ಬ್ರೇಕಿಂಗ್ ನ್ಯೂಸ್
12-03-24 06:48 pm Mangalore Correspondent ಕರಾವಳಿ
ಮಂಗಳೂರು, ಮಾ.12: ಬಿಲ್ಲವ ಅಭ್ಯರ್ಥಿಗಳನ್ನು ಪಕ್ಷ ಭೇದ ನೋಡದೆ ಸಮುದಾಯದ ಜನರು ಗೆಲ್ಲಿಸಬೇಕು ಎಂಬ ಹೇಳಿಕೆ ವಿವಾದಕ್ಕೆ ತಿರುಗುತ್ತಲೇ ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಸ್ಪಷ್ಟನೆ ನೀಡಿದ್ದಾರೆ.
ಮೂಲ್ಕಿಯಲ್ಲಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ವತಿಯಿಂದ ಕಾರ್ಯಕ್ರಮ ನಡೆದಿತ್ತು. ಅಲ್ಲಿ ಕುಳಿತಿದ್ದ ಇಬ್ಬರು ಬಿಲ್ಲವ ಮಹಾಮಂಡಲದ ನಾಯಕರಿಗೆ ನನ್ನ ಪ್ರಶ್ನೆ ಇತ್ತು. ನೀವು ಸಮುದಾಯದ ಅಭ್ಯರ್ಥಿಗಳಿಗೆ ನೈತಿಕ ಬೆಂಬಲ ನೀಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದೆ. ಸುನಿಲ್ ಕುಮಾರ್, ನಾನು, ಸತೀಶ್ ಕುಂಪಲ ಹೆಸರನ್ನು ಉಲ್ಲೇಖಿಸಿ ಪ್ರಶ್ನೆಯನ್ನು ಮಾಡಿದ್ದೆ. ಆ ಸಂದರ್ಭದಲ್ಲಿ ರಕ್ಷಿತ್ ಶಿವರಾಂ ಹೆಸರೂ ಬಂದಿತ್ತು.
ಆದರೆ ಈ ಹೇಳಿಕೆಯನ್ನು ವಿಘ್ನ ಸಂತೋಷಿಗಳು ತಿರುಚಿದ್ದಾರೆ. ನನ್ನ ಪೂರ್ತಿ ಮಾತನ್ನು ಕೇಳಬೇಕು ನೀವು. ನಾನು ಬಿಲ್ಲವ ಸಮುದಾಯಕ್ಕೆ ಕರೆ ಕೊಟ್ಟು ಮಾತಾಡಿಯೇ ಇಲ್ಲ. ನಾನು ಮತ್ತು ಹರೀಶ್ ಪೂಂಜ ಅಣ್ಣ ತಮ್ಮಂದಿರು. ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಗೆಲ್ಲಿಸಬೇಕಿತ್ತು ಎಂದು ನಾನೆಲ್ಲೂ ಹೇಳಿಲ್ಲ. ನಾವು ಬಿಲ್ಲವರು ಚುನಾವಣೆಗೆ ನಿಂತಾಗ ನೀವು ಬಿಲ್ಲವ ಮಹಾಮಂಡಲ ನೈತಿಕ ಬೆಂಬಲ ಕೊಟ್ಟಿದ್ದೀರಾ ಎಂದು ಅಲ್ಲಿದ್ದವರಿಗೆ ಪ್ರಶ್ನೆ ಮಾಡಿದ್ದೇ ವಿನಾ ಬೇರಾವುದೇ ಮಾತು ಹೇಳಿಲ್ಲ. ನನಗೆ ಚುನಾವಣೆ ಸಂದರ್ಭದಲ್ಲಿ ಹಿಂದು, ಕ್ರಿಸ್ತಿಯನ್, ಮುಸ್ಲಿಂ, ಬಂಟ, ಬಿಲ್ಲವ, ಕುಲಾಲ್ ಎಲ್ಲರೂ ಬೆಂಬಲ ಕೊಟ್ಟಿದ್ದಾರೆ. ಹಣಕಾಸಿನ ಬೆಂಬಲವನ್ನೂ ಕೊಟ್ಟಿದ್ದಾರೆ.
ನಾನೊಬ್ಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ. ಬಿಜೆಪಿಯ ನಿಷ್ಠಾವಂತ ಕೆಲಸಗಾರನಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನನ್ನ ಗುರಿ. ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಉಮಾನಾಥ ಕೋಟ್ಯಾನ್ ಮಾಧ್ಯಮದ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ. ಬಿಲ್ಲವ ಮಹಾಮಂಡಲದ ಕಾರ್ಯಕ್ರಮದಲ್ಲಿ ಉಮಾನಾಥ ಕೋಟ್ಯಾನ್ ಆಡಿದ್ದ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು.
Mangalore My statement has been turned By Vighna Santoshi says Umanatha Kotian. Umanatha Kotian statement to support billavas had sparked controversy in Mangalore.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm