ಬ್ರೇಕಿಂಗ್ ನ್ಯೂಸ್
10-09-24 11:12 pm Mangalore Correspondent ಕರಾವಳಿ
ಮಂಗಳೂರು, ಸೆ.10: ತುಳು ಭಾಷೆಯ ಲಿಪಿಗೆ ಯುನಿಕೋಡ್ ಮಾನ್ಯತೆ ಸಿಗುತ್ತದೆ ಎನ್ನುವ ಸುದ್ದಿ ಬೆನ್ನಲ್ಲೇ ಕ್ರೆಡಿಟ್ ವಾರ್ ಶುರುವಾಗಿದೆ. ತಿಗಳಾರಿ ಲಿಪಿ ಬೇರೆ, ತುಳು ಲಿಪಿ ಬೇರೆ ಎನ್ನುವ ಹೊಸ ವಾದವನ್ನು ಒಂದು ವರ್ಗ ಮುಂದಿಟ್ಟಿದೆ. ಯುನಿಕೋಡ್ ಮಾನ್ಯತೆ ನೀಡಿದೆ ಎಂಬ ಸುದ್ದಿ ಬೆನ್ನಲ್ಲೇ ತುಳುನಾಡಿನಲ್ಲಿ ಕೆಲವರು ಕ್ಯಾತೆ ಶುರು ಮಾಡಿದ್ದಾರೆ. ಈ ಬಗ್ಗೆ ತುಳು ಲಿಪಿಯ ಬಗ್ಗೆ ಆಳ ಸಂಶೋಧನೆ ನಡೆಸಿರುವ ವಿದ್ವಾಂಸರೊಬ್ಬರಲ್ಲಿ ಅಭಿಪ್ರಾಯ ಕೇಳಿದಾಗ, ಎಲ್ಲವೂ ಬೊಗಳೆ, ತಿಳಿಯದವರ ರಗಳೆ ಎನ್ನುವ ಮಾತುಗಳನ್ನಾಡಿದ್ದಾರೆ.
ತಿಗಳಾರಿ ಅಥವಾ ತಿಗಳಾರ್ಯ ಅಥವಾ ತುಳು ಲಿಪಿ ಎನ್ನುವುದು ಬೇರೆಯಲ್ಲ. ಮೂಲವಾಗಿ ತಿಗಳಾರಿ ಲಿಪಿಯನ್ನು ಕರಾವಳಿಯ ಬ್ರಾಹ್ಮಣರು ಸಂಸ್ಕೃತ ಭಾಷೆಯ ಬರವಣಿಗೆಗೆ ಬಳಸುತ್ತಿದ್ದರು. ಸಾಧಾರಣವಾಗಿ ಕಲ್ಲಿಕೋಟೆಯಿಂದ ಹಿಡಿದು ಉತ್ತರದ ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕಾಸರಗೋಡು, ಕೊಡಗಿನಲ್ಲಿ ಬ್ರಾಹ್ಮಣರು ಇದೇ ಲಿಪಿ ಬಳಸುತ್ತಿದ್ದರು. ಅವರೆಲ್ಲ ತುಳು ಭಾಷಿಕರೇ ಆಗಿದ್ದರೂ, ತುಳುವನ್ನು ಬರೆದಿದ್ದು ಕಡಿಮೆ. ಸಂಸ್ಕೃತ ಶ್ಲೋಕಗಳನ್ನು ಬರೆದಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ತಾಳೆಗರಿಗಳಲ್ಲಿ ಸಂಸ್ಕೃತ ಬರೆದಿಟ್ಟಿದ್ದನ್ನು ನೋಡಿದ್ದೇನೆ.
ತಿಗಳ ಅಂದರೆ ತಮಿಳ, ದ್ರಾವಿಡ ಎಂದರ್ಥ. ಆರ್ಯ ಎಂದರೆ ಸಂಸ್ಕೃತ. ಆರ್ಯರ ಭಾಷೆಯನ್ನು ಬರೆಯಲು ದ್ರಾವಿಡರು ಬಳಸುತ್ತಿದ್ದ ಲಿಪಿಯಷ್ಟೇ ಆಗಿತ್ತು. 12ನೇ ಶತಮಾನಕ್ಕೂ ಹಿಂದೆ ನಮ್ಮ ಕರಾವಳಿಯ ತುಳುನಾಡು, ಈಗಿನ ಕೇರಳ, ತಮಿಳುನಾಡು ಪಲ್ಲವರ ಆಳ್ವಿಕೆಯಲ್ಲಿತ್ತು. ಕರಾವಳಿಯ ಬ್ರಾಹ್ಮಣರು ಉನ್ನತ ವೇದಾಧ್ಯಯನಕ್ಕಾಗಿ ಕಂಚಿ ಕಾಮಕೋಟಿಗೆ ತೆರಳುತ್ತಿದ್ದರು. ಅಲ್ಲಿ ಪಲ್ಲವ ಲಿಪಿ ಇತ್ತು. ಪಲ್ಲವ ಲಿಪಿ ಮತ್ತು ತಿಗಳಾರಿ ಲಿಪಿ ಒಂದೇ ಆಗಿದೆ. ಅಂದರೆ, ವೇದಾಧ್ಯಯನ ಮುಗಿಸಿ ಬರುತ್ತಿದ್ದ ಬ್ರಾಹ್ಮಣರು ಇಲ್ಲಿ ಅದೇ ಲಿಪಿಯಲ್ಲಿ ಸಂಸ್ಕೃತ ಶ್ಲೋಕಗಳನ್ನು ಬರೆಯುತ್ತಿದ್ದರು. ಆಗಿನ ಸಂದರ್ಭದಲ್ಲಿ ತುಳು, ತಿಗಳಾರಿ ಲಿಪಿ ಎನ್ನುವ ಭೇದ ಇರಲಿಲ್ಲ. ತಾಳೆಗರಿಯಲ್ಲಿ ಬರೆಯುತ್ತಿದ್ದುದರಿಂದ ಅಡ್ಡ ಗೆರೆ ಹಾಕಿದರೆ ಹರಿಯುತ್ತದೆ ಎಂಬ ಒಂದೇ ಕಾರಣಕ್ಕೆ ದೇವನಾಗರಿ(ಈಗಿನ ಸಂಸ್ಕೃತ) ಬದಲು ಉರುಟಾದ ತಿಗಳಾರಿ ಲಿಪಿಯಲ್ಲಿ ಬರೆಯುತ್ತಿದ್ದರು.
ತಿಗಳಾರಿ ಮತ್ತು ಮಲಯಾಳದ ಲಿಪಿಯೂ ಒಂದೇ. 17ನೇ ಶತಮಾನದಲ್ಲಿ ಏಳುತಚ್ಚನ್ ಎಂಬ ಅಧ್ಯಾಪಕ ಮಲಯಾಳಕ್ಕೆ ಲಿಪಿಯನ್ನು ಅಳವಡಿಸಿದ. ಅದಕ್ಕೂ ಹಿಂದೆ ಹಳೆ ಮಲಯಾಳದಲ್ಲಿ ಒಂದಷ್ಟು ಕೃತಿಗಳಾಗಿದ್ದರೂ, ಆಧುನಿಕ ಮಲಯಾಳದಲ್ಲಿ 75 ಶೇಕಡಕ್ಕೂ ಹೆಚ್ಚು ಸಂಸ್ಕೃತ ಶಬ್ದಗಳೇ ಇವೆ. ಇದಕ್ಕೆ ಕಾರಣ, ಈ ಲಿಪಿಯನ್ನು ಬ್ರಾಹ್ಮಣರು ಬಳಸುತ್ತಿದ್ದ ತಿಗಳಾರಿಯಿಂದಲೇ ಎರವಲು ಪಡೆದಿರುವುದು. ಕೇರಳದಲ್ಲಿ ತುಳುನಾಡಿನಿಂದ ಹೋದ ಬ್ರಾಹ್ಮಣರೇ ದೇವಸ್ಥಾನಗಳಲ್ಲಿ ಅರ್ಚಕರಾಗಿದ್ದರು. ಅವರದು ಮಾತೃಭಾಷೆ ತುಳು, ಆನಂತರ ಮಲಯಾಳ ಆಗಿದ್ದರೂ ಸಂಸ್ಕೃತವನ್ನು ತಿಗಳಾರಿಯಲ್ಲಿ ಬರೆಯುತ್ತಿದ್ದರು. ಇದನ್ನು ಬ್ರಾಹ್ಮಣೇತರ ಕೇರಳದ ಮೇಲ್ವರ್ಗಗಳಾದ ನಾಯರ್, ಪೊದುವಾಳ್ ಮತ್ತು ವಣ್ಣಾನ್ ಜಾತಿಯ ವಿದ್ವಾಂಸರು ಕಲಿತುಕೊಂಡರು. ಅದೇ ಲಿಪಿಯನ್ನು ಬಳಸಿ, ಮಲಯಾಳವನ್ನು ಬರೆಯಲು ಶುರು ಮಾಡಿದ್ದರು. ಅದೇ ಮುಂದೆ ಮಲಯಾಳವಾಯಿತು. ಹಳೆ ಆಡುಭಾಷೆಯಾಗಿದ್ದ ಮಲಯಾಳದಲ್ಲಿ ಅಷ್ಟರ ಮಟ್ಟಿಗೆ ಸಂಸ್ಕೃತ ಶಬ್ದಗಳು ಇರಲಿಲ್ಲ. ಏಳುತಚ್ಚನ್ ಮಲಯಾಳದ ಶಬ್ದಗಳು ಮತ್ತು ಲಿಪಿಯನ್ನು ಬಳಕೆಗೆ ತಂದ ಬಳಿಕ ಸಂಸ್ಕೃತದ ಶಬ್ದಭಂಡಾರ ಮಲಯಾಳದಲ್ಲಿ ಮಿಳಿತವಾಗಿತ್ತು.
ತುಳು ಭಾಷೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದರೂ, ಸ್ವಂತ ಲಿಪಿ ಇಲ್ಲ. ತಿಗಳಾರಿ ಎನ್ನುವ ಪ್ರತ್ಯೇಕ ಭಾಷೆಯೂ ಇಲ್ಲ. ಈಗಂತೂ ತಿಗಳಾರಿ ಲಿಪಿ ಬಳಕೆಯೂ ಇಲ್ಲ. ಉಡುಪಿ ಕೃಷ್ಣಮಠದ ಬ್ರಾಹ್ಮಣರಷ್ಟೇ ಸ್ವಲ್ಪ ಮಟ್ಟಿಗೆ ಬಳಸುತ್ತಿದ್ದಾರೆ. ಅದನ್ನೇ ತುಳು ಲಿಪಿಯೆಂದು ಈಗ ಹೇಳುವುದಕ್ಕೇನೂ ಅಡ್ಡಿಯಿಲ್ಲ. ಈಗ ಯುನಿಕೋಡ್ ಮಾನ್ಯತೆಗಾಗಿ ವೈಷ್ಣವಿ ಮೂರ್ತಿಯವರು ಅವರ ಸ್ವಹಿತಾಸಕ್ತಿಯಿಂದ ತಿಗಳಾರಿ ಲಿಪಿಯನ್ನು ಕೊಟ್ಟಿದ್ದರು. ಅದನ್ನು ತುಳು ಲಿಪಿಯೆಂದೇ ಮಾಡಬೇಕು ಎನ್ನುವುದು ಇಲ್ಲಿನ ಕೆಲವರ ವಾದ. ಆದರೆ, ಅದರಿಂದ ತುಳು ಭಾಷೆಗೆ ಕೆಡುಕೇ ವಿನಾ ಒಳಿತು ಆಗುವುದಿಲ್ಲ. ತುಳುವರಲ್ಲಿ ಒಂದು ಪರ್ಸೆಂಟ್ ಜನವೂ ಈ ತುಳು ಲಿಪಿಯನ್ನು ಅರಿತಿಲ್ಲ. ಇನ್ನು ಕಲಿತು ಬರೆಯಲು ಶುರು ಮಾಡಿದರೂ, ಅದು ಇನ್ನೊಂದು ಮಲಯಾಳ ಆಗುವುದೇ ವಿನಾ ತುಳು ಆಗುವುದಿಲ್ಲ. ಇದರಿಂದ ಮಲಯಾಳಿಗಳಿಗೇ ಲಾಭವಾಗುತ್ತದೆ. ಈಗಲೇ ಕನ್ನಡ ರಾಜ್ಯದ ಕಾಸರಗೋಡನ್ನು ಕಬಳಿಸಿದ್ದಾರೆ. ಮುಂದೆ ದಕ್ಷಿಣ ಕನ್ನಡವನ್ನೂ ತಮ್ಮದೆಂದು ಹೇಳುವ ದಿನ ಬರಬಹುದು.
ಈಗ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೆಲವು ಕಡೆ ತುಳು ಲಿಪಿಯಲ್ಲಿ ಬೋರ್ಡ್ ಹಾಕಿದ್ದಾರೆ. ಅದನ್ನು ಯಾವುದೇ ತುಳುವನಿಗೆ ಓದಲು ಬರುವುದಿಲ್ಲ. ಮಲಯಾಳಿ ಭಾಷಿಗ ಸರಾಗವಾಗಿ ಓದುತ್ತಾನೆ. ಅಂದರೆ, ಇದರಿಂದ ಲಾಭ ಆಗಿರುವುದು ಮಲಯಾಳಕ್ಕೆ ಹೊರತು ತುಳುವಿಗಲ್ಲ. ಯಾವುದೇ ಭಾಷೆಯ ಬೆಳವಣಿಗೆಗೆ ಲಿಪಿ ಮುಖ್ಯವಾಗುವುದಿಲ್ಲ. ವಿಶ್ವವ್ಯಾಪಿ ಇರುವ ಇಂಗ್ಲಿಷ್ ಭಾಷೆಗೇ ಸ್ವಂತ ಲಿಪಿ ಇಲ್ಲ. ರೋಮನ್ ಲಿಪಿಯಲ್ಲಿ ಇಂಗ್ಲಿಷ್ ಬರೆಯುತ್ತಿರುವುದು. ತುಳುವಿನ ಅದೆಷ್ಟೋ ಕೃತಿಗಳು ಕನ್ನಡ ಲಿಪಿಯಲ್ಲಿ ಬರೆದು ಅಚ್ಚಾಗಿವೆ. ಅದನ್ನು ಜನರು ಓದುತ್ತಲೂ ಇದ್ದಾರೆ. ಇನ್ನು ಹೊಸ ಲಿಪಿಯನ್ನು ಕಲಿತು ಬರೆಯುವ ಅಗತ್ಯ ಬರುವುದೂ ಇಲ್ಲ. ಲಿಪಿ ಕಲಿತು ಬರೆದರೆ, ಓದುಗರು ಯಾರು ಎನ್ನುವುದು ಪ್ರಶ್ನೆಯಾಗುತ್ತದೆ. ಈಗ ಯುನಿಕೋಡ್ ನಿಂದಾಗಿ ತುಳು ಲಿಪಿ ಮೊಬೈಲ್, ಕಂಪ್ಯೂಟರ್ ಗಳಲ್ಲಿ ಚಾಲ್ತಿಗೆ ಬಂದರೆ ಅದು ಮಲಯಾಳಕ್ಕೇ ಜೋಡಣೆಯಾಗುತ್ತದೆ. ಯಾಕಂದ್ರೆ, ಈಗಾಗಲೇ ಮಲಯಾಳ ಯುನಿಕೋಡ್ ನಲ್ಲಿ ಇದೆ ಮತ್ತು ಮೊಬೈಲ್, ಇನ್ನಿತರ ಜಾಲತಾಣದಲ್ಲೂ ಸಕ್ರಿಯವಾಗಿದೆ.
ತುಳುವಿನಲ್ಲಿ ಬಂದಿರುವ ಅರುಣಾಬ್ಜನ ಮಹಾಭಾರತೊ, ವಿಷ್ಣುತುಂಗನ ಶ್ರೀಭಾಗವತೊ, ಶ್ರೀದೇವಿ ಮಹಾತ್ಮೆ ಎನ್ನುವ ಕೃತಿಗಳು ತಿಗಳಾರಿ ಲಿಪಿಯಲ್ಲೇ ಇವೆ. 12-15ನೇ ಶತಮಾನದ ನಡುವಲ್ಲಿ ತುಳುವಿನಲ್ಲಿ ಬರೆದಿರುವ ಮೊದಲ ಕೃತಿಗಳೆಂದು ವೆಂಕಟರಾಜ ಪುಣಿಂಚಿತ್ತಾಯರು ಸಂಶೋಧನೆ ಮಾಡಿದ್ದಾರೆ. ಅದು ಬಿಟ್ಟರೆ, ಈ ಲಿಪಿಯಲ್ಲಿ ಹೆಚ್ಚೇನೂ ಬರವಣಿಗೆ ಆಗಿಲ್ಲ. ವಾಸ್ತವ ಹೀಗಿದ್ದರೂ, ಆಧುನಿಕ ಕಾಲದಲ್ಲಿ ತುಳು ಭಾಷೆಗೆ ಲಿಪಿಯ ಅಗತ್ಯ ಇಲ್ಲ ಎನ್ನುವುದೇ ನನ್ನ ಭಾವನೆ. ಅದಕ್ಕಿಂತ ಕನ್ನಡದಲ್ಲಿ ಬರೆಯುವುದೇ ಉತ್ತಮ. 2014ರಲ್ಲಿ ಕೆಪಿ ರಾವ್ ತುಳುವಿಗೂ ಕಂಪ್ಯೂಟರಿನಲ್ಲಿ ಕೀಬೋರ್ಡ್ ಮಾಡಿಕೊಟ್ಟಿದ್ದರು. ಭಾರತದ ಎಲ್ಲ ಭಾಷೆಗಳಿಗೂ ಕಂಪ್ಯೂಟರ್ ಕೀಬೋರ್ಡ್ ಮಾಡಿಕೊಟ್ಟವರು ಕೆ.ಪಿ.ರಾವ್. ಆದರೆ, ತುಳುವಿಗೆ ತಿಗಳಾರಿ ಅಂದರೆ, ಹಾಲಿ ಚಾಲ್ತಿಯಲ್ಲಿರುವ ಮಲಯಾಳಿ ಲಿಪಿಯನ್ನು ಮಾಡಿದರೆ ಅದರಿಂದ ಕೆಡುಕಾಗುತ್ತದೆ. ಪ್ರತ್ಯೇಕ ಭಾಷೆಯೆಂಬ ಸ್ವಾತಂತ್ರ್ಯ, ಅಸ್ತಿತ್ವ ಕಳಕೊಳ್ಳುತ್ತದೆ ಎನ್ನುವ ನೆಲೆಯಲ್ಲಿ ಇದನ್ನು ಬಳಕೆ ಮಾಡುವುದು ಬೇಡ ಎಂದೇ ಕೆಪಿ ರಾಯರು ಹೇಳಿದ್ದರು. ಯುಬಿ ಪವನಜ ಅವರೂ ಇದೇ ಅಭಿಪ್ರಾಯ ಹೊಂದಿದ್ದರು ಎಂದು ಆ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ತನ್ನ ಹೆಸರನ್ನು ಹಾಕಿದರೆ, ವಿವಾದಕ್ಕೆ ಕಾರಣವಾಗುತ್ತದೆ. ನಾನು ಹೇಳಿದ್ದೆಲ್ಲವೂ ಸತ್ಯ ಎಂದವರು ಹೇಳಿದ್ದಾರೆ.
Mangalore Tulu lipi Unicode credit war begins on social media, report by headline Karnataka. The Unicode Consortium has announced the inclusion of Tulu script in its latest version, Unicode 16. This update adds 80 characters to the Unicode Standard, marking a significant milestone for the Tulu-speaking community.
23-11-24 07:43 pm
Bangalore Correspondent
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
23-11-24 05:34 pm
HK News Desk
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
23-11-24 10:37 pm
Mangalore Correspondent
Mangalore, Shiradi Ghat Accident: ಬೆಂಗಳೂರಿನ ಕ...
23-11-24 12:20 pm
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm