ಬ್ರೇಕಿಂಗ್ ನ್ಯೂಸ್
17-03-24 05:20 pm Mangalore Correspondent ಕರಾವಳಿ
ಪುತ್ತೂರು, ಮಾ.17: ಪುತ್ತೂರಿನಲ್ಲಿ ಬಿಜೆಪಿ ಯಾವತ್ತೂ ಸೋಲೋದಿಲ್ಲ ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗಬೇಕು. ಪಕ್ಷದ ಸೂಚನೆಯನ್ನು ಯಥಾವತ್ ಪಾಲಿಸಿ ನರೇಂದ್ರ ಮೋದಿಯವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಾವೆಲ್ಲ ಹೊತ್ತುಕೊಳ್ಳಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದ್ದಾರೆ.
ನಿನ್ನೆಯಷ್ಟೇ ಬಿಜೆಪಿ ಜೊತೆ ಪುತ್ತಿಲ ಪರಿವಾರ ವಿಲೀನಗೊಂಡಿದ್ದು ಅಸೆಂಬ್ಲಿ ಚುನಾವಣೆಯ ಜಟಾಪಟಿ ಬಳಿಕ ಮೊದಲ ಬಾರಿಗೆ ಪುತ್ತೂರು ಬಿಜೆಪಿ ಕಚೇರಿಗೆ ಅರುಣ್ ಪುತ್ತಿಲ ಭೇಟಿ ನೀಡಿದರು.

ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದೆ ಒಂದಷ್ಟು ಗೊಂದಲ ಆಗಿರುವುದು ಸಹಜ. ನಾವೆಲ್ಲ ಅದನ್ನು ಒಪ್ಪಿಕೊಳ್ಳುತ್ತೇವೆ. ಎರಡು ಭಾಗಗಳಿಂದಲೂ ನೋವು ಆಗಿರುವುದು ಸಹಜ. ಆದರೆ ಆ ನೋವುಗಳನ್ನು ನಾವೆಲ್ಲ ಇವತ್ತು ಮರೆತಿದ್ದೇವೆ. ನಾವೆಲ್ಲ ಅಣ್ಣ ತಮ್ಮಂದಿರ ಮತ್ತು ಅಕ್ಕ ತಂಗಿಯರ ರೀತಿಯಲ್ಲಿ ಮುಂದಿನ ದಿನ ಪಕ್ಷಕ್ಕಾಗಿ ಕೆಲಸ ಮಾಡಲು ಬದ್ಧರಿದ್ದೇವೆ. ಪಕ್ಷದ ಸೂಚನೆಯನ್ನು ಪಾಲಿಸಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಮಾಡಲಿದ್ದೇವೆ ಎಂದರು.
ಇವತ್ತು ನಾವೆಲ್ಲ ಕಾರ್ಯಾಲಯದಲ್ಲಿ ಭಾಗಿಯಾಗಿ ಮುಕ್ತ ಮನಸ್ಸಿನಿಂದ ಜೊತೆಯಾಗಿದ್ದೇವೆ. ಈ ರೀತಿಯ ವಾತಾವರಣ ಮುಂದಿನ ನೂರಾರು ವರ್ಷಗಳ ಕಾಲ ಇರಲಿ. ಪುತ್ತೂರಿನಲ್ಲಿ ಬಿಜೆಪಿ ಯಾವತ್ತು ಸೋಲೋದಿಲ್ಲ ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗಲಿ. ಈ ಕ್ಷಣದಿಂದಲೇ ನಾವೆಲ್ಲ ಪಕ್ಷ ಕೊಟ್ಟಿರುವ ಕೆಲಸವನ್ನು ನಿರ್ವಹಿಸಿಕೊಂಡು ನಾಳಿನ ದಿನ ಚುನಾವಣೆಯಲ್ಲಿ ಬ್ರಿಜೇಶ್ ಚೌಟ ಅವರನ್ನು ನಾಲ್ಕು ಲಕ್ಷ ಅಧಿಕ ಮತಗಳಿಂದ ಗೆಲ್ಲಿಸುವ ಯೋಚನೆ ಕಾರ್ಯಕರ್ತರು ಮಾಡಿದರೆ ಯಾವುದೇ ಕಾರ್ಯ ಕಷ್ಟವಾಗುವುದಿಲ್ಲ ಎಂದರು. ಇವತ್ತು ಸಾಮಾಜಿಕ ಜಾಲತಾಣ ಬಹಳ ಪ್ರಬಲವಾಗಿದೆ. ಹಾಗಾಗಿ ಪಕ್ಷದ ವಿಚಾರದಲ್ಲಿ ನಮ್ಮ ಸಂಘ, ನಾಯಕರ ವಿರುದ್ಧ ಯಾರು ಕೂಡ ವೈಯುಕ್ತಿಕ ವಿಚಾರ ಮುಂದಿಟ್ಟು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಸಂದೇಶ ರವಾನಿಸಬಾರದು. ಸಾಮಾಜಿಕ ಜಾಲತಾಣದ ವಿಷಯ ಬಿಟ್ಟು ನಾವೆಲ್ಲ ನಮ್ಮ ಬೂತ್ ನಲ್ಲಿ ಕಾರ್ಯ ಮಾಡಬೇಕು ಎಂದರು.
Puttur Arun Puthila to BJP, BJP will never lose in Puttur. He said I am back to BJP so let's forget all the past and concentrate on the upcoming Elections.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm