ಬ್ರೇಕಿಂಗ್ ನ್ಯೂಸ್

Satish Kumpala, Mangalore: ಉಸ್ತುವಾರಿ ಸಚಿವರು ಎಲ್ಲಿ ನಿದ್ದೆ ಮಾಡುತ್ತಿದ್ದಾರೆ, ಕಿಡಿಗೇಡಿ ಸವಾಲು ಹಾಕಿದ್ದನ್ನು ಪ್ರಶ್ನಿಸಿದರೆ ಎಫ್ಐಆರ್ ದಾಖಲಿಸುತ್ತಾರೆ, ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ರೆ ಕೇಸು ಮಾಡಲ್ಲ, ಶರಣ್ ಪಂಪ್ವೆಲ್ ಮಾತಾಡಿದ್ದರಲ್ಲಿ ತಪ್ಪೇನಿದೆ ? ಸತೀಶ್ ಕುಂಪಲ ಪ್ರಶ್ನೆ    |    Brijesh Chowta, Msez, JBF: ಎಂಎಸ್ಇಝೆಡ್‌ ಗೆ ಭೂಮಿ ಕೊಟ್ಟಿದ್ದ ಜೆಬಿಎಫ್ ಕಂಪೆನಿ ಕುಟುಂಬಸ್ಥರಿಗೆ ಕೊನೆಗೂ ಜಿಎಂಪಿಎಲ್‌ ನಲ್ಲಿ ಉದ್ಯೋಗ ; ಸಂಸದ ಕ್ಯಾ.ಚೌಟ ಮನವಿಗೆ ತುರ್ತು ಸ್ಪಂದಿಸಿ ಸಮಸ್ಯೆ ಬಗೆಹರಿಸಿದ ಕೇಂದ್ರ ಪೆಟ್ರೋಲಿಯಂ ಸಚಿವ    |    Udupi, Sunil Kumar, Kota srinivas, CM: ರಾಜ್ಯ ಸರ್ಕಾರದಿಂದ ಕರಾವಳಿ ಜಿಲ್ಲೆಗಳ ನಿರ್ಲಕ್ಷ್ಯ ; ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುತ್ತೇವೆ, ಎರಡು ಜಿಲ್ಲೆಗಳಲ್ಲಿ ಜನಾಂದೋಲನಕ್ಕೆ ನಿರ್ಧಾರ    |   

Fact Vid Facebook, Mangalore crime: ದೇಶದಲ್ಲಿ ಗಲಭೆ ಎಬ್ಬಿಸಲು ಪ್ರಬಲ ಸಂಚು ; ಬಾಂಗ್ಲಾ, ಪಾಕಿಸ್ಥಾನಿಯರಿಂದಲೇ ವಿಕೃತಿ, ಹಿಂದು –ಮುಸ್ಲಿಮರನ್ನು ಎತ್ತಿಕಟ್ಟುವ ರೀತಿ ಫೇಸ್ಬುಕ್ ಪೇಜ್, ಗಾಢ ನಿದ್ರೆಗೆ ಜಾರಿದ್ಯಾ ಜಾಲತಾಣ ಮೋನಿಟರಿಂಗ್ ವ್ಯವಸ್ಥೆ ?

11-09-24 08:19 pm       Mangalore Correspondent   ಕರಾವಳಿ

ದೇಶದಲ್ಲಿ ಗಲಭೆ ಎಬ್ಬಿಸಲು ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ಸಂಚು ಹೂಡಿದೆಯಾ ಅನ್ನುವ ಗಂಭೀರ ಅನುಮಾನ ಮೂಡಿದೆ. ಇದಕ್ಕೆ ಕಾರಣವಾಗಿರುವುದು, ಪ್ರಬಲ ಜಾಲತಾಣ ಫೇಸ್ಬುಕ್ ನಲ್ಲಿ ಹಿಂದು ದೇವರನ್ನು ನಿಂದಿಸಿ ಹಾಕಿರುವ ಪೋಸ್ಟ್ ಗಳು ಮತ್ತು ಅದಕ್ಕೆ ಬಂದಿರುವ ಕಮೆಂಟುಗಳು.

ಮಂಗಳೂರು, ಸೆ.11: ದೇಶದಲ್ಲಿ ಗಲಭೆ ಎಬ್ಬಿಸಲು ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ಸಂಚು ಹೂಡಿದೆಯಾ ಅನ್ನುವ ಗಂಭೀರ ಅನುಮಾನ ಮೂಡಿದೆ. ಇದಕ್ಕೆ ಕಾರಣವಾಗಿರುವುದು, ಪ್ರಬಲ ಜಾಲತಾಣ ಫೇಸ್ಬುಕ್ ನಲ್ಲಿ ಹಿಂದು ದೇವರನ್ನು ನಿಂದಿಸಿ ಹಾಕಿರುವ ಪೋಸ್ಟ್ ಗಳು ಮತ್ತು ಅದಕ್ಕೆ ಬಂದಿರುವ ಕಮೆಂಟುಗಳು. ಇದರ ಹಿಂದೆ ಪಾಕ್ ಮತ್ತು ಬಾಂಗ್ಲಾ ಮೂಲದವರೇ ಹೆಚ್ಚಿರುವಂತೆ ಕಾಣುತ್ತಿದ್ದು, ಇದನ್ನೆಲ್ಲ ಹತ್ತಿಕ್ಕುವ ಸ್ಥಾನದಲ್ಲಿದ್ದವರು ಗಾಢ ನಿದ್ದೆಗೆ ಜಾರಿದ್ದಾರೆಯೇ ಎನ್ನುವ ಪ್ರಶ್ನೆ ಎದುರಾಗಿದೆ.  

Fact Vid ಎನ್ನುವ ಫೇಸ್ಬುಕ್ ಪೇಜಿನಲ್ಲಿ ಹಿಂದು ದೇವರನ್ನು ವಿಕೃತವಾಗಿ ಚಿತ್ರಿಸಿ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ. ಅಷ್ಟೇ ಅಲ್ಲ, ಹಿಂದು ದೇವರುಗಳ ಚಿತ್ರಗಳನ್ನು ಬಳಸಿ ಮುಸ್ಲಿಮರಿಗೆ ಒದೆಯುವ ರೀತಿ ಚಿತ್ರಿಸಲಾಗಿದೆ. ಕೆಲವು ಪೋಸ್ಟ್ ಗಳಲ್ಲಿ ಶಿವನನ್ನು ವಿಕಾರ ರೂಪದಲ್ಲಿ ಚಿತ್ರಿಸಿದ್ದು, ಯುವತಿಯರಿಗೆ ಮುತ್ತಿಕ್ಕುವ ರೀತಿ, ಹಂದಿಗೆ ಮುತ್ತಿಕ್ಕುವ ರೀತಿ ಆಧುನಿಕ ಟೆಕ್ನಾಲಜಿ ಬಳಸಿ ವಿಕೃತಿ ತೋರಲಾಗಿದೆ.

ಎರಡು ವಾರಗಳ ಹಿಂದಿನಿಂದ ಈ ರೀತಿಯ ಚಿತ್ರಗಳನ್ನು ದಿನವಿಡೀ ಪೋಸ್ಟ್ ಮಾಡಲಾಗುತ್ತಿದ್ದು, ಅದಕ್ಕೆ ಪಾಕಿಸ್ತಾನ ಮತ್ತು ಬಾಂಗ್ಲಾ ಮೂಲದವರು ಹಿಂದು ದೇವರನ್ನು ನಿಂದಿಸಿ ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ, ಫೇಕ್ ಐಡಿಗಳಿಂದ ನಿಂದನಾತ್ಮಕ ಬರಹಗಳನ್ನು ಪೋಸ್ಟ್ ಮಾಡಲಾಗಿದೆ. Fact Vid ಎನ್ನುವ ಫೇಸ್ಬುಕ್ ಪೇಜನ್ನು 29 ಸಾವಿರ ಮಂದಿ ಫಾಲೋ ಮಾಡುತ್ತಿದ್ದು, ಹೆಚ್ಚಿನವರು ಮುಸ್ಲಿಮರು ಮತ್ತು ಅದರಲ್ಲೂ ಪಾಕ್, ಬಾಂಗ್ಲಾ ಮೂಲದವರ ರೀತಿ ಕಾಣುತ್ತಿದ್ದಾರೆ. ಇದೇ ವೇಳೆ, Fact Vid ಎನ್ನುವ ಪೇಜಿಗೆ ಪ್ರತಿಯಾಗಿ ಮತ್ತೊಂದು Two message ಎನ್ನುವ ಪೇಜನ್ನೂ ಕ್ರಿಯೇಟ್ ಮಾಡಲಾಗಿದ್ದು, ಅದರಲ್ಲಿ ಮುಸ್ಲಿಮರನ್ನು ಅವಹೇಳನ ಮಾಡುವ ರೀತಿ ಚಿತ್ರಿಸಲಾಗಿದೆ.

ಸರಿಯಾಗಿ ಗಮನಿಸಿದರೆ, ಇವರೆಡನ್ನೂ ಒಂದೇ ತಂಡದವರು ನಿರ್ವಹಿಸುವಂತೆ ತೋರುತ್ತಿದೆ. ಎಐ ಟೆಕ್ನಾಲಜಿ ಮೂಲಕ ವಿಕೃತ ಫೋಟೋಗಳನ್ನು ಕ್ರಿಯೇಟ್ ಮಾಡಿ, ಹಿಂದು- ಮುಸ್ಲಿಮರ ಭಾವನೆಯನ್ನು ಕೆದಕುವ ಯತ್ನ ಮಾಡಲಾಗಿದೆ. ಆಮೂಲಕ ದೇಶದಲ್ಲಿ ಗಲಭೆ ಎಬ್ಬಿಸಲು ಸಂಚು ಹೂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಬಗ್ಗೆ ಬಹಳಷ್ಟು ಫೇಸ್ಬುಕ್ ಬಳಕೆದಾರರು ಖಂಡಿಸಿ ಪೋಸ್ಟ್ ಮಾಡಿದ್ದಾರೆ. ಕೋಮು ಗಲಭೆಗೆ ಸಂಚು ಮಾಡುತ್ತಿದ್ದೀರಿ ಎಂದು ಗರಂ ಆಗಿದ್ದಾರೆ. ಇಷ್ಟೆಲ್ಲ ಆಗಿದ್ದರೂ, ಎಲ್ಲವನ್ನೂ ಗಮನಿಸುತ್ತಾರೆ ಎನ್ನುವ ಪೊಲೀಸರಾಗಲೀ, ದೇಶದ ಇಂಟೆಲಿಜೆನ್ಸಿಯಾಗಲೀ, ಸ್ವತಃ ಫೇಸ್ಬುಕ್ ಕಂಪನಿಯಾಗಲೀ ಕ್ರಮ ಕೈಗೊಂಡಿಲ್ಲ. ಭಾರತ ಸರಕಾರ, ಪೊಲೀಸರು ಎಲರ್ಟ್ ಆದರೆ ಅರೆಕ್ಷಣದಲ್ಲಿ ಇದನ್ನೆಲ್ಲ ಇನ್ನಿಲ್ಲವಾಗಿಸಬಹುದು. ಎರಡು ವಾರಗಳಿಂದ ಫೇಕ್ಟ್ ವಿದ್ ಎನ್ನುವ ಹೆಸರಲ್ಲಿ ಹದ್ದುಮೀರಿದ ವರ್ತನೆ ಆಗುತ್ತಿದ್ದರೂ, ಹಿಂದು- ಮುಸ್ಲಿಮರು ಬಡಿದಾಡುತ್ತಿದ್ದರೂ ಇದನ್ನೆಲ್ಲ ಮೋನಿಟರಿಂಗ್ ಮಾಡಬೇಕಾದ ವ್ಯವಸ್ಥೆಗಳು ನಿದ್ದೆ ಜಾರಿದೆಯೋ ಅನಿಸುತ್ತಿದೆ.

ಒಂದು ತಿಂಗಳ ಹಿಂದಷ್ಟೇ ಬಾಂಗ್ಲಾದೇಶದಲ್ಲಿ ಗಲಭೆ ನಡೆದು ಅಲ್ಲಿನ ಪ್ರಧಾನಿಯೇ ದೇಶದಿಂದ ಓಡಿ ಹೋಗುವಂತಹ ಸ್ಥಿತಿಯಾಗಿತ್ತು. ಹಿಂದುಗಳನ್ನು ಗುರಿಯಾಗಿಸಿ ದಾಳಿಯಾಗಿತ್ತು. ಆನಂತರ, ಇಲ್ಲಿನ ಕೆಲವು ರಾಜಕಾರಣಿಗಳು ಭಾರತದಲ್ಲಿಯೂ ಅಂತಹದ್ದೇ ಸ್ಥಿತಿ ಬರಲಿದೆ ಎನ್ನುವ ಗುಮಾನಿ ವ್ಯಕ್ತಪಡಿಸಿದ್ದರು. ಅದಕ್ಕೆ ಪೂರಕ ಎನ್ನುವ ರೀತಿ ಇಡೀ ದೇಶಾದ್ಯಂತ ನೆಟ್ವರ್ಕ್ ಇರುವ ಫೇಸ್ಬುಕ್ ಪೇಜ್ ಸೃಷ್ಟಿಸಿ ಹಿಂದು – ಮುಸ್ಲಿಮರ ಮಧ್ಯೆ ಗಲಭೆ ಎಬ್ಬಿಸಲು ಸಂಚು ಹೂಡಿರುವುದು ಕಂಡುಬರುತ್ತಿದೆ.

Mangalore Fact Vid Facebook page pictures of Hindu gods show in dirty manner goes viral. This page has got 29 thousand followers in which most of them are muslims belonging from Pak and Bangladesh. A case has been filed in this matter to Urwa police.