ಬ್ರೇಕಿಂಗ್ ನ್ಯೂಸ್
01-12-20 11:06 am Mangalore Correspondent ಕರಾವಳಿ
ಮಂಗಳೂರು, ಡಿ.1: ಉಳ್ಳಾಲ ಬಳಿಯ ಅಳಿವೆಬಾಗಿಲು ಬಳಿ ಸಮುದ್ರ ಮಧ್ಯೆ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು ಆರು ಜನ ನಾಪತ್ತೆಯಾಗಿದ್ದಾರೆ.
22 ಜನರಿದ್ದ ಪರ್ಸಿನ್ ಮೀನುಗಾರಿಕೆ ಬೋಟ್ ನಸುಕಿನಲ್ಲಿ ಹಿಂತಿರುಗುತ್ತಿದ್ದಾಗ ಭಾರೀ ಅಲೆಗಳ ಹೊಡೆತಕ್ಕೆ ಮುಳುಗಡೆಯಾಗಿದೆ. ಉಳ್ಳಾಲದ ಅಳಿವೆಬಾಗಿಲಿನ ಸಮೀಪದಲ್ಲಿ ನೇತ್ರಾವತಿ ನದಿ ಸಮುದ್ರ ಸೇರುವುದಕ್ಕಿಂತ ಸ್ವಲ್ಪ ದೂರದಲ್ಲಿ ದುರಂತ ನಡೆದಿದೆ ಎನ್ನಲಾಗುತ್ತಿದೆ. ಬೋಟಿನಲ್ಲಿದ್ದ 22 ಜನ ಮೀನುಗಾರರಲ್ಲಿ 6 ಮಂದಿ ನಾಪತ್ತೆಯಾಗಿದ್ದಾರೆ.



ಮಂಗಳೂರಿನ ಬೋಳಾರದ ಶ್ರೀರಕ್ಷಾ ಹೆಸರಿನ ಮೀನುಗಾರಿಕಾ ಬೋಟ್ ದುರಂತಕ್ಕೀಡಾಗಿದ್ದು ಮಂಗಳೂರು, ಉಳ್ಳಾಲದವರು ಸೇರಿ ತಮಿಳುನಾಡು ಮೂಲದ ಕಾರ್ಮಿಕರು ಬೋಟಿನಲ್ಲಿದ್ದರು. ಈ ಪೈಕಿ ಮಂಗಳೂರಿನ ಪಾಂಡುರಂಗ ಸುವರ್ಣ (58), ಪ್ರೀತಮ್ (25), ಚಿಂತನ್(21), ಜಿಯಾವುಲ್ಲಾ (32), ಅನ್ಸಾರ್ (31), ಹಸೈನಾರ್ (25) ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬೋಟಿನಲ್ಲಿ ಭಾರೀ ಪ್ರಮಾಣದಲ್ಲಿ ಮೀನುಗಳ ಸಂಗ್ರಹ ಇತ್ತು. ಹಿಂತಿರುಗಿ ಬರುತ್ತಿದ್ದಾಗ ಅಲೆಗಳ ಹೊಡೆತಕ್ಕೆ ಬೋಟ್ ಮಗುಚಿದೆ ಎನ್ನಲಾಗುತ್ತಿದೆ. ಇನ್ನೊಂದು ಮೂಲದ ಪ್ರಕಾರ, ಮತ್ತಷ್ಟು ಮೀನು ಬಲೆಗೆ ಬಿದ್ದಿದ್ದು ಬೋಟಿಗೆ ಎಳೆದು ಹಾಕುವ ವೇಳೆ ಒಂದು ಬದಿಗೆ ಇಡೀ ಬೋಟ್ ಮಗುಚಿದೆ ಎನ್ನಲಾಗುತ್ತಿದೆ. ಕೂಡಲೇ ಇತರೇ ಮೀನುಗಾರಿಕಾ ದೋಣಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. 16 ಮಂದಿ ಡಿಂಗಿ ಮೂಲಕ ಈಜಿ ಬೇರೆ ದೋಣಿಗಳ ಮೂಲಕ ಪಾರಾಗಿದ್ದಾರೆ.
Video:
Six fishermen go missing In a tragic boat accident near Ullal. The boat, named 'Shree Raksha' from Bolar had left bolar for fishing on Monday. As many as 22 fishermen were in the boat. Fourteen out of the 22 managed to rescue themselves with the help of lifeboats.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm