ಬ್ರೇಕಿಂಗ್ ನ್ಯೂಸ್
10-03-24 07:46 pm Mangalore Correspondent ಕರಾವಳಿ
ಉಳ್ಳಾಲ, ಮಾ.10: ಪತ್ನಿಯಿಂದ ದೂರವಾಗಿದ್ದ ವ್ಯಕ್ತಿಯೋರ್ವನ ಶವ ಕೊಳೆತು ನೇಣು ಬಿಗಿದ ಸ್ಥಿತಿಯಲ್ಲಿ ಕುಂಪಲದ ಕುಜುಮ ಗದ್ದೆಯ ಒಂಟಿ ಮನೆಯಲ್ಲಿ ಪತ್ತೆಯಾಗಿದೆ. ಕುಂಪಲದ ರೂಪದರ್ಶಿ ಪ್ರೇಕ್ಷಾ ಆತಹತ್ಯೆಗೆ ಇಂದಿಗೆ ಮೂರು ವರ್ಷ ಸಲ್ಲುತ್ತಿದ್ದ ದಿನವೇ ಮತ್ತೊಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದೆ.
ಕುಂಪಲ, ಕುಜುಮ ಗದ್ದೆ ನಿವಾಸಿ ಕಿರಣ್ ಕುಮಾರ್ (48) ಮೃತ ವ್ಯಕ್ತಿ. ಕಿರಣ್ ವಿವಾಹಿತರಾಗಿದ್ದು 17 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಇದೇ ಕೊರಗಿಂದ ಕಿರಣ್ ವಿಪರೀತ ಮದ್ಯ ಸೇವಿಸಿ ಪತ್ನಿಯಲ್ಲಿ ಜಗಳ ಮಾಡುತ್ತಿದ್ದರಂತೆ. ಪತ್ನಿ ಉದ್ಯೋಗಕ್ಕೆ ತೆರಳಲೂ ತಗಾದೆ ತೆಗೆಯುತ್ತಿದ್ದು ಗಂಡನ ನಡವಳಿಕೆಯಿಂದ ಬೇಸತ್ತ ಪತ್ನಿ ಕಳೆದ ನಾಲ್ಕು ವರುಷಗಳ ಹಿಂದೆಯೇ ಗಂಡನ ತೊರೆದು ತವರು ಸೇರಿದ್ದರು.


ಒಬ್ಬಂಟಿಯಾಗಿ ಮನೆಯಲ್ಲಿ ನೆಲೆಸಿದ್ದ ಕಿರಣ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಆದಿತ್ಯವಾರ ಪಿಲಾರಿನಲ್ಲಿ ನಡೆದಿದ್ದ ಪಂಜಂದಾಯ ದೈವದ ವಾರ್ಷಿಕ ನೇಮೋತ್ಸವದಲ್ಲೂ ಕಿರಣ್ ಭಾಗವಹಿಸಿ ದೈವದ ಗಂಧ ಪಡೆದಿದ್ದರು. ಗುರುವಾರ ರಾತ್ರಿ ಮನೆ ಸೇರಿದ್ದ ಕಿರಣ್ ಮತ್ತೆ ಹೊರ ಬಂದಿರಲಿಲ್ಲ. ಇಂದು ಬೆಳಗ್ಗೆ ಪರಿಸರದ ಜನರಿಗೆ ಗಬ್ಬು ವಾಸನೆ ಬಡಿದಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಸಮಕ್ಷಮದಲ್ಲಿ ಸ್ಥಳೀಯ ಪುರಸಭಾ ಸದಸ್ಯ ದೀಪಕ್ ಪಿಲಾರ್ ಮನೆ ಬಾಗಿಲು ಮುರಿದಾಗ ಮನೆ ಛಾವಣಿಗೆ ನೇಣುಬಿಗಿದ ಸ್ಥಿತಿಯಲ್ಲಿ ಕಿರಣ್ ಅವರ ಕೊಳೆತ ಶವ ಪತ್ತೆಯಾಗಿದೆ. ಉಳ್ಳಾಲ ಪೊಲೀಸರು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮೂರು ವರ್ಷದ ಹಿಂದೆ ಕುಂಪಲ ಆಶ್ರಯ ಕಾಲನಿ ನಿವಾಸಿ ಪ್ರೇಕ್ಷಾ ತನ್ನ ಪ್ರಿಯಕರನ ಮಾನಸಿಕ ಹಿಂಸೆಯಿಂದ ನೊಂದು ಮಾ.10 ರಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು. ಪ್ರೇಕ್ಷಾ ಆತ್ಮಹತ್ಯೆಗೂ ಹಿಂದಿನ ವಾರ ಪಿಲಾರು ಪಂಜಂದಾಯನ ನೇಮೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದಳೆಂಬುದು ಇಲ್ಲಿ ಉಲ್ಲೇಖನೀಯ.
ಪ್ರೇಕ್ಷಾ ಸಾವಿನ ನಂತರ ಕುಂಪಲ ಪ್ರದೇಶದಲ್ಲಿ ಸಾಲು ಸಾಲಾಗಿ ಯುವಕ, ಯುವತಿಯರ ಸರಣಿ ಆತ್ಮಹತ್ಯೆಗಳೇ ನಡೆದು ಹೋಗಿವೆ. ಕಳೆದ ವರ್ಷ ಮೇ 10 ರಂದು ಪ್ರೇಕ್ಷಾ ಸಾವಿಗೆ ಪ್ರಚೋದನೆ ನೀಡಿದ್ದ ಯತಿರಾಜ್ ಗಟ್ಟಿ(20) ಕೂಡ ಖಿನ್ನತೆಯಿಂದ ನೇಣು ಬಿಗಿದು ಸಾವನ್ನಪ್ಪಿದ್ದ. ವಾರದ ಹಿಂದಷ್ಟೆ ಆಶ್ರಯ ಕಾಲನಿಯ ಧನರಾಜ್ ಪೂಜಾರಿ(32)ಎಂಬ ಯುವಕನೂ ನೇಣು ಬಿಗಿದು ಸಾವನ್ನಪ್ಪಿದ್ದ.
Mangalore 48 year old commits suicide in kumpala on the day roopshree committed suicide. The deceased has been identified as Kiran kumar. It is said he was far from his wife and was staying alone at the house. Reason for this extreme step is yet to be know.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm