ಬ್ರೇಕಿಂಗ್ ನ್ಯೂಸ್
11-09-24 03:31 pm Mangalore Correspondent ಕರಾವಳಿ
ಮಂಗಳೂರು, ಸೆ.11: ನಗರದ ಸಂತ ಅಲೋಶಿಯಸ್ ಕಾಲೇಜು ಕ್ಯಾಂಪಸ್ ನಲ್ಲಿ ಕಳೆದ ನಲ್ವತ್ತು ವರ್ಷಗಳಿಂದ ಸಮೋಸ ಮಾರುತ್ತಲೇ ವಿದ್ಯಾರ್ಥಿಗಳ ಬಾಯಲ್ಲಿ ‘ಸಮೋಸ ಅಜ್ಜ’ ಎಂದೇ ಹೆಸರು ಪಡೆದಿದ್ದ ಬಾದಾಮಿ ಮೂಲದ ಮದುಕೇಶ್ವರ್ ಮಲ್ಲಿಕಾರ್ಜುನ ಮುಡೆಯಪ್ಪ ಮಳಗಿ(84) ವಯೋಸಹಜ ಅಸೌಖ್ಯದಿಂದ ನಿಧನರಾಗಿದ್ದಾರೆ.
40 ವರ್ಷಗಳ ಹಿಂದೆ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನಿಂದ ಮಳಗಿಯಿಂದ ಇವರು ತನ್ನ ಅಳಿಯನೊಂದಿಗೆ ಮಂಗಳೂರಿಗೆ ಬಂದಿದ್ದರು. ಬಾವುಟಗುಡ್ಡೆಯ ಅಲೋಶಿಯಸ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸಮೋಸ ಮಾರಲು ಆರಂಭಿಸಿದ್ದರು. ನಗುಮುಖದೊಂದಿಗೆ ಬಿಸಿ ಬಿಸಿ ಸಮೋಸ ಕೊಡುತ್ತಿದ್ದ ಕಾರಣಕ್ಕೆ ಬಹುಬೇಗನೆ ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದರು. ಆನಂತರ, ಸಮೋಸ ಜೊತೆಗೆ ಚಿಕ್ಕಿ, ನೆಲಗಡಲೆ, ಜಿಲೇಬಿ, ಬರ್ಫಿಗಳನ್ನೂ ಮಾರತೊಡಗಿದ್ದರು. ದಿನವೂ ಸಂಜೆ, ಮಧ್ಯಾಹ್ನ ಅಲೋಶಿಯಸ್ ಕಾಲೇಜು ಆವರಣದಲ್ಲಿ ತಿಂಡಿಗಳನ್ನು ಮಾರುತ್ತಿದ್ದರಿಂದ ಮಕ್ಕಳಿಗೆ ನೆಚ್ಚಿನ ತಾತನೂ ಆಗಿದ್ದರು.



ಮಲ್ಲಿಕಾರ್ಜುನ ಅವರು ಪತ್ನಿಯೊಂದಿಗೆ ಮಂಗಳೂರು ನಗರದ ಕಾವೂರಿನಲ್ಲಿ ನೆಲೆಸಿದ್ದರು. ಇವರಿಗೆ ನಾಲ್ವರು ಹೆಣ್ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿದೆ. ಒಬ್ಬ ಮಗನಿದ್ದು, ಆತನೂ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾನೆ. ಈ ಅಜ್ಜ ಮಾತ್ರ ದಿನವೂ ಸಮೋಸ ಮಾರುವುದನ್ನೇ ಕೆಲಸ ಮಾಡಿಕೊಂಡಿದ್ದರು. ಹತ್ತು ವರ್ಷಗಳ ಹಿಂದೆ ದೆಹಲಿಯಲ್ಲಿ ಧರಣಿ ಕುಳಿತು ಗಮನಸೆಳೆದಿದ್ದ ಅಣ್ಣಾ ಹಜಾರೆ ರೀತಿಯಲ್ಲೇ ಕಾಣುತ್ತಿದ್ದ ಇವರನ್ನೂ ಅಣ್ಣಾ ಅಜ್ಜಾ ಎಂದೂ ವಿದ್ಯಾರ್ಥಿಗಳು ಕರೆಯತೊಡಗಿದ್ದರು. ತಲೆಗೆ ಗಾಂಧಿ ಟೋಪಿ, ಕನ್ನಡಕ, ಬಿಳಿ ಜುಬ್ಬಾ ಮತ್ತು ಬಿಳಿ ಕಚ್ಚೆಯನ್ನು ಧರಿಸಿ ಅಪ್ಪಟ ಗಾಂಧಿವಾದಿಯಂತೆ ಕಾಣುತ್ತಿದ್ದರು. ಹಣೆಗೊಂದು ನಾಮವೂ ಅವರ ಹೆಗ್ಗುರುತಾಗಿತ್ತು. ಹೀಗಾಗಿ ನೋಡುವುದಕ್ಕೆ ಅಣ್ಣಾ ಹಜಾರೆ ರೀತಿಯಲ್ಲೇ ಇವರಲ್ಲೂ ಆಕರ್ಷಣೆ ಇತ್ತು.
ವಯಸ್ಸು ಮಾಗಿದ್ದರೂ, ಅವರೆಂದೂ ತನ್ನ ವೃತ್ತಿಗೆ ನಿವೃತ್ತಿ ಕೊಟ್ಟಿರಲಿಲ್ಲ. ದಿನವೂ ಮಧ್ಯಾಹ್ನ ಊಟದ ಸಮಯಕ್ಕೆ ಮತ್ತು ಸಂಜೆ ಶಾಲೆ ಬಿಡುವ ಸಮಯದಲ್ಲಿ ತಿಂಡಿಗಳನ್ನು ತಂದು ಕೊಡುತ್ತಿದ್ದರು. ಹೀಗಾಗಿ ಕಳೆದ 40 ವರ್ಷಗಳಲ್ಲಿ ಅಲೋಶಿಯಸ್ ಕಾಲೇಜಿನಲ್ಲಿ ಕಲಿತವರೆಲ್ಲ ಅಜ್ಜನ ನೆನಪನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಇವರನ್ನು ಸಮೋಸ ಅಜ್ಜ, ಚಿಕ್ಕಿ ಅಜ್ಜ, ಶೇಂಗಾ ಅಜ್ಜ ಎಂದೂ ಕರೆಯುತ್ತಿದ್ದರು. ಮಲ್ಲಿಕಾರ್ಜುನ ಅಜ್ಜ 2010ರಲ್ಲಿ ಅಲೋಶಿಯಸ್ ಕಾಲೇಜಿನ ಸಾರಂಗ್ ಎಫ್ಎಂ ರೇಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಪಾಲ್ಗೊಂಡು ಗಾಂಧೀಜಿ ಬಗ್ಗೆ ಮಾತನಾಡಿದ್ದರು. ಅವರ ಮಾತುಗಳನ್ನು ಕೇಳಿದ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಸಿಬಂದಿ ಸರಳ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು.
Mangalore St Aloysius College students beloved Samosa Ajja passes away at 84. Mudukeshwar Mudeyappa Malagi, affectionately known as ‘Samosa Ajja’, who passed away at the age of 84 due to age-related illnesses. For over four decades, Samosa Ajja was a beloved presence in the lives of students from St Aloysius schools and college, serving them hot samosas and other treats with a smile.
27-05-26 06:26 pm
HK News Staffer
ನಾಗಲಕ್ಷ್ಮಿಗೆ ಸುತ್ತಿಕೊಂಡ ಮತ್ತೊಂದು ವಿವಾದ ; ಉಡುಪ...
27-05-26 04:58 pm
ಡಿಕೆಗೆ ಪಟ್ಟ ; ಬಹುತೇಕ ಸಚಿವರಿಗೆ ಕೊಕ್- ಹೊಸಬರಿಗೆ...
27-05-26 01:41 pm
ರಾಜ್ಯ ರಾಜಕೀಯದಲ್ಲಿ ಭಾರೀ ಕ್ಲೈಮ್ಯಾಕ್ಸ್ ; ಸಿಎಂ ಸಿ...
26-05-26 11:03 pm
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
27-05-26 12:29 pm
HK News Desk
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
27-05-26 08:34 pm
HK News Staffer
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm
ಪ್ರಿಯಕರನ ಕಿರುಕುಳ ; ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ...
27-05-26 12:42 pm
ಇಸ್ರೇಲ್ನಿಂದ ರಜೆ ಮೇಲೆ ಊರಿಗೆ ಬಂದವನ ದುರಂತ ಅಂತ್ಯ...
26-05-26 02:43 pm