ಬ್ರೇಕಿಂಗ್ ನ್ಯೂಸ್

Satish Kumpala, Mangalore: ಉಸ್ತುವಾರಿ ಸಚಿವರು ಎಲ್ಲಿ ನಿದ್ದೆ ಮಾಡುತ್ತಿದ್ದಾರೆ, ಕಿಡಿಗೇಡಿ ಸವಾಲು ಹಾಕಿದ್ದನ್ನು ಪ್ರಶ್ನಿಸಿದರೆ ಎಫ್ಐಆರ್ ದಾಖಲಿಸುತ್ತಾರೆ, ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ರೆ ಕೇಸು ಮಾಡಲ್ಲ, ಶರಣ್ ಪಂಪ್ವೆಲ್ ಮಾತಾಡಿದ್ದರಲ್ಲಿ ತಪ್ಪೇನಿದೆ ? ಸತೀಶ್ ಕುಂಪಲ ಪ್ರಶ್ನೆ    |    Brijesh Chowta, Msez, JBF: ಎಂಎಸ್ಇಝೆಡ್‌ ಗೆ ಭೂಮಿ ಕೊಟ್ಟಿದ್ದ ಜೆಬಿಎಫ್ ಕಂಪೆನಿ ಕುಟುಂಬಸ್ಥರಿಗೆ ಕೊನೆಗೂ ಜಿಎಂಪಿಎಲ್‌ ನಲ್ಲಿ ಉದ್ಯೋಗ ; ಸಂಸದ ಕ್ಯಾ.ಚೌಟ ಮನವಿಗೆ ತುರ್ತು ಸ್ಪಂದಿಸಿ ಸಮಸ್ಯೆ ಬಗೆಹರಿಸಿದ ಕೇಂದ್ರ ಪೆಟ್ರೋಲಿಯಂ ಸಚಿವ    |    Udupi, Sunil Kumar, Kota srinivas, CM: ರಾಜ್ಯ ಸರ್ಕಾರದಿಂದ ಕರಾವಳಿ ಜಿಲ್ಲೆಗಳ ನಿರ್ಲಕ್ಷ್ಯ ; ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುತ್ತೇವೆ, ಎರಡು ಜಿಲ್ಲೆಗಳಲ್ಲಿ ಜನಾಂದೋಲನಕ್ಕೆ ನಿರ್ಧಾರ    |   

Tulu Tigalari, Mangalore: ತುಳು ತಿಗಳಾರಿ ಲಿಪಿ ಸೇರಿ ಏಳು ಹೊಸ ಲಿಪಿಗಳನ್ನು ಪ್ರಕಟಿಸಿದ ಯುನಿಕೋಡ್ ; ದಕ್ಷಿಣ ಭಾರತದಲ್ಲಿ ಬ್ರಾಹ್ಮಣರು ಬಳಸುತ್ತಿದ್ದ ಲಿಪಿಯೆಂದು ಉಲ್ಲೇಖ

11-09-24 10:47 pm       Mangalore Correspondent   ಕರಾವಳಿ

ಅಮೆರಿಕದ ಯುನಿಕೋಡ್ ಕನ್ಸೋರ್ಟಿಯಂ ತುಳು ತಿಗಳಾರಿ ಸೇರಿದಂತೆ ಏಳು ಭಾಷೆಗಳ ಹೊಸ ಲಿಪಿಯನ್ನು ಹೊಸತಾಗಿ ಪ್ರಕಟಿಸಿದೆ. ಯುನಿಕೋಡ್ 16.0 ಹೊಸ ವರ್ಶನ್ ಬಿಡುಗಡೆಯಾಗಿದ್ದು ಇದಲ್ಲಿ ತುಳು ತಿಗಳಾರಿ ಸೇರಿದಂತೆ ಜಗತ್ತಿನ ಏಳು ಹೊಸ ಭಾಷೆಗಳ ಲಿಪಿಯನ್ನು ಪರಿಚಯಿಸಿದೆ.

ಮಂಗಳೂರು, ಸೆ.11: ಅಮೆರಿಕದ ಯುನಿಕೋಡ್ ಕನ್ಸೋರ್ಟಿಯಂ ತುಳು ತಿಗಳಾರಿ ಸೇರಿದಂತೆ ಏಳು ಭಾಷೆಗಳ ಹೊಸ ಲಿಪಿಯನ್ನು ಹೊಸತಾಗಿ ಪ್ರಕಟಿಸಿದೆ. ಯುನಿಕೋಡ್ 16.0 ಹೊಸ ವರ್ಶನ್ ಬಿಡುಗಡೆಯಾಗಿದ್ದು ಇದಲ್ಲಿ ತುಳು ತಿಗಳಾರಿ ಸೇರಿದಂತೆ ಜಗತ್ತಿನ ಏಳು ಹೊಸ ಭಾಷೆಗಳ ಲಿಪಿಯನ್ನು ಪರಿಚಯಿಸಿದೆ.

ತುಳು ತಿಗಳಾರಿಯನ್ನು ದಕ್ಷಿಣ ಪಶ್ಚಿಮ ಭಾರತದ ಐತಿಹಾಸಿಕ ಲಿಪಿಯೆಂದು ಯುನಿಕೋಡ್ ಬಣ್ಣಿಸಿದೆ. ಇದಲ್ಲದೆ, ಪಶ್ಚಿಮ ಆಫ್ರಿಕಾದಲ್ಲಿ ಬಳಕೆಯಲ್ಲಿರುವ ಗ್ಯಾರೇ ಎನ್ನುವ ಆಧುನಿಕ ಲಿಪಿಯನ್ನೂ ಪ್ರಕಟಿಸಿದೆ. ಪೂರ್ವ ಭಾರತ ಮತ್ತು ನೇಪಾಳದಲ್ಲಿ ಬಳಕೆಯಲ್ಲಿರುವ ಗುರುಂಗ್ ಖೇಮಾ, ಕಿರಾಟ್ ರೇ, ಓಲ್ ಒನಾಲ್ ಮತ್ತು ಸುನುವಾರ್ ಎನ್ನುವ ಆಧುನಿಕ ಲಿಪಿಗಳೂ ಇವೆಯೆಂದು ಹೇಳಿದೆ. ಅಲ್ಬೇನಿಯಾ ದೇಶದಲ್ಲಿ ಬಳಕೆಯಲ್ಲಿರುವ ತೋಧ್ರಿ ಎಂಬ ಐತಿಹಾಸಿಕ ಲಿಪಿಯನ್ನೂ ಹೊಸತಾಗಿ ಪ್ರಕಟಿಸಿದ್ದಾಗಿ ಹೇಳಿದೆ. ಈಗ ಒಟ್ಟು 5185 ಅಕ್ಷರಗಳನ್ನು ಜೋಡಿಸಿದ್ದು, ಇದರೊಂದಿಗೆ ಯುನಿಕೋಡ್ ಒಟ್ಟಾರೆ 154,998 ಅಕ್ಷರಗಳನ್ನು ಜೋಡಿಸಿದೆ ಎಂದು ಹೇಳಿಕೊಂಡಿದೆ. ಇದಲ್ಲದೆ, ಕೆಲವು ಭಾಷೆಗಳ ಲಿಪಿಗಳಿಗೆ ಹೊಸ ಅಕ್ಷರಗಳನ್ನೂ 16ನೇ ವರ್ಶನ್ನಲ್ಲಿ ಅಳವಡಿಸಲಾಗಿದೆ.

ತಿಗಳಾರಿ ಲಿಪಿಯ ಕುರಿತ ಲೇಖನದಲ್ಲಿ ತಿಗಳಾರಿ, ತುಳು ಲಿಪಿಯೆಂದು ಕರೆಯಲಾಗುವ ಈ ಲಿಪಿಯನ್ನು ದಕ್ಷಿಣ ಭಾರತದಲ್ಲಿ ಬ್ರಾಹ್ಮಣರು ತುಳು, ಕನ್ನಡ ಮತ್ತು ಸಂಸ್ಕೃತ ಬರೆಯಲು ಬಳಸುತ್ತಿದ್ದರು. ಆರಂಭದಲ್ಲಿ ವೇದಾಧ್ಯಯನ, ಸಂಸ್ಕೃತ ಶ್ಲೋಕಗಳನ್ನು ಬರೆಯುತ್ತಿದ್ದರು. ಆನಂತರ, ಗ್ರಂಥ ಲಿಪಿಯಾಗಿ ಬದಲಾಗಿತ್ತು. ಇದನ್ನೇ ಕನ್ನಡ ಮಾತನಾಡುವ ಮಲೆನಾಡು ಪ್ರದೇಶದಲ್ಲಿ ತಿಗಳಾರಿ ಎಂದೂ, ತುಳು ಮಾತನಾಡುವ ಪ್ರದೇಶದಲ್ಲಿ ತುಳು ಲಿಪಿ ಎಂದೂ ಕರೆಯುತ್ತಾರೆ. ಈ ಲಿಪಿಯು ಮಲಯಾಳಂ ಲಿಪಿಯ ಜೊತೆಗೆ ಹತ್ತಿರದ ಸಾಮ್ಯತೆ ಹೊಂದಿದೆ. ಮಲಯಾಳ ಕೂಡ ಇದೇ ಗ್ರಂಥ ಲಿಪಿಯಿಂದ ಪ್ರತ್ಯೇಕಗೊಂಡು ಅಭಿವೃದ್ಧಿಯಾಗಿತ್ತು.

ತುಳು ತಿಗಳಾರಿ ಲಿಪಿಯನ್ನು ಯುನಿಕೋಡ್ ನಲ್ಲಿ ಪ್ರಕಟಿಸಿರುವುದಕ್ಕೆ ಪೂರಕವಾಗಿ ದಕ್ಷಿಣ ಭಾರತದ ವಿದ್ವಾಂಸರು ನೀಡಿರುವ ದಾಖಲೆಗಳನ್ನೂ ಯುನಿಕೋಡ್ ಅಂಕಿ ಅಂಶಗಳ ಸಹಿತ ತೋರಿಸಿದೆ.

Amidst ongoing calls to include the Tulu language in the 8th Schedule of the Indian Constitution, the Tulu-Tigalari script has now been added to Unicode. This is a significant development as it follows the availability of Tulu translations on Wikipedia and Google, making Tulu accessible in Unicode.