ಬ್ರೇಕಿಂಗ್ ನ್ಯೂಸ್
14-09-24 11:13 pm Mangalore Correspondent ಕರಾವಳಿ
ಉಳ್ಳಾಲ, ಸೆ.14: ಈದ್ ಮಿಲಾದ್ ಪ್ರಯುಕ್ತ ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಹಾಗೂ ಹಝ್ರತ್ ಸಯ್ಯದ್ ಮದನಿ ದರ್ಗಾ ವತಿಯಿಂದ ನಡೆಯುವ ಬೃಹತ್ ಸ್ವಲಾತ್ ಮೆರವಣಿಗೆ ಸೆ.16 ಸೋಮವಾರದಂದು ಬೆಳಗ್ಗೆ 7.30ಕ್ಕೆ ಕೋಟೆಪುರ ಮಸೀದಿಯಿಂದ ಕಾಲ್ನಡಿಗೆ ಮೂಲಕ ಹೊರಟು ಮುಕ್ಕಚೇರಿ, ಆಜಾದ್ ನಗರ ರಸ್ತೆಯಾಗಿ ಉಳ್ಳಾಲ ದರ್ಗಾ ವರೆಗೆ ನಡೆಯಲಿದ್ದು, ಬೈಕ್ ರ್ಯಾಲಿ, ಭಿತ್ತಿಪತ್ರ ಪ್ರದರ್ಶನಗಳನ್ನ ನಿಷೇಧಿಸಲಾಗಿದೆ ಎಂದು ದರ್ಗಾ ಅಧ್ಯಕ್ಷ ಹನೀಫ್ ಹಾಜಿ ತಿಳಿಸಿದ್ದಾರೆ.
ತೊಕ್ಕೊಟ್ಟಿನ ಸೇವಾ ಸೌಧದ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೆರವಣಿಗೆಯಲ್ಲಿ ಹಸಿರು ಪತಾಕೆ ಹೊರತು ಪಡಿಸಿ ಇತರ ಯಾವುದೇ ಧ್ವಜ ಬಳಕೆಗೆ ಅವಕಾಶ ಇರುವುದಿಲ್ಲ. ಅಹ್ಲುಸುನ್ನತ್ ವಲ್ ಜಮಾಅತ್ ಗೆ ಸಂಬಂಧಪಡದ ಕರಪತ್ರ , ಭಿತ್ತಿ ಪತ್ರ ಪ್ರದರ್ಶನ, ಅನಗತ್ಯ ಘೋಷಣೆಗಳನ್ನ ನಿರ್ಬಂಧಿಸಲಾಗಿದೆ. ಬೈಕ್ ರ್ಯಾಲಿ, ಅಸಭ್ಯವಾಗಿ ವರ್ತಿಸುವುದು, ಅಸಭ್ಯ ರೀತಿಯ ವಸ್ತ್ರಗಳನ್ನು ಸೊಂಟಕ್ಕೆ ಕಟ್ಟಿ ಸಭ್ಯತೆ ಹಾಳು ಮಾಡಲು ಅವಕಾಶ ಇರುವುದಿಲ್ಲ. ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಮಿಲಾದ್ ಜಾಥಾ ನಡೆಸಲಾಗುವುದು ಎಂದು ಹೇಳಿದರು.
ಕಳೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಜಮಾಅತ್ ಗೆ ಸಂಬಂಧಿಸದ ಹೊರಗಿನಿಂದ ಬಂದ ಯುವಕರು ಅಶಿಸ್ತಿನ ವರ್ತನೆ ತೋರಿದ್ದರು. ಮೀಲಾದ್ ರ್ಯಾಲಿಯಲ್ಲಿ ಶಿಸ್ತು ಪಾಲಿಸಿ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದೆಂದು ಉಳ್ಳಾಲ ಪ್ರದೇಶದ ಮಸೀದಿ ಆಡಳಿತ ಸಮಿತಿಗಳಿಗೆ ಪತ್ರ ಬರೆಯಲಾಗಿದೆ ಎಂದರು. ಈ ನಿರ್ದೇಶನ ಉಲ್ಲಂಘಿಸಿ ಶಿಸ್ತು ಮೀರಿ ಮೆರವಣಿಗೆ ಮಾಡುವವರು ಪೊಲೀಸರ ಕಾನೂನು ಕ್ರಮಗಳನ್ನು ಎದುರಿಸಬೇಕಾಗಬಹುದೆಂದರು.
ಕಳೆದ ವರ್ಷ ನಡೆದ ಈದ್ ಮಿಲಾದ್ ವಾಹನ ಜಾಥಾದಲ್ಲಿ ಯುವಕರು ಬೈಕ್ ಗಳ ಸೈಲೆನ್ಸರ್ ಗಳಿಗೆ ಅಳವಡಿಸಲಾದ ಕರ್ಕಶ ಮಫ್ಲರ್ ಮತ್ತು ಹಾರ್ನ್ ಗಳನ್ನ ಹೊಡೆಯುತ್ತಾ ದಿನವಿಡೀ ಉಳ್ಳಾಲದಾದ್ಯಂತ ಮೆರವಣಿಗೆ ನಡೆಸಿದಲ್ಲದೆ, ಉಳ್ಳಾಲದ ಅಬ್ಬಕ್ಕ ವೃತ್ತವನ್ನ ಏರಿ ಹಸಿರು ಪತಾಕೆಗಳನ್ನ ಬೀಸಿ ಹುಚ್ಚೆದ್ದು ಕುಣಿದು ಪ್ರಚೋದನಕಾರಿ ಘೋಷಣೆ ಕೂಗಿದ್ದ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಂಟ್ವಾಳ, ಬೆಳ್ತಂಗಡಿ, ನೆರೆ ರಾಜ್ಯ ಕಾಸರಗೋಡಿನಿಂದ ಬಂದ ಯುವಕರು ಉಳ್ಳಾಲದಲ್ಲಿ ವಾಹನ ರ್ಯಾಲಿ ನಡೆಸಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದರು. ಪ್ರವಾದಿಯವರ ಜನ್ಮ ದಿನಚಾರಣೆಯಲ್ಲಿ ಯುವಕರು ಈ ರೀತಿ ದುರ್ವರ್ತನೆ ತೋರಿದುದರ ವಿರುದ್ಧ ಮುಸ್ಲಿಂ ಸಮುದಾಯದ ಮುಖಂಡರೇ ಆಕ್ಷೇಪ ವ್ಯಕ್ತ ಪಡಿಸಿದ್ದರು. ವಾಹನಗಳ ನಂಬರ್ ಪ್ಲೇಟ್ ಆಧಾರದಲ್ಲಿ ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಹೆಚ್.ಎನ್ ಬಾಲಕೃಷ್ಣ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಯುವಕರನ್ನ ಠಾಣೆಗೆ ಕರೆಸಿ ದಂಡ ಪ್ರಯೋಗಿಸಿದಲ್ಲದೆ, ಅವರ ಪೋಷಕರ ಸಮ್ಮುಖದಲ್ಲೇ ಖಡಕ್ ವಾರ್ನಿಂಗ್ ನೀಡಿ ಕಳಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷರಾದ ಅಶ್ರಫ್ ರೈಟ್ ವೇ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಜತೆ ಕಾರ್ಯದರ್ಶಿ ಮುಸ್ತಫ ಮದನಿ ನಗರ ಉಪಸ್ಥಿತರಿದ್ದರು
No bike rally or indecent behaviour during Eid festival says Dargah committe in Mangalore.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm