನಿಧಿಗಳಿಗೂ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಎರಡು ಸಲ ಸ್ಪರ್ಧಿಸಿ ಪಕ್ಷಕ್ಕೆ ನನ್ನ ಋಣ ತೀರಿಸಿದ್ದೇನೆ ಎಂದು ಭೈರೇಗೌಡ ಹೇಳಿದ್ದಾರೆ.
ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಹಾಗು ಕೆಫೆ ಬಾಂಬ್ ಪ್ರಕರಣದ ತನಿಖೆಯ ಕುರಿತ ಪ್ರಶ್ನೆಗೆ, ಬಿಜೆಪಿಯವರು ಎಲ್ಲಾ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ. ಬಿಜೆಪಿಯವರು ಏನು ಹೇಳುತ್ತಾರೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ವಾಸ್ತವಾಂಶದ ಆಧಾರದಲ್ಲಿ ಸರಕಾರ ಎಲ್ಲಾ ಕ್ರಮ ಕೈಗೊಳ್ಳುತ್ತದೆ. ಕಾನೂನು ವ್ಯವಸ್ಥೆ ಕಾಪಾಡಲು ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ. ಈ ಘಟನೆಗಳು ಬಿಜೆಪಿಯವರಿಗೆ ಚುನಾವಣೆಯ ವಿಷಯವಾಗಿಸಬಹುದು. ಆದರೆ ನಮಗೆ ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಮುಂದಿನ ಚುನಾವಣೆಯ ವಿಷಯ. ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟು ಬಿಜೆಪಿ ಯವರು ಚುನಾವಣೆಗೆ ಹೋಗುತ್ತಾರೆ. ಸಮಾಜವನ್ನು ಒಡೆಯುತ್ತಾರೆ. ನಾವು ಹಾಗೆ ಮಾಡೋದಿಲ್ಲ ಎಂದರು.
Not contesting for Lok Sabha says Minister Krishna Bhairegowda in Mangalore.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm