ಬ್ರೇಕಿಂಗ್ ನ್ಯೂಸ್
26-03-24 12:06 pm Mangalore Correspondent ಕರಾವಳಿ
ಪುತ್ತೂರು, ಮಾ.26: ಕುಕ್ಕೆ ಸುಬ್ರಹ್ಮಣ್ಯ ಬಳಿಯ ಐನೆಕಿದು ಗ್ರಾಮದ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದ ಅನುಮಾನದಲ್ಲಿ ಸುಬ್ರಹ್ಮಣ್ಯ ಠಾಣೆ ಪೊಲೀಸರು ನಾಲ್ವರ ವಿರುದ್ಧ ಎಫ್ಐ ಆರ್ ದಾಖಲಿಸಿದ್ದಾರೆ.
ಈ ಬಗ್ಗೆ ನಕ್ಸಲ್ ನಿಗ್ರಹ ದಳ, ಕಾರ್ಕಳ ವಿಭಾಗೀಯ ಎಸ್ ಪಿ ಜಿತೇಂದ್ರ ಮಾಹಿತಿ ನೀಡಿದ್ದಾರೆ, ರೈತ ಅಶೋಕ್ ಎಂಬವರ ಮನೆಗೆ ಬಂದಿದ್ದ ಶಂಕಿತ ನಕ್ಸಲರು ಅವರ ಮನೆಯಿಂದ ಅಕ್ಕಿ, ಮೆಣಸಿನಕಾಯಿ ಹಾಗೂ ಇನ್ನಿತರ ದಿನಸಿ ಪದಾರ್ಥಗಳನ್ನು ಕೊಂಡೊಯ್ದಿದ್ದಾರೆ ಎಂದು ಹೇಳಿದ್ದಾರೆ.
ಶನಿವಾರ ಸಂಜೆ 6.30 ಕ್ಕೆ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ನಮ್ಮ ಮನೆಗೆ ಬಂದಿದ್ದರು. ಓರ್ವ ಮಹಿಳೆ 30-35 ವರ್ಷದ ವಯಸ್ಸಿನವರಾಗಿದ್ದು, ಮತ್ತೋರ್ವ ಮಹಿಳೆಗೆ 40-45 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಬಳಿ ಬಂದೂಕು ಹೊಂದಿದ್ದರು. ಕನ್ನಡ, ತುಳು ಭಾಷೆಗಳಲ್ಲಿ ಮಾತನಾಡುತ್ತಿದ್ದರು. ಅವರು ತಮ್ಮನ್ನು ನಕ್ಸಲರೆಂದು ಪರಿಚಯಿಸಿಕೊಂಡು, ಬಡವರಿಗೆ ನ್ಯಾಯ ಒದಗಿಸುವುದಕ್ಕಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು. ಅಷ್ಟೇ ಅಲ್ಲದೇ ಆಹಾರ ಕೇಳಿಕೊಂಡ ಅವರು ಕೆಲವು ದಿನಸಿ ಪದಾರ್ಥಗಳನ್ನು ಕೇಳಿ ಪಡೆದಿದ್ದಾರೆ. ಭಯದಿಂದ ನಾವು ಅವರು ಕೇಳಿದ್ದನ್ನು ಕೊಟ್ಟೆವು. ತಮ್ಮನ್ನು ಬೆಂಬಲಿಸುವಂತೆ ಕೇಳಿದ ಅವರು ಈ ಮಾಹಿತಿಯನ್ನು ಯಾರಿಗಾದರೂ ನೀಡಿದರೆ ಕೊಲ್ಲುವುದಾಗಿ ಬಂದೂಕು ತೋರಿಸಿ ಬೆದರಿಕೆ ಹಾಕಿ ಸಂಜೆ 7:30 ವೇಳೆಗೆ ಹೊರಟುಹೋದರು ಎಂದು ಅಶೋಕ್ ಹೇಳಿದ್ದಾರೆ.
ಶಂಕಿತ ನಕ್ಸಲರ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಮತ್ತು 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Mangalore Naxals movement at Inakidu village in kukke subramanya, FIR lodged on four. Three unidentified persons, suspected to be cadres of the Communist Party of India-Maoist (CPI-Maoist), reportedly visited a house near Kukke Subrahmanya in Kadaba taluk (revenue unit) in Dakshina Kannada District of Karnataka on March 23.
23-07-26 08:05 pm
HK News Desk
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
24-07-26 11:18 am
HK News Staffer
ಮತ್ತೆ ಪ್ರತಿಭಟನೆಗೆ ಬಂದ್ರೆ ಜೇಬಿನಲ್ಲಿ 50 ಗ್ರಾಂ ಡ...
23-07-26 06:26 pm
ಮೋದಿ ಮೌನ ಹೊಸದೇನಲ್ಲ, 'ನಾವು ತಪ್ಪು ಮಾಡಿದ್ದೇವೆ' ಎ...
23-07-26 05:57 pm
ರಾಜಧಾನಿ ದೆಹಲಿಯಲ್ಲಿ ಹೆಚ್ಚಿದ ಪ್ರತಿಭಟನೆ ಕಿಚ್ಚು ;...
23-07-26 05:48 pm
ಅಯೋಧ್ಯೆ ದೇಣಿಗೆ ಕಳವು ದೇಶದ ಆತ್ಮಸಾಕ್ಷಿಗೆ ಬಿದ್ದ ಪ...
23-07-26 01:51 pm
23-07-26 10:27 pm
Mangaluru Staffer
ವಿದ್ಯಾರ್ಥಿಗಳಿಗೆ ಲಾಠಿಚಾರ್ಜ್ ದೇಶದ ಭವಿಷ್ಯದ ಮೇಲಿನ...
22-07-26 09:18 pm
2,000 ರೂ. ಆಸೆಗೆ ಬಿದ್ದು ಬ್ಯಾಂಕ್ ಅಕೌಂಟ್ ಹಸ್ತಾಂತ...
21-07-26 11:02 pm
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
22-07-26 10:24 pm
HK News Desk
ಎಸ್ಐಆರ್ ಪರಿಷ್ಕರಣೆ ನೆಪದಲ್ಲಿ ಎಪಿಕೆ ಫೈಲ್ ಕಳುಹಿಸಿ...
22-07-26 09:03 pm
ಬಂಟ್ವಾಳ ; ಮಳೆ-ಗಾಳಿಗೆ ಶಾಲಾ ಬಸ್ಸಿಗೆ ಉರುಳಿ ಬಿದ್ದ...
22-07-26 07:37 pm
Mysuru Murder, Suicide: ನಾನಿಲ್ಲದೆ ನನ್ನ ಹೆಂಡತಿ...
22-07-26 04:21 pm
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am