Rahul Gandhi, Hariprakash Konemane, Mangalore: ರಾಹುಲ್ ಗಾಂಧಿ ನಕ್ಸಲರು, ಮತಾಂಧರ ಜೊತೆಗಿದ್ದಾರೆ, ಅಜ್ಜ ನೆಹರು ರೀತಿಯಲ್ಲೇ ಮೀಸಲಾತಿ ತೆಗೆಯುವ ಮಾತನ್ನಾಡಿದ್ದಾರೆ, ಕೋಟ್ಯಂತರ ದಲಿತರ ಕ್ಷಮೆಯಾಚನೆ ಮಾಡಬೇಕು ; ಹರಿಪ್ರಕಾಶ್ ಕೋಣೆಮನೆ ಆಗ್ರಹ

13-09-24 08:28 pm       Mangalore Correspondent   ಕರಾವಳಿ

ರಾಹುಲ್ ಗಾಂಧಿ ತನ್ನ ಜೊತೆಗೆ ನಕ್ಸಲರು, ಮತಾಂಧರು, ಭಯೋತ್ಪಾದಕರನ್ನು ಸೇರಿಸಿಕೊಂಡು ದೇಶದ ವಿರುದ್ಧ ತಾನಿದ್ದೇನೆಂದು ತೋರಿಸುತ್ತಿದ್ದಾರೆ. ದೇಶದ ಬಗ್ಗೆ, ಸೇನೆಯ ಬಗ್ಗೆ ಅಗೌರವ ತೋರುತ್ತಿದ್ದಾರೆ.

ಮಂಗಳೂರು, ಸೆ.13: ರಾಹುಲ್ ಗಾಂಧಿ ತನ್ನ ಜೊತೆಗೆ ನಕ್ಸಲರು, ಮತಾಂಧರು, ಭಯೋತ್ಪಾದಕರನ್ನು ಸೇರಿಸಿಕೊಂಡು ದೇಶದ ವಿರುದ್ಧ ತಾನಿದ್ದೇನೆಂದು ತೋರಿಸುತ್ತಿದ್ದಾರೆ. ದೇಶದ ಬಗ್ಗೆ, ಸೇನೆಯ ಬಗ್ಗೆ ಅಗೌರವ ತೋರುತ್ತಿದ್ದಾರೆ. ವಿದೇಶದಲ್ಲಿ ಕುಳಿತು ಭಾರತದ ಚುನಾವಣಾ ವ್ಯವಸ್ಥೆಯನ್ನು ಟೀಕಿಸುತ್ತಿದ್ದಾರೆ. ಸೂಕ್ತ ಸಂದರ್ಭದಲ್ಲಿ ದಲಿತರ, ಹಿಂದುಳಿದವರ ಮೀಸಲು ವ್ಯವಸ್ಥೆಯನ್ನು ತೆಗೆದುಹಾಕುವುದಾಗಿ ಹೇಳುತ್ತಿದ್ದಾರೆ. ಆಮೂಲಕ ಸಂವಿಧಾನಕ್ಕೆ ಒಂದೆಡೆ ಅಪಚಾರ ಎಸಗಿದ್ದು, ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ನಿಜಬಣ್ಣವನ್ನು ತೆರೆದಿಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಟೀಕಿಸಿದ್ದಾರೆ.
 
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಭಾರತದ ಬಗ್ಗೆ ತಪ್ಪು ಕಲ್ಪನೆ ಬರುವ ರೀತಿ ಅಮೆರಿಕದಲ್ಲಿ ನಿಂತು ರಾಹುಲ್ ಮಾತನಾಡಿದ್ದಾರೆ. ಸೂಕ್ತ ಸಂದರ್ಭದಲ್ಲಿ ಮೀಸಲಾತಿ ವ್ಯವಸ್ಥೆ ತೆಗೆದು ಹಾಕುವುದಾಗಿ ಹೇಳಿದ್ದು ನಾವಿದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಮೀಸಲಾತಿ ತೆಗೆಯುವ ಸೂಕ್ತ ಸಂದರ್ಭ ಯಾವುದು ಎಂಬುದನ್ನು ಕೇಳಬಯಸುತ್ತೇನೆ ಎಂದರು. ಸಮಾಜದ ಕಟ್ಟಕಡೆಯ ಕೆಳಸ್ತರದ ಜಾತಿಗಳನ್ನು ಮೇಲೆ ತರುವುದಕ್ಕಾಗಿ ಮೀಸಲಾತಿ ಅನಿವಾರ್ಯ ಎಂದು ಕೋರ್ಟ್ ಹೇಳಿದೆ ಎಂಬುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Letter to Rahul Gandhi: Fight in your own territory A. J. Philip :: Indian  Currents: Articles

ರಾಹುಲ್ ಮೀಸಲಾತಿ ಕುರಿತ ಹೇಳಿಕೆ ಉದ್ದೇಶಪೂರ್ವಕವಾಗೇ ಇದೆ. 1960ರಲ್ಲಿ ಅಂದಿನ ಪ್ರಧಾನಿ ಜವಾಹರ್ ನೆಹರು ಭಾಷಣ ಮಾಡುತ್ತ ಸರ್ಕಾರಿ ವ್ಯವಸ್ಥೆಯಲ್ಲಿ ದಕ್ಷತೆ ತರುವುದಕ್ಕಾಗಿ ಮೀಸಲಾತಿ ತೆಗೆದು ಹಾಕಬೇಕೆಂದು ಹೇಳಿದ್ದರು. ಅದೇ ಹೇಳಿಕೆಯನ್ನು ಈಗ ಮರಿ ಮೊಮ್ಮಗ ಉಲ್ಲೇಖಿಸಿದ್ದಾರೆ. ಆಮೂಲಕ ಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿದೆ, ದಲಿತೋದ್ಧಾರದ ಮಾತು ಮೊಸಳೆ ಕಣ್ಣೀರು ಅಂತ ದೃಢಪಡಿಸಿದೆ. ಈ ಹೇಳಿಕೆಯ ಕಾರಣಕ್ಕೆ ರಾಹುಲ್ ಗಾಂಧಿ ಕೋಟ್ಯಂತರ ದಲಿತ ವರ್ಗದ, ಹಿಂದುಳಿದ ವರ್ಗದ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.

SDPI members admit that the banned Jihadi outfit PFI made SDPI a backyard  of its erstwhile cadres to continue operations in Karnataka: Full details

ವಿಭಜಕ ಶಕ್ತಿಗಳ ಕೈಯಲ್ಲಿ ಆಡಳಿತ

ರಾಜ್ಯದಲ್ಲಿ ಪಿಎಫ್ಐ, ಎಸ್ಡಿಪಿಐ ಮತ್ತು ವಿಭಜಕ ಶಕ್ತಿಗಳು ಆಡಳಿತ ನಡೆಸುತ್ತಿರುವಂತೆ ಕಾಣುತ್ತಿದೆ. ಮೊದಲೇ ನಮಗೆ ರಾಜ್ಯದಲ್ಲಿ ಪಿಎಫ್ಐ, ಎಸ್ಡಿಪಿಐ ಅಧಿಕಾರಕ್ಕೆ ಬಂದಿದೆ ಎಂಬ ಅನುಮಾನ ಇತ್ತು. ಈಗ ಆ ಮಾತು ದೃಢವಾಗಿದೆ. ಸತತ ಎರಡನೇ ವರ್ಷವೂ ರಾಜ್ಯದಲ್ಲಿ ಗಣಪತಿ ವಿಸರ್ಜನೆ ವೇಳೆ ಗಲಭೆ ಕೃತ್ಯ ನಡೆಸಿದ್ದಾರೆ. ನಾಗಮಂಗಲದ ಘಟನೆ ನೋಡಿದರೆ ಪೂರ್ವಯೋಜಿತ ಅನ್ನುವ ಸಂಶಯ ಬರುತ್ತದೆ. ಯಾಕಂದ್ರೆ, ಅಲ್ಲಿ ಘಟನೆ ನಡೆಯುವಾಗ ಪೊಲೀಸರೇ ಇರಲಿಲ್ಲ. ಗಣೇಶನ ವಿಸರ್ಜನೆಗೆ ಭದ್ರತೆ ಕೊಡುವ ಕಾಳಜಿ ರಾಜ್ಯದ ಪೊಲೀಸರಿಗೆ, ಸರ್ಕಾರಕ್ಕೆ ಇಲ್ಲದಿರುವುದು ವಿಭಜಕ ಶಕ್ತಿ ಬಲಗೊಂಡಿರುವುದನ್ನು ಸೂಚಿಸುತ್ತದೆ ಎಂದು ಹೇಳಿದರು.
 
ನಾಗಮಂಗಲದಲ್ಲಿ ಗಲಭೆ ನಡೆಸಿದವರ ಜೊತೆಗೆ ಗಣೇಶೋತ್ಸವ ಆಯೋಜಕರ ಮೇಲೂ ಕೇಸು ದಾಖಲಿಸಿದ್ದಾರೆ. ದಾಳಿ ನಡೆಸಿದವರೊಂದಿಗೆ 26ನೇ ಆರೋಪಿಯೆಂದು ಆಯೋಜಕರನ್ನು ಸೇರಿಸಿದ್ದಾರೆ. ದೊಂಬಿ ನಡೆದು ಹತ್ತಾರು ಅಂಗಡಿ, ವಾಹನಗಳಿಗೆ ಬೆಂಕಿ ಹಾಕಿದ್ದರೂ ಅದೊಂದು ಸಣ್ಣ ಘಟನೆ, ಮರೆತು ಬಿಡಿ ಎಂದು ಗೃಹ ಸಚಿವರು ಕ್ಷುಲ್ಲಕ ಮಾತಗಳನ್ನಾಡಿದ್ದಾರೆ. ಮಂಗಳೂರಿನ ಕುಕ್ಕರ್ ಬಾಂಬ್ ಸಂದರ್ಭದಲ್ಲಿ ಡಿಕೆಶಿ ಹೇಳಿರುವ ಮಾತಿಗೂ ಪರಮೇಶ್ವರ್ ಮಾತಿಗೂ ತಾಳೆಯಾಗುತ್ತಿದೆ. ಇವರು ವಿಭಜಕ ಶಕ್ತಿಗಳ ಪರವಾಗಿದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಹೇಳಿದರು.

INDIA alliance is winning almost 300 seats: Karnataka deputy CM DK  Shivakumar | Bengaluru - Hindustan Times

Don't know why Deve Gowda said they were pressurised by Congress to form  Govt.: Dr.

ದೇಶ ಒಡೆಯುವುದರಲ್ಲೇ ಕಾಂಗ್ರೆಸಿಗೆ ಆಸಕ್ತಿ

ಜಮ್ಮು ಕಾಶ್ಮೀರದಲ್ಲಿ ಚುನಾವಣೆ ಆಗುತ್ತಿರುವುದಕ್ಕೆ ಪ್ರಧಾನಿ ಮೋದಿಯವರ ದಿಟ್ಟ ನಿರ್ಧಾರ ಕಾರಣ. ಅಲ್ಲಿ ದೇಶದ ಧ್ವಜ ಹಾರಿಸುವುದಕ್ಕೂ ನಿರ್ಬಂಧ ವಿಧಿಸಿದ್ದ 370 ವಿಧಿಯನ್ನು ತೆಗೆದು ಹಾಕಿ, ಉಗ್ರರನ್ನು ಸದೆಬಡಿದು ಚುನಾವಣೆ ನಡೆಸುತ್ತಿದ್ದರೆ, ಕಾಂಗ್ರೆಸ್ ಪಕ್ಷವು ಪಾಕಿಸ್ತಾನದ ಪರವಾಗಿರುವ ರಾಜಕೀಯ ಶಕ್ತಿಗಳ ಜೊತೆ ನಿಂತು ತಾವು ಅಧಿಕಾರಕ್ಕೆ ಬಂದರೆ ಮತ್ತೆ ಪ್ರತ್ಯೇಕ ಸ್ಥಾನ ಕೊಡಿಸುವ 370 ವಿಧಿ ಜಾರಿಗೆ ತರುತ್ತೇವೆಂದು ಪ್ರಣಾಳಿಕೆಯಲ್ಲಿ ಹೇಳಿದೆ. ಕಾಂಗ್ರೆಸ್ ಗೆ ಈ ದೇಶವನ್ನು ಜೋಡಿಸುವುದರಲ್ಲಿ ನಂಬಿಕೆ ಇಲ್ಲ. ಜಾತಿ, ಧರ್ಮದ ಹೆಸರಲ್ಲಿ ದೇಶ ಒಡೆಯುವುದರಲ್ಲೇ ಇದೆ, ಮತ್ತೆ ದೇಶ ವಿಭಜನೆಯ ನೆನಪನ್ನು ಮಾಡಿಕೊಟ್ಟಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ರಾಜಗೋಪಾಲ್ ರೈ, ಜಿಲ್ಲಾ ಕಾರ್ಯದರ್ಶಿ ಯತೀಶ್ ಆರ್ವಾರ್ ಮತ್ತಿತರರಿದ್ದರು.

Rahul Gandhi is with naxals and anti national persons slams state BJP spokesperson Hariprakash Konemane in Mangalore.