UT Khader, Water Tank, Ullal: ಉಳ್ಳಾಲ ನಗರಕ್ಕೆ 24 ಗಂಟೆ ನೀರು ಪೂರೈಕೆ ಸನ್ನಿಹಿತ ; ಚೆಂಬುಗುಡ್ಡೆಯ 70 ಲಕ್ಷ ಲೀ. ಟ್ಯಾಂಕಲ್ಲಿ ಯಶಸ್ವಿ ಪ್ರಾಯೋಗಿಕ ನೀರು ಪೂರೈಕೆ ಪರಿಶೀಲಿಸಿದ ಸ್ಪೀಕರ್ ಯು.ಟಿ.ಖಾದರ್, ಗುಣಮಟ್ಟ ಪರಿಶೀಲನೆ ಬಳಿಕ ಮುಖ್ಯಮಂತ್ರಿಗಳಿಂದ ಚಾಲನೆ 

08-09-24 12:43 pm       Mangalore Correspondent   ಕರಾವಳಿ

ಉಳ್ಳಾಲ ನಗರಕ್ಕೆ ನೀರು ಸರಬರಾಜು ಮಾಡುವ ಪ್ರಥಮ ಹಂತದ ಟ್ರಯಲ್ ರೌಂಡ್ ನಡೆಸಲಾಗಿದೆ. ಗುಣಮಟ್ಟ ಪರಿಶೀಲಿಸಿದ ಬಳಿಕ ಮೊದಲ ಹಂತದ ಯೋಜನೆಗೆ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಚಾಲನೆ ನೀಡಲಿದ್ದಾರೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.

ಉಳ್ಳಾಲ, ಸೆ.8: ಉಳ್ಳಾಲ ನಗರಕ್ಕೆ ನೀರು ಸರಬರಾಜು ಮಾಡುವ ಪ್ರಥಮ ಹಂತದ ಟ್ರಯಲ್ ರೌಂಡ್ ನಡೆಸಲಾಗಿದೆ. ಗುಣಮಟ್ಟ ಪರಿಶೀಲಿಸಿದ ಬಳಿಕ ಮೊದಲ ಹಂತದ ಯೋಜನೆಗೆ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಚಾಲನೆ ನೀಡಲಿದ್ದಾರೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ. 

ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ಉಳ್ಳಾಲ ನಗರಕ್ಕೆ ಬೇಕಾದಂತಹ 70 ಲಕ್ಷ ಲೀ. ಟ್ಯಾಂಕಿಗೆ ಪಜೀರು ಟ್ರೀಟ್ ಮೆಂಟ್ ಪ್ಲಾಂಟ್ ನಿಂದ ಬಿಡುಗಡೆಗೊಳಿಸಿದ ಪ್ರಾಯೋಗಿಕ ಹಂತದ ನೀರು ಬರುವುದನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. 

ಗ್ರಾಮೀಣ ಮತ್ತು ನಗರ ಮಟ್ಟಕ್ಕೆ 24 ಗಂಟೆಗಳ ಕಾಲ ನೀರು ಸರಬರಾಜು ಮಾಡುವುದು ದೊಡ್ಡ ಕನಸಾಗಿತ್ತು. ಕೆಲವೇ ತಿಂಗಳಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳಿಗೆ ನೀರು ಸರಬರಾಜು ಆಗಲಿದೆ. 198 ಕೋಟಿ ರೂ. ಯೋಜನೆಯಡಿ ಸಜಿಪದಲ್ಲಿ ವಾಟರ್ ಜ್ಯಾಕ್ವೆಲ್ ನಿರ್ಮಾಣ ಮಾಡಲಾಗಿದೆ. ಅಲ್ಲಿಂದ ನೀರನ್ನು ಲಿಫ್ಟ್ ಮಾಡಿ ಕೊಣಾಜೆ-ಪಜೀರು ಮಧ್ಯಭಾಗದಲ್ಲಿರುವ ಆಧುನಿಕ ತಾಂತ್ರೀಕೃತ ಟ್ರೀಟ್ ಮೆಂಟ್‌ಗೆ ನೀರು ಬರುತ್ತದೆ.ಅಲ್ಲಿಂದ ಪೈಪ್ ಲೈನ್ ಮುಖಾಂತರ ಎಲ್ಲಾ ಗ್ರಾಮ ಹಾಗೂ ನಗರ ಮಟ್ಟಕ್ಕೆ ನೀರು ತಲುಪಲಿದೆ. ಉಳ್ಳಾಲ ನಗರಕ್ಕೆ ಅಗತ್ಯವಿರುವ 70 ಲಕ್ಷ ಲೀ. ನೀರಿನ ಟ್ಯಾಂಕನ್ನು ಚೆಂಬುಗುಡ್ಡೆಯಲ್ಲಿ ನಿರ್ಮಾಣ ಮಾಡಲಾಗಿದ್ದು, ಅಲ್ಲಿಂದ ಎಡಿಬಿ ಯೋಜನೆಯಡಿ ಅಳವಡಿಸಿದ ಪೈಪ್ ಲೈನ್ ಮುಖೇನ ನೀರು ಸರಬರಾಜು ಆಗಲಿದೆ. 2002 ರಲ್ಲಿ ಪೈಪ್‌ಲೈನ್  ಆಗಿದ್ದರೂ ಅಂದು ಮಾಸ್ತಿಕಟ್ಟೆ , ಆಝಾದ್ ನಗರ, ಒಂಭತ್ತುಕರೆ, ಮುಕ್ಕಚ್ಚೇರಿ ಭಾಗಗಳಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲು ಜಾಗ ಕೇಳಿದರೂ ಸಿಗಲಿಲ್ಲ. ಆದುದರಿಂದ ಸೋಮೇಶ್ವರ, ಉಳ್ಳಾಲದ ಮಧ್ಯಭಾಗದಲ್ಲಿರುವ ಕುಂಪಲ ಆಶ್ರಯಕಾಲನಿ ಸೈಟ್ ಮೇಲೆ ಅನುಮತಿ ಪಡೆದುಕೊಂಡು ಟ್ಯಾಂಕ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. 

ಪೈಪ್ ಲೈನ್ ಇಲ್ಲದ ಕಡೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಆರು ತಿಂಗಳ ಒಳಗಡೆ ಉಳ್ಳಾಲ ವ್ಯಾಪ್ತಿಯ ಕಾಮಗಾರಿಗಳನ್ನು ಪೂರೈಸಲಾಗುವುದು. ಕೋಟೆಕಾರು ಮತ್ತು ಸೋಮೇಶ್ವರ ಭಾಗಕ್ಕೆ 134 ಕೋಟಿ ರೂ. ವೆಚ್ಚದಲ್ಲಿ ಆಂತರಿಕ ಪೈಪ್ ಲೈನ್ ಮತ್ತು ಟ್ಯಾಂಕ್ ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ. ಗ್ರಾಮೀಣ ಮಟ್ಟದಲ್ಲಿ ಮುಖ್ಯ ಪೈಪ್ ಲೈನ್ ಅಳವಡಿಕೆಯಾಗಿದೆ. ಒಂದು ಗ್ರಾಮದಲ್ಲಿ ಒಂದು ಅಥವಾ ಎರಡು ಟ್ಯಾಂಕ್ ಗಳ ನಿರ್ಮಾಣ ಮಾಡಲಾಗುವುದು. ಅಲ್ಲಿಂದ ಜಲಜೀವನ್ ಮಿಷನ್ ಟ್ಯಾಂಕುಗಳಿಗೆ ನೀರು ಬಿಡಲಾಗುತ್ತದೆ. ನೀರು ದುರ್ಬಳಕೆಯಾಗದಂತೆ ಪ್ರತಿಯೊಂದು ಮನೆಗಳಿಗೂ ಮೀಟರ್ ಅಳವಡಿಸುವ ಯೋಜನೆಯನ್ನು ರೂಪಿಸಲಾಗಿದೆ. ಎರಡು ವರ್ಷಗಳಲ್ಲಿ ಕ್ಷೇತ್ರಕ್ಕೆ ಸಂಪೂರ್ಣವಾಗಿ ನೀರು ಸರಬರಾಜು ಆಗುವ ವಿಶ್ವಾಸವಿದೆ ಎಂದರು. 

ಈ ಸಂದರ್ಭ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಶಾಂತಿ ಡಿಸೋಜ, ಕರ್ನಾಟಕ ಅರ್ಬನ್ ವಾಟರ್ ಬೋರ್ಡಿನ ಅಧಿಕಾರಿ ರೇಣುಕಾ, ನಗರಸಭೆ ಪ್ರಭಾರ ಪೌರಾಯುಕ್ತ ಮತ್ತಡಿ ಮೊದಲಾದವರು ಉಪಸ್ಥಿತರಿದ್ದರು.

CM Siddaramaiah to launch first phase of drinking water of 70 lakhs litre at Ullal in Mangalore. Mr. Khader told reporters here that the first phase of the 24-hour drinking water supply project from Netravathi was complete. A 70 lakh litre capacity single water tank was constructed for Ullal town. The Speaker recalled he had allocated ₹249 crore for the project being the urban development Minister earlier. In all, ₹386 crore was released for the drinking water project, added.