ಬ್ರೇಕಿಂಗ್ ನ್ಯೂಸ್
07-12-20 09:11 pm Mangaluru Correspondent ಕರಾವಳಿ
ಮಂಗಳೂರು, ಡಿ.7: ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಲು ಆಗ್ರಹಿಸಿ, ಬಿಲ್ಲವ ಬ್ರಿಗೇಡ್ ವತಿಯಿಂದ ಬೈಕ್ ರ್ಯಾಲಿ ಬದಲಿಗೆ ಪಾದಯಾತ್ರೆ ನಡೆಸಲಾಯಿತು.
ಬೈಕ್ ರ್ಯಾಲಿ ನಡೆಸಲು ಕೊನೆಕ್ಷಣದಲ್ಲಿ ಮಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ರ್ಯಾಲಿಯನ್ನು ಮೊಟಕುಗೊಳಿಸಲಾಗಿತ್ತು. ಕುದ್ರೋಳಿ ಕ್ಷೇತ್ರದಿಂದ ಕೆಂಜಾರಿನ ವರೆಗೆ ನಡೆಯಲಿದ್ದ ರ್ಯಾಲಿಯನ್ನು ಬದಲಿಸಿ, ಮರವೂರಿನಿಂದ ಪಾದಯಾತ್ರೆಗೆ ಸೀಮಿತಗೊಳಿಸಲಾಯ್ತು.
ಬೈಕ್ ರ್ಯಾಲಿ ಬದಲು ತಮ್ಮ ತಮ್ಮ ವಾಹನಗಳಲ್ಲಿ ಮರವೂರಿಗೆ ಬಂದು ಸೇರಿದ ಸಂಘಟನೆಯ ನಾಯಕರು ಅಲ್ಲಿಂದ ಪಾದಯಾತ್ರೆ ಮೂಲಕ ಕೆಂಜಾರಿಗೆ ತೆರಳಿದರು. ಮೆರವಣಿಗೆಯಲ್ಲಿ ಕೋಟಿ ಚೆನ್ನಯರಿಗೆ ಜೈಕಾರ ಹಾಕುತ್ತಾ, ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲೇಬೇಕೆಂದು ಘೋಷಣೆಯನ್ನೂ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಶೇಖರ ಕೋಟ್ಯಾನ್, ವಿಮಾನ ನಿಲ್ದಾಣಕ್ಕೆ ಹೆಸರಿಡುವ ವರೆಗೂ ಈ ಹೋರಾಟ ಮುಂದುವರಿಯಲಿದೆ. ಇದನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ಇಂದು ಬೈಕ್ ರ್ಯಾಲಿಗೆ ಅನುಮತಿ ನೀಡದೆ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಆದರೆ, ಇದರಿಂದ ನಮ್ಮ ಹೋರಾಟವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ನಾಯಕರಾದ ಸತ್ಯಜಿತ್ ಸುರತ್ಕಲ್, ಬಿಲ್ಲವ ಬ್ರಿಗೇಡ್ ಸಂಘಟನೆಯ ಅಧ್ಯಕ್ಷ ಜೀವನ್ ಪೂಜಾರಿ, ಅಕ್ಷಿತ್ ಸುವರ್ಣ, ವಿವೇಕ್ ಪನಾಮಾ, ಪ್ರತಿಭಾ ಕುಳಾಯಿ, ಸೂರಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಅನುಮತಿ ನಿರಾಕರಿಸಿದ್ದು ಯಾಕೆ ?
ಬೈಕ್ ರ್ಯಾಲಿ ನಡೆಸಲು ಟ್ರಾಫಿಕ್ ಸಮಸ್ಯೆ ಮತ್ತು ಕೋಮು ಸಂಘರ್ಷಕ್ಕೆ ನಾಂದಿಯಾಗುತ್ತೆ ಅಂತ ಪೊಲೀಸ್ ಕಮಿಷನರ್ ನಿರಾಕರಿಸಿದ್ದಾಗಿ ಮಾಹಿತಿ ಲಭಿಸಿದೆ. ಬೈಕ್ ರ್ಯಾಲಿ ನಡೆಸಲು ಒಂದು ಸಂಘಟನೆಗೆ ಅವಕಾಶ ಕೊಟ್ಟರೆ, ನಾಳೆ ಇನ್ನೊಬ್ಬರಿಗೂ ಅವಕಾಶ ಕೊಡಬೇಕಾಗುತ್ತದೆ. ಕೊಡದೇ ಇದ್ದರೆ ಪೊಲೀಸರು ಮತ್ತು ಸಂಘಟನೆಗಳ ನಡುವೆ ಸಂಘರ್ಷ, ಘರ್ಷಣೆಗೆ ಅವಕಾಶ ನೀಡಿದಂತಾಗುತ್ತದೆ. ಅದಕ್ಕಾಗಿ ಪ್ರತಿಭಟನೆ ಮಾಡಿ, ಬೈಕ್ ರ್ಯಾಲಿ ಬೇಡ ಎಂದಿದ್ದರಂತೆ ಕಮಿಷನರ್. ಆದರೆ, ಸೂಚನೆ ನೀಡಿದ್ದರೂ, ರ್ಯಾಲಿಯನ್ನು ಬದಲಿಸದೇ ಇದ್ದುದರಿಂದ ಮುನ್ನಾ ದಿನ ಟ್ರಾಫಿಕ್ ಡಿಸಿಪಿ ಮೂಲಕ ನೋಟೀಸ್ ನೀಡಲಾಗಿತ್ತು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಬಿಜೆಪಿ ನಾಯಕರು ತಪ್ಪಿಸಿದ್ದು ಹೌದೇ..?
ಆದರೆ, ಕೊನೆಕ್ಷಣದಲ್ಲಿ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ ವಿಚಾರ ಮಾತ್ರ ಸಂಘಟನೆ ಪ್ರಮುಖರಲ್ಲಿ ಬೇರೆಯದ್ದೇ ಸಂದೇಶ ಹೋಗಿತ್ತು. ಬಿಜೆಪಿ ಆಡಳಿತ ಉದ್ದೇಶಪೂರ್ವಕ ನಮ್ಮ ಹೋರಾಟವನ್ನು ಹತ್ತಿಕ್ಕಲು ಇಂಥ ಕೆಲಸ ಮಾಡಿದೆ ಎನ್ನುವ ಮಾತು ಕೇಳಿಬರುತ್ತಿತ್ತು. ಬಿಜೆಪಿ ರಾಜ್ಯಾಧ್ಯಕ್ಷರ ಕೈವಾಡ ಇದ್ದಿರಲೂಬಹುದು ಎನ್ನುವ ಮಾತೂ ಕೇಳಿಬಂದಿತ್ತು. ಕಳೆದ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸತ್ಯಜಿತ್ ಸುರತ್ಕಲ್, ಕೋಟಿ ಚೆನ್ನಯ ಹೋರಾಟದಲ್ಲಿ ಮುಂಚೂಣಿ ಇರುವುದರಿಂದ ಹೈಲೈಟ್ ಆಗಬಾರದೆಂದು ಬಿಜೆಪಿ ನಾಯಕರು ರ್ಯಾಲಿಗೆ ಅವಕಾಶ ತಪ್ಪಿಸಿದ್ದಾರೆ ಎಂಬ ಮಾತು ಬಂದಿತ್ತು. ಆದರೆ, ಅಂಥ ಪಿತೂರಿ ಏನೂ ನಡೆದಿರಲಿಲ್ಲ ಎನ್ನುತ್ತದೆ ಪೊಲೀಸ್ ಮೂಲಗಳು.
Video:
Billava Brigade took out a mammoth bike rally on Monday December 7 urging the administration to name Mangaluru International Airport after Tulu bravehearts Koti Chennaya. But police intervened and stopped the rally. The bikers were confused by the obstruction of the police force.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
07-09-25 11:24 pm
Mangalore Correspondent
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm