ಬ್ರೇಕಿಂಗ್ ನ್ಯೂಸ್
18-03-24 04:58 pm Mangalore Correspondent ಕರಾವಳಿ
ಮಂಗಳೂರು, ಮಾ.18: ಮೋದಿ ಚುನಾವಣಾ ಬಾಂಡ್ ಬಗ್ಗೆ ಯಾಕೆ ಗೌಪ್ಯವಾಗಿಟ್ಟಿದ್ರಿ. 320 ಎಂಪಿಗಳಿದ್ದಾರೆ, ಅದನ್ನು ಹಂಚಿದ್ರೆ ಕಡಿಮೆ ಬರತ್ತೆ ಅಂತಾರೆ. ಮನ್ ಕಿ ಬಾತ್‌ನಲ್ಲಿ ನೀವು ಯಾಕೆ ಸತ್ಯ ಹೇಳಲ್ಲ. ಲಾಟರಿ ಮಾರ್ಟಿನ್ ಬಳಿ ಹಣ ತಗೊಂಡಿದ್ದನ್ನು ನೀವ್ಯಾಕೆ ಹೇಳಿಲ್ಲ? ಲಾಟರಿ ಕಂಪನಿ ಒಂದು ಸಾವಿರ ಕೋಟಿ ಲಂಚ ಕೊಟ್ಟಿದೆ. ಐನೂರು ಕೋಟಿ ಲಂಚ ಕೊಟ್ಟವರಿಗೆ ಒಂದೂವರೆ ಸಾವಿರ ಕೋಟಿ ಕಾಂಟ್ರಾಕ್ಟ್ ಕೊಡ್ತೀರಿ ಅಂದ್ರೆ ಏನರ್ಥ? ಈ ದುಡ್ಡಿನಲ್ಲಿ ಶಾಸಕರನ್ನು ಖರೀದಿಸ್ತೀರಾ ? ನೀವು ಡ್ರೆಸ್ ಖರೀದಿ ಮಾಡ್ತೀರಾ ? ಹೀಗೆಂದು ಬಹುಭಾಷಾ ನಟ ಪ್ರಕಾಶ್ ರೈ ಪ್ರಧಾನಿ ಮೋದಿಯನ್ನು ಪ್ರಶ್ನೆ ಮಾಡಿದ್ದಾರೆ.
ಖಾಸಗಿ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ಬಂದಿದ್ದ ಪ್ರಕಾಶ್ ರೈ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ನೀವು ಇಲೆಕ್ಟೋರಲ್ ಬಾಂಡ್ ಕೊಟ್ಟವರಿಗೆ ಕಾಂಟ್ರಾಕ್ಟ್ ಕೊಡ್ತೀರಿ. ಇಡಿ ರೇಡ್ ಆದ ಕಂಪನಿ ಮಾರನೇ ದಿನವೇ 200 ಕೋಟಿ ಇಲೆಕ್ಟೋರಲ್ ಬಾಂಡ್ ತಕೊಂಡ್ರೆ ಓಕೇನಾ.. ನಿಮ್ಮಲ್ಲಿ ಯಾಕೆ ಇಡಿ ರೇಡ್ ಆಗಲ್ಲ, ನೀವು ದುಡ್ಡು ತಗೋತಿಲ್ವಾ.. ಅದನ್ನು ನಾವು ಕೇಳಬಾರದಾ ? ನಿಮ್ಮ ಮನ್ ಕಿ ಬಾತ್ ನಲ್ಲಿ ಅದನ್ನೆಲ್ಲ ಹೇಳುತ್ತೀರಾ? ಮೋದಿಯವರನ್ನು ಮಹಾಪ್ರಭುಗಳು ಅಂತೇನೆ,
ಹೆಸರು ಕರೆದ್ರೆ ಅವರಿಗೆ ಬೇಜಾರಾಗುತ್ತೆ. ನಾ ಖಾವೂಂಗಾ ನಾ ಖಾನೆ ದೂಂಗಾ ಅಂತಾರೆ, ನಿಮ್ಮಲ್ಲಿ ಭ್ರಷ್ಟಾಚಾರ ನಡೀತಿದೆಯಲ್ಲಾ, ಅದರರ್ಥ ನೀವೂ ಸರಿಯಿಲ್ಲ ಅಂತಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ.
ಚುನಾವಣೋತ್ತರ ಸಮೀಕ್ಷೆ ಎನ್ನೋದು ವ್ಯಾಪಾರ ಇದ್ದಂತೆ. ಹಣ ಕೊಟ್ಟು ಮಾಡಿಸುವಂಥ ಸಮೀಕ್ಷೆ ಗಳು ಇವು. ಅವನ್ನು ಯಾರೂ ನಂಬಬಾರದು. ಇವತ್ತು ಯಾವ್ದಾದ್ರೂ ಪತ್ರಿಕೆ ಓಪನ್ ಮಾಡ್ತಾರಂದ್ರೆ ಯಾವ ಪಕ್ಷದ್ದು ಅಂತ ಗೊತ್ತಾಗುತ್ತದೆ. ಅಂಥ ಸ್ಥಿತಿಯಿದೆ. ಚುನಾವಣೆಯಲ್ಲಿ ಒಳ್ಳೆಯ ಅಭ್ಯರ್ಥಿಗಳು ಗೆದ್ರೆ ನೀವು ಗೆದ್ದಂತೆ, ಅದಕ್ಕಾಗಿ ಒಳ್ಳೆಯ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಂತ ಹೇಳುತ್ತೇನೆ. ನಾನು ಚುನಾವಣೆ ನಿಲ್ಲಲ್ಲ, ಯಾವ ಪಕ್ಷದ ಪರವೂ ಪ್ರಚಾರವನ್ನೂ ಮಾಡಲ್ಲ. ಜನರ ಪಕ್ಷ ನಾವು, ಎಲ್ಲಾ ಪಕ್ಷದವರು ಒಂದೇ, ಅವನ ಬಿಲ್ಡಿಂಗಲ್ಲಿ ಇವನ ಬಾರಿದೆ, ಎಲ್ಲ ಪಕ್ಷದ ನಾಯಕರಲ್ಲು ಹೊಂದಾಣಿಕೆ ಇದೆ ಎಂದು ವ್ಯಾಖ್ಯಾನಿಸಿದರು.

ಮೋದಿ ಪರಿವಾರ ಬಗ್ಗೆ ವಾಗ್ದಾಳಿ ನಡೆಸಿದ ಪ್ರಕಾಶ ರೈ, ಇವರ ಪರಿವಾರ ಏನಂತ ಗೊತ್ತಾಯ್ತಲ್ಲ, ಲಾಟ್ರಿ ಮಾರೋ ಮಾರ್ಟಿನ್ ಇವರ ಪರಿವಾರ. ನಿಮ್ಮದು ಫಾರ್ಮಾ ಕಂಪನಿ, ಅದಾನಿ ಪರಿವಾರ, ರೇಪ್ ಮಾಡಿರುವ ಬ್ರಿಜ್ ಭೂಷಣ್ ನಿಮ್ಮ ಪರಿವಾರ. ಮಣಿಪುರದ ಹೆಣ್ಮಕ್ಕಳ ಬಗ್ಗೆ ಮಾತಾಡಲ್ಲ, ಮಹಿಳಾ ದಿನದಂದು ಗ್ಯಾಸ್ ಗೆ ನೂರು ರೂ. ಕಡಿಮೆ ಮಾಡ್ತಾರೆ. ಎರಡು ರೂ. ಪೆಟ್ರೋಲ್ ಕಡಿಮೆ ಮಾಡಿದ್ರಲ್ಲಿ ಅರ್ಥ ಇದೆಯಾ?ಇಲೆಕ್ಟೊರಲ್ ಬಾಂಡ್ ಮೂಲಕ 12 ಸಾವಿರ ಕೋಟಿಯಂತೆ, ನಮಗೆ ಅದಕ್ಕೆ ಸೊನ್ನೆ ಎಷ್ಟು ಅಂತ ಗೊತ್ತಾಗಲ್ಲ, ಚುನಾವಣೆ ಗೆಲ್ಲೋಕೆ ಬಾಂಡ್ ಮಾಡಿದೀರಿ. ದೇಶದ ಜನರಿಗೆ ಕೆಲಸ ಕೊಟ್ಟಿದ್ದೀರೋ ಇಲ್ವೋ ಗೊತ್ತಿಲ್ಲ, ಆದರೆ ನಿಮ್ಮ ಮನೆಯ ಟೈಲರಿಗಂತೂ ಕೆಲಸ ಕೊಟ್ಟಿದೀರಿ ಎಂದು ಮೋದಿ ಹೆಸರೆತ್ತದೆ ಕುಟುಕಿದರು. ಮಹಾಪ್ರಭುಗಳೇ ಇಂಟರ್ ನೆಟ್ ನ ಒಂದು ಜಿಬಿಗೆ ಹತ್ತು ರೂ. ಆಗಿದ್ದು ನೀವು ಮಾಡಿದ್ದಾ ? ಅದು ಪ್ರಗತಿ, ವಿಜ್ಞಾನ ಬೆಳೆದಂತೆ ವಸ್ತುಗಳ, ಸವಲತ್ತುಗಳ ಬೆಲೆ ಕಮ್ಮಿಯಾಗತ್ತೆ. ನೀವು ಎಲ್ಲವನ್ನೂ ಸುಳ್ಳು ಹೇಳ್ಕಂಡು ತಿರುಗೋದು ತಪ್ಪು. ಜನರನ್ನು ಹೀಗೆಲ್ಲಾ ಮಂಗ ಮಾಡಬಾರದು ಎಂದರು.
420 ಗಳು ಯಾವಾಗಲೂ ಈ ಬಾರಿ ನಾವು 400 ದಾಟುತ್ತೇವೆ ಎಂದು ಹೇಳ್ತಾರೆ. ಏನು ಇದು ಅಹಂಕಾರ ಅಲ್ವಾ ? ನೀವ್ಯಾರ್ರೀ ಅದನ್ನು ಹೇಳೋಕೆ. ಯಾಕೆ ಪ್ರಜಾಪ್ರಭುತ್ವ ಇರೋದು, ಹೀಗೆ ಬಂಗಾಳ, ಕರ್ನಾಟಕದಲ್ಲಿ ಹೇಳಿದ್ರಿ ಆಯ್ತಾ? ಈಗ ತಮಿಳುನಾಡಿನಲ್ಲಿ ಹೇಳಿದ್ರಿ, ಅಲ್ಲಿ ಆಯ್ತಾ ಆಗಿಲ್ಲ. ಸುಮ್ನೆ ಬಾಯಿಗೆ ಬಂದಂಗೆ ಹೇಳ್ಕಂಡು ಬರ್ತೀರಿ, ಸಾವಿರಾರು ಕೋಟಿ ಹಣ ಇದೆಯಂತ ಧೈರ್ಯಾನಾ ? ಹಣ ಬಲದಿಂದ ಗೆದ್ದೇ ಗೆಲ್ಲುತ್ತೇವೆ ಅಂತ ದೈರ್ಯನಾ? ಧರ್ಮವನ್ಬು ದುರುಪಯೋಗ ಪಡಿಸಿ , ಮತಗಳನ್ನು ದುಡ್ಡು ಕೊಟ್ಟು ಖರೀದಿಸ್ತೀವಿ ಅಂತ ಧೈರ್ಯಾನಾ? ಸುಮ್ನೆ ಇಮೇಜ್ ಸೃಷ್ಟಿಸೋಕಷ್ಟೆ ಹೇಳಿಕೊಂಡು ತಿರುಗ್ತೀರಿ ಎಂದು ಟೀಕಿಸಿದರು.
Without mentioning the BJP by name, Actor Prakash Raj said on Sunday that those who have done 420 (fraud) are talking about winning 400 seats in the upcoming general elections. Speaking at the Mangalore Press Club in Karnataka, Prakash Raj said, "Only those who have done 420 will speak about getting 400 seats. Be it any party, the Congress or any other party, this reflects your arrogance."
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm