ಬ್ರೇಕಿಂಗ್ ನ್ಯೂಸ್
16-09-24 11:55 am Mangalore Correspondent ಕರಾವಳಿ
ಮಂಗಳೂರು, ಸೆ.16: ನಾಗಮಂಗಲ ಕೋಮು ಕಿಚ್ಚಿನ ಬೆನ್ನಲ್ಲೇ ಕರಾವಳಿಯಲ್ಲೂ ದ್ವೇಷದ ಕಾವು ತೀವ್ರತೆ ಪಡ್ಕೊಂಡಿದೆ. ಈದ್ ಮೆರವಣಿಗೆ ತಡೆಯಿರಿ, ಶರಣ್ ಪಂಪ್ವೆಲ್ ತಾಕತ್ತಿದ್ದರೆ ಬಿಸಿ ರೋಡಿಗೆ ಬಂದು ನೋಡಲಿ ಎಂದು ಕಾಂಗ್ರೆಸ್ ಮುಖಂಡನೊಬ್ಬ ಹಾಕಿದ ಸವಾಲಿಗೆ ಹಿಂದು ಸಂಘಟನೆ ಕಾರ್ಯಕರ್ತರು ಬಿಸಿ ರೋಡಿನಲ್ಲೇ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದು ಪಾಕಿಸ್ತಾನ ಅಲ್ಲ, ನಾವು ಭಾರತದಲ್ಲಿ ಎಲ್ಲಿ ಬೇಕಾದರೂ ಬರುತ್ತೇವೆ ತಡೆಯಿರಿ ನೋಡೋಣ ಎಂದು ಪ್ರತಿ ಸವಾಲು ಹಾಕಿದ್ದಾರೆ.
ನಾಗಮಂಗಲ ಗಲಭೆ ಘಟನೆ ಖಂಡಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಮುಸ್ಲಿಮರ ಈದ್ ಮೆರವಣಿಗೆಯನ್ನು ಹಿಂದುಗಳು ವಿರೋಧಿಸಿದರೆ ಪರಿಸ್ಥಿತಿ ಏನಾಗಬಹುದು. ಇವರು ಗಲಭೆ ನಡೆಸುವುದಕ್ಕಾಗಿಯೇ ಈ ರೀತಿ ಮಾಡುತ್ತಿದ್ದಾರೆ. ಹಾಗಾಗಿ ಈ ಸಲ ಈದ್ ಮೆರವಣಿಗೆ ನಡೆಸುವುದಕ್ಕೆ ಅವಕಾಶ ನೀಡಬಾರದು ಎಂದು ಪೊಲೀಸರಿಗೆ ಆಗ್ರಹ ಮಾಡಿದ್ದರು. ಇದೇ ನೆಪದಲ್ಲಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಮಹಮ್ಮದ್ ಶರೀಫ್, ತಾಕತ್ತಿದ್ದರೆ ಶರಣ್ ಪಂಪ್ವೆಲ್ ಬಿಸಿ ರೋಡಿಗೆ ಬಂದು ನೋಡಲಿ. ಈದ್ ಮೆರವಣಿಗೆ ತಡೆಯಲಿ ಎಂದು ವಾಯ್ಸ್ ಮೆಸೇಜ್ ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಬಜರಂಗದಳ ಮುಖಂಡರು, ನಾವು ಬಿಸಿ ರೋಡಿಗೆ ಬಂದೇ ಬರುತ್ತೇವೆ ಎಂದೂ ಫೇಸ್ಬುಕ್ ನಲ್ಲಿ ಪ್ರತಿ ಸವಾಲಿನ ಪೋಸ್ಟ್ ಹಾಕಿದ್ದರು.
ಇಂದು ಬೆಳಗ್ಗೆ ಎಂದಿನಂತೆ ಈದ್ ಮೆರವಣಿಗೆಯೂ ನಡೆದಿದೆ, ಪೊಲೀಸರು ಹೆಚ್ಚುವರಿ ಪಡೆಗಳನ್ನು ಕರೆಸಿ ಬಂದೋಬಸ್ತ್ ಮಾಡಿದ್ದಾರೆ, ಇದರ ಬೆನ್ನಲ್ಲೇ ಬಿಸಿ ರೋಡ್ ನಲ್ಲಿ ಸಾವಿರಾರು ಹಿಂದು ಸಂಘಟನೆ ಕಾರ್ಯಕರ್ತರು ಸೇರಿದ್ದಾರೆ. ಅಲ್ಲದೆ, ಶರಣ್ ಪಂಪ್ವೆಲ್ ಮತ್ತು ಇತರ ಹಿಂದು ಸಂಘಟನೆ ನಾಯಕರು ಆಗಮಿಸಿದ್ದು, ಪೊಲೀಸರು ಹಾಕಿದ್ದ ತಡೆಬೇಲಿಯನ್ನು ತಳ್ಳಿಕೊಂಡು ಬಂದು ಶಕ್ತಿಪ್ರದರ್ಶನ ಮಾಡಿದ್ದಾರೆ. ಶರಣ್ ಅವರನ್ನು ಮೇಲೆತ್ತಿ ಕೇಸರಿ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ. ಆನಂತರ, ಎಸ್ಪಿ ಯತೀಶ್ ಕುಮಾರ್ ಹಿಂದು ಸಂಘಟನೆ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದು, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಜಿಹಾದಿ ನಾಯಿಗಳ ಸವಾಲಿಗೆ ಹೆದರಲ್ಲ
ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶರಣ್ ಪಂಪ್ವೆಲ್, ಇದು ಪಾಕಿಸ್ತಾನ ಅಲ್ಲ, ಭಾರತ ಎನ್ನುವುದು ನೆನಪಿಟ್ಟುಕೊಳ್ಳಲಿ. ಯಾರೋ ಜಿಹಾದಿ ನಾಯಿಗಳು ಸವಾಲು ಹಾಕುತ್ತಾರೆ. ಅವರ ಹೇಳಿದ ಜಾಗಕ್ಕೆ ನಾವು ಬಂದಿದ್ದೇವೆ, ತಾಕತ್ತಿದ್ದರೆ ತಡೆದು ನೋಡಲಿ ಎಂದು ಪ್ರತಿ ಸವಾಲು ಹಾಕಿದ್ದಾರೆ. ಅಲ್ಲದೆ, ಯಾರೋ ಸವಾಲು ಹಾಕುತ್ತಾರೆಂದು ಹಿಂದು ಸಮಾಜ ಸುಮ್ಮನೆ ಕೂರೋದಿಲ್ಲ. ನಾವೇನು ಹೇಡಿಗಳಲ್ಲ, ನಮಗೂ ಶಕ್ತಿ ಪ್ರದರ್ಶನ ಮಾಡುವ ತಾಕತ್ತಿದೆ ಎಂದು ಹೇಳಿದ್ದಾರೆ.
ಅಕ್ರಮ ಮರಳುಗಾರಿಕೆ ನಿಲ್ಲಿಸಿಲ್ಲ ಏಕೆ ?
ಇದೇ ವೇಳೆ, ಬಂಟ್ವಾಳದ ಬಿಜೆಪಿ ಮುಖಂಡ ಗೋವಿಂದ ಪ್ರಭು, ಪೊಲೀಸರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಮಹಮ್ಮದ್ ಶರೀಫ್ ಒಬ್ಬ ರೌಡಿಶೀಟರ್. ಮೇಲಾಗಿ ಬಂಟ್ವಾಳದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾನೆ. 20ಕ್ಕೂ ಹೆಚ್ಚು ದೋಣಿಗಳನ್ನು ಹೊಂದಿದ್ದು ರಾಜಾರೋಷ ಮರಳುಗಾರಿಕೆ ಮಾಡುತ್ತಾನೆ, ಇದಕ್ಕೆಲ್ಲ ಕಾಂಗ್ರೆಸ್ ಬೆಂಬಲ ಇದೆ, ನೀವು ಯಾಕೆ ಮರಳುಗಾರಿಕೆ ಮೇಲೆ ರೇಡ್ ಮಾಡಿಲ್ಲ. ನಾವು ದಾಳಿ ಮಾಡೋದಕ್ಕೆ ಬಂದಿಲ್ಲ. ಆತನ ಸವಾಲಿಗೆ ಪ್ರತ್ಯುತ್ತರ ನೀಡುವುದಕ್ಕಷ್ಟೇ ಬಂದಿದ್ದೇವೆ ಎಂದು ಹೇಳಿದರು.
ಸಮಾವೇಶಕ್ಕೆ ಬಿಡಲ್ಲ, ಆರ್ ಎಎಫ್ ತರಿಸಿದ ಎಸ್ಪಿ
ಸ್ಥಳದಲ್ಲಿ ಪ್ರತಿಭಟನಾ ಸಮಾವೇಶ ಮಾಡುವುದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ರಾಪಿಡ್ ಆಕ್ಷನ್ ಫೋರ್ಸ್ (ಆರ್ ಎಎಫ್) ಪಡೆಯನ್ನು ತರಿಸಿದ ಎಸ್ಪಿ ಯತೀಶ್ ಕುಮಾರ್, ಯಾವುದೇ ಕಾರಣಕ್ಕೂ ಸಾರ್ವಜನಿಕ ಶಾಂತಿ ಕದಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಿ, ಸೇರಿದ್ದ ಕಾರ್ಯಕರ್ತರನ್ನು ಸ್ಥಳದಿಂದ ಹೊರಗೆ ಹೋಗುವಂತೆ ಮನವಿ ಮಾಡಿದರು. ಹಿಂದು ಮುಖಂಡರು ಕೂಡ ಕಾರ್ಯಕರ್ತರನ್ನು ಸ್ಥಳದಿಂದ ತೆರಳಲು ಹೇಳಿದ್ದು ನಾವು ಜಗಳ ಮಾಡಲು ಬಂದಿಲ್ಲ. ಸ್ಥಳಕ್ಕೆ ಬರಲು ಹೇಳಿದ್ದಕ್ಕಷ್ಟೇ ಬಂದಿದ್ದೇವೆ, ನಾವೇನು ಹೇಡಿಗಳಲ್ಲ ಎಂದು ಪೊಲೀಸರಿಗೆ ಹೇಳಿದರು. ಎಲ್ಲವನ್ನೂ ಪೊಲೀಸರು ಸಮಾಧಾನದಿಂದ ಆಲಿಸಿದರು. ಬೆಳಗ್ಗೆ 9ರಿಂದ ಹತ್ತು ಗಂಟೆ ವೇಳೆಗೆ ಕೇಸರಿ ಹೆದ್ದೆರೆಯಾಗಿ ಕಂಡಿದ್ದ ಬಿಸಿ ರೋಡ್ 11 ಗಂಟೆ ವೇಳೆಗೆ ಶಾಂತವಾಗಿದೆ.
ಕಾಂಗ್ರೆಸ್ ಮುಖಂಡ ಬೆದರಿಕೆಯ ವಾಯ್ಸ್ ಮೆಸೇಜ್ ಹಾಕಿದ್ದು ಮತ್ತು ಪ್ರತಿಯಾಗಿ ಬಜರಂಗದಳ ಮುಖಂಡರು ಸವಾಲು ಹಾಕಿದ್ದ ವಿಚಾರದಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ, ನಿನ್ನೆ ರಾತ್ರಿ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಮಸೀದಿಯೊಂದಕ್ಕೆ ಕಲ್ಲು ತೂರಿದ ಘಟನೆ ನಡೆದಿದ್ದು ಅಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿದೆ. ಸುರತ್ಕಲ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Tense situation created at BC road in Mangalore, Hindu outfits gather in large number after audio went viral. Tension has gripped B.C. Road in Bantwal after whatsapp video by Muslim former town municipal corporation Mohammed went viral challengeing Sharan Pumpwell to come to BC road.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm