ಬ್ರೇಕಿಂಗ್ ನ್ಯೂಸ್
03-12-20 01:13 pm Mangalore Correspondent ಕರಾವಳಿ
ಮಂಗಳೂರು, ಡಿ.3 : ಯಾರು ಏನೇ ಹೇಳಲಿ, ಕರ್ನಾಟಕದಲ್ಲಿ ಲವ್ ಜಿಹಾದ್ ಪಿಡುಗಿನ ವಿರುದ್ಧ ಸಮಗ್ರವಾದ ಕಾನೂನು ಜಾರಿಗೆ ಬರಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಪಣಂಬೂರಿನಲ್ಲಿ ಪೊಲೀಸ್ ಕ್ವಾಟ್ರಸ್ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೃಹ ಸಚಿವರು, ಮಾಧ್ಯಮದ ಪ್ರಶ್ನೆಗೆ ಮೇಲಿನಂತೆ ಉತ್ತರ ನೀಡಿದ್ರು.
ಲವ್ ಜಿಹಾದ್ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಪಿಡುಗಾಗಿದೆ. ಇದರಿಂದ ಸಮಾಜದ ಸಾಮರಸ್ಯ, ಸ್ವಾಸ್ಥ್ಯ ಹಾಳಾಗಿದೆ. ಒಂದಷ್ಟು ಪ್ರಕರಣ ದಾಖಲಾಗಿದ್ದರೆ, ಅದೆಷ್ಟೋ ಪ್ರಕರಣಗಳು ದಾಖಲು ಆಗೇ ಇಲ್ಲ. ಇಂಥ ಪಿಡುಗಿನ ವಿರುದ್ಧ ಕಾನೂನು ತರುವುದು ಅವಶ್ಯವಾಗಿದ್ದು ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಕಾಯ್ದೆಯ ಅಂಶಗಳನ್ನು ನೋಡಿಕೊಂಡು ಸಮಗ್ರವಾದ ಕಾನೂನು ರಚನೆ ಮಾಡುತ್ತೇವೆ.
ಹಿಂದೆ ವರದಕ್ಷಿಣೆ ವಿರುದ್ಧ ಕಾನೂನು ಇರಲಿಲ್ಲ. ಹಾಗಂತ, ಅದೇ ಸಮಾಜದಲ್ಲಿ ಪಿಡುಗಾಗಿ ಬಂತು. ಹಾಗಾಗಿ ಏಂಟಿ ಡೌರಿ ಆ್ಯಕ್ಟ್ ಜಾರಿಗೆ ತರಲಾಯ್ತು. ಅದೇ ರೀತಿ ಲವ್ ಜಿಹಾದ್ ಸಮಾಜಕ್ಕೆ ಅಂಟಿದ ಪಿಡುಗಾಗಿದ್ದು ಈ ಬಗ್ಗೆ ಕೋರ್ಟ್ ಕೂಡ ವ್ಯಾಖ್ಯಾನ ಮಾಡಿದೆ ಎಂದು ಹೇಳಿದರು.

ಗಾಂಧೀಜಿ ಕಾಲದಲ್ಲೇ ಗೋಹತ್ಯೆ ನಿಷೇಧ ಆಗಬೇಕೆಂಬ ಆಗ್ರಹ ಅನೇಕ ಇತ್ತು. ಆದರೆ, ಕಾನೂನಿನಲ್ಲಿ ಲೋಪ ಆಯ್ತು. ಈಗ ಪಶು ವೈದ್ಯರು, ರೈತರು, ಸಮಾಜದ ಪ್ರಮುಖರು, ಕಾನೂನು ತಜ್ಞರಿಂದ ವರದಿ ಕೇಳಿದ್ದು ಸಮಗ್ರವಾದ ಕಾಯ್ದೆ ಒಂದನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.
ರಾತ್ರಿ ಬೀಟ್ ಗೆ ಡಿಸಿಪಿ ಶ್ರೇಣಿಯ ಅಧಿಕಾರಿಗಳ ನಿಯೋಜನೆ !
ಮಂಗಳೂರಿನಲ್ಲಿ ಗೋಡೆ ಬರಹದ ಪ್ರಕರಣದಲ್ಲಿ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುತ್ತೇವೆ. ಈ ರೀತಿಯ ಪ್ರಕರಣ ಮರು ಕಳಿಸದಂತೆ ಕ್ರಮ ವಹಿಸಲಾಗುವುದು. ರಾತ್ರಿ ವೇಳೆಗೆ ಪೊಲೀಸ್ ಬೀಟ್ ಹೆಚ್ಚಿಸಲಾಗುವುದು. ಡಿಸಿಪಿ ರೇಂಜ್ ಅಧಿಕಾರಿಗಳನ್ನು ನೈಟ್ ಬೀಟ್ ಹಾಕಲು ಸೂಚಿಸಿದ್ದೇನೆ. ನಗರದ ಡಾರ್ಕ್ ಸ್ಪಾಟ್ ಗಳಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುವುದು. ಸ್ಮಾರ್ಟ್ ಸಿಟಿಯಡಿ 1500 ಕ್ಯಾಮರಾ ಅಳವಡಿಸಲು ತೀರ್ಮಾನಿಸಲಾಗಿದೆ ಎಂದರು.
Law against Love Jihad will certainly be executed in Karnataka said Home Minister Bommai during his visit to Udupi.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
25-08-26 12:46 pm
HK News Staffer
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm