ಬ್ರೇಕಿಂಗ್ ನ್ಯೂಸ್
10-03-24 12:03 pm Mangalore Correspondent ಕರಾವಳಿ
ಉಳ್ಳಾಲ, ಮಾ.10: ಕಾಟೇರ ಸಿನೆಮಾ ಯಶಸ್ಸಿನ ಸಂಭ್ರಮದಲ್ಲಿರುವ ಅಭಿಮಾನಿಗಳ ಪಾಲಿನ ದಾಸ, ನಟ ದರ್ಶನ್ ತೂಗುದೀಪ್ ಸುಮಲತಾ ಅಂಬರೀಶ್ ಪರ ಈ ಬಾರಿಯೂ ಪ್ರಚಾರ ನಡೆಸುವುದು ಪಕ್ಕಾ ಆಗಿದೆ. ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ದರ್ಶನ್ ರಲ್ಲಿ ಈ ಬಗ್ಗೆ ಮಾಧ್ಯಮ ಮಂದಿ ಪ್ರಶ್ನಿಸಿದ್ದಕ್ಕೆ ಗರಂ ಆದ ನಟ, ಹೆತ್ತ ತಾಯಿಯನ್ನು ಯಾರಾದರೂ ಬಿಟ್ಟು ಕೊಡ್ತಾರೆಯೇ ಅಂತ ಮರು ಪ್ರಶ್ನಿಸಿದ್ದಾರೆ. ಇದು ಧಾರ್ಮಿಕ ಕ್ಷೇತ್ರ. ಇಲ್ಲೆಲ್ಲ ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
ಭಾನುವಾರ ಬೆಳಗ್ಗೆ ನಟ ದರ್ಶನ್ ಅವರು ಮಂಗಳೂರು ಹೊರವಲಯದ ಕುತ್ತಾರಿನ ಕೊರಗಜ್ಜ ದೈವದ ಆದಿಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಾಧ್ಯಮದವರು ದರ್ಶನ್ ಅವರಲ್ಲಿ ಕೊರಗಜ್ಜನಲ್ಲಿ ಪ್ರಾರ್ಥನೆ ಮಾಡಿ ಏನ್ ಬೇಡಿಕೆ ಸಲ್ಲಿಸಿದ್ರಿ ಎಂದು ಪ್ರಶ್ನಿಸಿದ್ದಕ್ಕೆ ಬೇಡಿಕೆ ನಿಮ್ಮಲ್ಲಿ ಹೇಳಿದ್ರೆ ನೀವು ನೆರವೇರಿಸ್ತೀರಾ ಎಂದು ಮಾಸ್ ಆಗಿ ಉತ್ತರಿಸಿದ್ದಾರೆ. ಸುಮಲತಾ ಪರ ಪ್ರಚಾರದ ಬಗ್ಗೆ ಕೇಳಿದ್ದಕ್ಕೆ ಗರಂ ಆಗಿ ಮುನ್ನಡೆದಿದ್ದು ಹೆತ್ತ ತಾಯಿನ ನೀವಾದರೂ ಬಿಟ್ಟು ಕೊಡ್ತೀರಾ ಸರ್ ಎಂದು ಮಾಧ್ಯಮದವರನ್ನ ಪ್ರಶ್ನಿಸಿದ್ದಾರೆ. ಮೊನ್ನೆವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ. ಈಗ ಅವರ ಕೈ ಬಿಟ್ರೆ ಆಗುತ್ತಾ ,ಅಮ್ಮ ಅಮ್ಮನೆ ಸರ್ ಎಂದಿದ್ದಾರೆ.




ಬಹಳಷ್ಟು ಸ್ನೇಹಿತರು ಕೊರಗಜ್ಜನ ಬಗ್ಗೆ ಹೇಳಿದ್ದರು. ಮಂಗಳೂರಿಗೆ ಅನೇಕ ಬಾರಿ ಬಂದರೂ ಇವತ್ತೇ ಮೊದಲ ಬಾರಿ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದು ತುಂಬ ಖುಷಿ ಆಗಿದೆ ಎಂದರು. ದೈವಾರಾಧನೆಯ ಚಿತ್ರ ನಿರ್ಮಾಣದ ಬಗ್ಗೆ ಯೋಜನೆ ಇಲ್ಲ ಎಂದರು. ಚಿತ್ರ ನಟ ಚಿಕ್ಕಣ್ಣ ದರ್ಶನ್ ಜತೆಗಿದ್ದರು. ಕೊರಗಜ್ಜನ ಕ್ಷೇತ್ರದ ಆಡಳಿತ ಮಂಡಳಿ ಮುಖ್ಯಸ್ಥರು ನಟರನ್ನ ಶಾಲು ಹೊದಿಸಿ ಸನ್ಮಾನಿಸಿದರು.
Kannada actor Darshan visits koragajja temple at kuthar in Mangalore. Comes to pray for the success of Sumalatha for her upcoming elections.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm