ಬ್ರೇಕಿಂಗ್ ನ್ಯೂಸ್

Satish Kumpala, Mangalore: ಉಸ್ತುವಾರಿ ಸಚಿವರು ಎಲ್ಲಿ ನಿದ್ದೆ ಮಾಡುತ್ತಿದ್ದಾರೆ, ಕಿಡಿಗೇಡಿ ಸವಾಲು ಹಾಕಿದ್ದನ್ನು ಪ್ರಶ್ನಿಸಿದರೆ ಎಫ್ಐಆರ್ ದಾಖಲಿಸುತ್ತಾರೆ, ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ರೆ ಕೇಸು ಮಾಡಲ್ಲ, ಶರಣ್ ಪಂಪ್ವೆಲ್ ಮಾತಾಡಿದ್ದರಲ್ಲಿ ತಪ್ಪೇನಿದೆ ? ಸತೀಶ್ ಕುಂಪಲ ಪ್ರಶ್ನೆ    |    Brijesh Chowta, Msez, JBF: ಎಂಎಸ್ಇಝೆಡ್‌ ಗೆ ಭೂಮಿ ಕೊಟ್ಟಿದ್ದ ಜೆಬಿಎಫ್ ಕಂಪೆನಿ ಕುಟುಂಬಸ್ಥರಿಗೆ ಕೊನೆಗೂ ಜಿಎಂಪಿಎಲ್‌ ನಲ್ಲಿ ಉದ್ಯೋಗ ; ಸಂಸದ ಕ್ಯಾ.ಚೌಟ ಮನವಿಗೆ ತುರ್ತು ಸ್ಪಂದಿಸಿ ಸಮಸ್ಯೆ ಬಗೆಹರಿಸಿದ ಕೇಂದ್ರ ಪೆಟ್ರೋಲಿಯಂ ಸಚಿವ    |    Udupi, Sunil Kumar, Kota srinivas, CM: ರಾಜ್ಯ ಸರ್ಕಾರದಿಂದ ಕರಾವಳಿ ಜಿಲ್ಲೆಗಳ ನಿರ್ಲಕ್ಷ್ಯ ; ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುತ್ತೇವೆ, ಎರಡು ಜಿಲ್ಲೆಗಳಲ್ಲಿ ಜನಾಂದೋಲನಕ್ಕೆ ನಿರ್ಧಾರ    |   

Mangalore, St Antony bus, HK News: HK Impact: ಫುಟ್ ಬೋರ್ಡಿನಲ್ಲಿ ನೇತಾಡಿದ ವಿದ್ಯಾರ್ಥಿಗಳು ; ತಲಪಾಡಿ ಖಾಸಗಿ ಬಸ್ಸಿನ ಸಿಬಂದಿ ವಿರುದ್ಧ ಕೇಸು ದಾಖಲು

12-09-24 10:21 pm       Mangalore Correspondent   ಕರಾವಳಿ

ಖಾಸಗಿ ಸಿಟಿ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿಕೊಂಡಿದ್ದರಿಂದ ವಿದ್ಯಾರ್ಥಿಗಳು ಫುಟ್ ಬೋರ್ಡಿನಲ್ಲಿ ನೇತಾಡುತ್ತ ತೆರಳುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಹೆಡ್ ಲೈನ್ ಕರ್ನಾಟಕ ವಿಡಿಯೋ ಸಹಿತ ಸುದ್ದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಬಸ್ಸಿನ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಕೇಸು ದಾಖಲಿಸಿದ್ದಾರೆ.

ಮಂಗಳೂರು, ಸೆ.12: ಖಾಸಗಿ ಸಿಟಿ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿಕೊಂಡಿದ್ದರಿಂದ ವಿದ್ಯಾರ್ಥಿಗಳು ಫುಟ್ ಬೋರ್ಡಿನಲ್ಲಿ ನೇತಾಡುತ್ತ ತೆರಳುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಹೆಡ್ ಲೈನ್ ಕರ್ನಾಟಕ ವಿಡಿಯೋ ಸಹಿತ ಸುದ್ದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಬಸ್ಸಿನ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಕೇಸು ದಾಖಲಿಸಿದ್ದಾರೆ.

ತಲಪಾಡಿಯಿಂದ ಮಂಗಳೂರಿಗೆ ಬರುತ್ತಿದ್ದ 42 ನಂಬರಿನ ಖಾಸಗಿ ಸಿಟಿ ಬಸ್ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಗೆ ತಲುಪಿದಾಗ, ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿದ್ದು ಈ ವೇಳೆ ಫುಡ್ ಬೋರ್ಡಿನಲ್ಲಿ ನೇತಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಹೊರಕ್ಕೆಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದ. ಇದರ ವಿಡಿಯೋವನ್ನು ಹಿಂದಿನಿಂದ ಬರುತ್ತಿದ್ದ ಆಟೋ ಚಾಲಕರೊಬ್ಬರು ಸೆರೆಹಿಡಿದಿದ್ದು ಅಪಘಾತ ಆದರೆ ಯಾರು ಹೊಣೆಯೆಂದು ಪ್ರಶ್ನಿಸಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

ವಿಡಿಯೋ ಆಧರಿಸಿ ಹೆಡ್ ಲೈನ್ ಕರ್ನಾಟಕ ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿ ಸುದ್ದಿ ಪ್ರಕಟಿಸಿದ್ದಲ್ಲದೆ, ಟ್ವಿಟರ್ ನಲ್ಲಿ ವಿಡಿಯೋವನ್ನು ಮಂಗಳೂರು ಪೊಲೀಸ್ ಕಮಿಷನರ್ ಮತ್ತು ಎಡಿಜಿಪಿ ಅಲೋಕ್ ಕುಮಾರ್ ಗೆ ಟ್ಯಾಗ್ ಮಾಡಿತ್ತು. ಇದರಿಂದ ಅಲರ್ಟ್ ಆಗಿರುವ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್, ಬಸ್ಸಿನ ಸಿಬಂದಿ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ. ವಿಡಿಯೋ ಆಧರಿಸಿ ಸುಮೊಟೊ ಪ್ರಕರಣ ದಾಖಲಿಸಲು ಅವಕಾಶ ಇದ್ದರೂ, ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಆಟೋ ಚಾಲಕನಲ್ಲಿಯೇ ದೂರು ಪಡೆದು ಪ್ರಕರಣ ದಾಖಲಿಸಿದ್ದಾರೆ.

ಬಸ್ಸಿನ ಚಾಲಕ ಮಹಮ್ಮದ್ ಫಯಾಜ್ ಮತ್ತು ನಿರ್ವಾಹಕ ಮನೀಶ್ ತೀರಾ ನಿರ್ಲಕ್ಷ್ಯದಿಂದ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗಿದ್ದಾರೆ. ಇದರಿಂದ ಪ್ರಯಾಣಿಕರ ಜೀವಕ್ಕೆ ಅಪಾಯಕ್ಕೀಡು ಮಾಡುವಂತೆ ವರ್ತಿಸಿದ್ದಾರೆ ಎಂದು ಕೇಸು ದಾಖಲಾಗಿದೆ.

Mangalore St Antony bus driver and conductor booked by traffic police after Headline Karnataka news video goes viral on overloading.