ಸೆ.18ರಂದು ಬಿಗ್ ಸಿನೆಮಾಸ್ ನಲ್ಲಿ “ಇನ್ನೊವೇಶನ್ ಸಮ್ಮಿಟ್ ಎಕ್ಸ್ ಪೋ” ; ಬಾಹ್ಯಾಕಾಶ ತಂತ್ರಜ್ಞಾನ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ, ಆಕಾಶಕಾಯಗಳ ಪ್ರದರ್ಶನ ವ್ಯವಸ್ಥೆ 

16-09-24 06:30 pm       Mangalore Correspondent   ಕರಾವಳಿ

“ವಿದ್ಯಾರ್ಥಿಗಳಿಗೆ ಸಂಶೋಧನಾ ವಿಚಾರ ಹಾಗೂ ರಾಷ್ಟ್ರೀಯ, ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳ ಬಗ್ಗೆ ಅರಿಯಲು ಕೊರೊನಾ ಮೊದಲು 400-450 ಶಾಲೆಗಳಲ್ಲಿ ಈ ಕಾರ್ಯಕ್ರಮ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಸೆ.18ರಂದು ಬೆಳಗ್ಗೆ 10 ಗಂಟೆಯಿಂದ 1 ಗಂಟೆಯ ವರೆಗೆ  ಭಾರತ್ ಸಿನೆಮಾಸ್ ನಲ್ಲಿ ಇನ್ನೊವೇಶನ್ ಸಮ್ಮಿಟ್ ಎಕ್ಸ್ ಪೋ 1.O ಅನ್ನು ಹಮ್ಮಿಕೊಳ್ಳಲಾಗಿದೆ“ ಎಂದು ಇನೊನೆಕ್ಸ್ಟ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರೊ.ಶ್ರೀನಿವಾಸ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. 

ಮಂಗಳೂರು, ಸೆ.16 : “ವಿದ್ಯಾರ್ಥಿಗಳಿಗೆ ಸಂಶೋಧನಾ ವಿಚಾರ ಹಾಗೂ ರಾಷ್ಟ್ರೀಯ, ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳ ಬಗ್ಗೆ ಅರಿಯಲು ಕೊರೊನಾ ಮೊದಲು 400-450 ಶಾಲೆಗಳಲ್ಲಿ ಈ ಕಾರ್ಯಕ್ರಮ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಸೆ.18ರಂದು ಬೆಳಗ್ಗೆ 10 ಗಂಟೆಯಿಂದ 1 ಗಂಟೆಯ ವರೆಗೆ  ಭಾರತ್ ಸಿನೆಮಾಸ್ ನಲ್ಲಿ ಇನ್ನೊವೇಶನ್ ಸಮ್ಮಿಟ್ ಎಕ್ಸ್ ಪೋ 1.O ಅನ್ನು ಹಮ್ಮಿಕೊಳ್ಳಲಾಗಿದೆ“ ಎಂದು ಇನೊನೆಕ್ಸ್ಟ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರೊ.ಶ್ರೀನಿವಾಸ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್‌ ಆನ್‌ಲೈನ್ ಮುಖಾಂತರ ವೈಜ್ಞಾನಿಕ ವರ್ತಮಾನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಸ್ರೋ ವಿಜ್ಞಾನಿ ಪ್ರೊ.ಆರ್.ಆರ್. ಇಲಂಗೋವನ್‌ ಮುಖ್ಯ ಅಥಿತಿಗಳಾಗಿದ್ದು ವಿದ್ಯಾರ್ಥಿಗಳಿಗೆ ಸಂಶೋಧನಾ ವಿಚಾರ ಹಾಗೂ ರಾಷ್ಟ್ರೀಯ ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳ ಜೊತೆ ವಿದ್ಯಾರ್ಥಿಗಳು ಹೇಗೆ ಸಂಪರ್ಕವನ್ನು ಬೆಳೆಸಿಕೊಳ್ಳಬೇಕು ಹಾಗೂ ಶಾಲಾ ಸಂಸ್ಥೆಗಳ ಪಾತ್ರ ಏನು ಎಂಬುದರ ಬಗ್ಗೆ ತಿಳಿಸಿಕೊಡುತ್ತಾರೆ. ಈ ಕಾರ್ಯಕ್ರಮವು ಭಾರತ್ ಸಿನಿಮಾಸ್‌ನ 4ಕೆ ಪರದೆಯಲ್ಲಿ ಆಕಾಶಕಾಯಗಳ ನೇರ Simulation ಪ್ರದರ್ಶನ ಹಾಗೂ 3ಡಿ ಶೋ ಕಾರ್ಯಕ್ರಮ ಒಳಗೊಂಡಿರುತ್ತದೆ“ ಎಂದರು. 

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ., ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ.ಕೆ.ವಿ ರಾವ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಜಯಶ್ರೀ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮೊಹಮ್ಮದ್ ಉಪಸ್ಥಿತರಿರಲಿದ್ದಾರೆ. 

ಈ ರೀತಿಯ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲನೆಯದ್ದಾಗಿದ್ದು ಎಲ್ಲ ಶಾಲಾ ಪ್ರಾಂಶುಪಾಲರು ಮತ್ತು ವಿಜ್ಞಾನ ಶಿಕ್ಷಕರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ 9008767187 ನಂಬರ್ ಅನ್ನು ಸಂಪರ್ಕಿಸಬಹುದಾಗಿದೆ.  ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ದಿವಾಕರ್, ಅನು ಮತ್ತಿತರರು ಉಪಸ್ಥಿತರಿದ್ದರು.

Mangalore Sep 18 big cinemas to host innovation summit expo for students.