ಬ್ರೇಕಿಂಗ್ ನ್ಯೂಸ್
19-09-24 11:12 pm Mangalore Correspondent ಕರಾವಳಿ
ಉಳ್ಳಾಲ, ಸೆ. 19: ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ ನಡೆದ ಹತ್ತು ಕೋಟಿ ವೆಚ್ಚದ ಕಾಮಗಾರಿಯ ಬಗ್ಗೆ ಮಾಹಿತಿಯೇ ನೀಡದ ಅಧಿಕಾರಿಗಳ ವಿರುದ್ಧ ಬಿಜೆಪಿ ಪುರಸಭಾ ಸದಸ್ಯರು ಗರಂ ಆಗಿದ್ದು ಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕಿಸಿದ್ದಾರೆ. ಈ ಬಗ್ಗೆ ಕಾಮಗಾರಿ ಸಂದರ್ಭದಲ್ಲಿ ಪುರಸಭೆ ಆಡಳಿತಾಧಿಕಾರಿಯಾಗಿದ್ದ ಸಹಾಯಕ ಆಯುಕ್ತರು ಅಥವಾ ಜಿಲ್ಲಾಧಿಕಾರಿಯವರೇ ಮಾಹಿತಿ ನೀಡಬೇಕೆಂದು ಆಗ್ರಹಿಸಿದ್ದಾರೆ. ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಅವರು ನಗರೋತ್ಥಾನ ಯೋಜನೆಯ ಅಪ್ಪ-ಅಮ್ಮ ಯಾರೆಂದು ಅಧಿಕಾರಿಗಳಲ್ಲಿ ಪ್ರಶ್ನಿಸಿದ್ದಾರೆ.
ಸೋಮೇಶ್ವರ ಗ್ರಾಮ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಾಲ್ಕು ವರುಷಗಳ ಬಳಿಕ ಬಿಜೆಪಿ ನೇತೃತ್ವದ ನೂತನ ಆಡಳಿತ ಆರಂಭವಾಗಿದ್ದು ಗುರುವಾರ ಪುರಸಭಾ ಅಧ್ಯಕ್ಷೆ ಕಮಲ ಅವರ ಅಧ್ಯಕ್ಷತೆಯಲ್ಲಿ ಪ್ರಥಮ ಸಾಮಾನ್ಯ ಸಭೆ ನಡೆಯಿತು. ಸಭೆಗೆ ಅಮೃತ ನಗರೋತ್ಥಾನ ಯೋಜನೆಯ ಇಂಜಿನಿಯರನ್ನ ಆಹ್ವಾನಿಸಿದ್ದರೂ ಅವರು ಸಭೆಗೆ ಗೈರಾಗಿದ್ದರು. 2019 ರಲ್ಲಿ ಅಮೃತ ನಗರೋತ್ಥಾನದ ನಾಲ್ಕನೇ ಹಂತದ ಯೋಜನೆಯಡಿ ಸೋಮೇಶ್ವರ ಪುರಸಭೆಗೆ ಹತ್ತು ಕೋಟಿ ಅನುದಾನ ಮಂಜೂರಾಗಿತ್ತು. 2022ರ ಕ್ರಿಯಾ ಯೋಜನೆಯಲ್ಲಿ ಅನುದಾನ ಹಂಚಿಕೆಯಾಗಿ ಕಾಮಗಾರಿಗಳ ಟೆಂಡರ್ ಆಗಿತ್ತು. ಗುತ್ತಿಗೆದಾರರು ಪುರಸಭೆ ವ್ಯಾಪ್ತಿಯಲ್ಲಿ ತಮಗಿಷ್ಟ ಬಂದಂತೆ ಅರ್ಧಂಬರ್ಧ ಕಾಮಗಾರಿ ನಡೆಸಿದ್ದು ಒಟ್ಟು ನಡೆದ ಕಾಮಗಾರಿಯ ಬಗ್ಗೆ ನಮಗೆ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿಲ್ಲವೆಂದು ಬಿಜೆಪಿ ಪುರಸಭಾ ಸದಸ್ಯ ಹರೀಶ್ ಕುಮಾರ್ ಆಕ್ಷೇಪಿಸಿದರು.
ಯೋಜನೆಯಡಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ಖರೀದಿಗೆ ಮೂರು ವರುಷದ ಹಿಂದೆ ಅನುದಾನ ಬಿಡುಗಡೆಯಾಗಿದ್ದು, ವಿದ್ಯಾರ್ಥಿಗಳ ಕೋರ್ಸ್ ಮುಗಿದರೂ ಲ್ಯಾಪ್ ಟ್ಯಾಪ್ ಅವರ ಕೈ ಸೇರಿಲ್ಲ. ಇದರ ಹಿಂದೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಶಂಕೆ ಇದ್ದು ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದಿದ್ದರೆ ಮುಂದಿನ ಸಾಮಾನ್ಯ ಸಭೆಗಳನ್ನು ನಡೆಯಲು ಬಿಡುವುದಿಲ್ಲ. ಸಾರ್ವಜನಿಕರ ದುಡ್ಡು ದುರುಪಯೋಗವಾದರೆ ನಾವು ಸುಮ್ಮನಿರುವುದಿಲ್ಲವೆಂದು ಬಿಜೆಪಿ ಪುರಸಭಾ ಸದಸ್ಯರಾದ ಮನೋಜ್ ಕಟ್ಟೆಮನೆ ಎಚ್ಚರಿಕೆ ನೀಡಿದರು. ಕಾಮಗಾರಿ ನಡೆದಾಗ ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸಹಾಯಕ ಆಯುಕ್ತರೇ ಆಡಳಿತಾಧಿಕಾರಿಯಾಗಿದ್ದರು. ಹಾಗಾಗಿ ಸಹಾಯಕ ಆಯುಕ್ತರು ಅಥವಾ ಜಿಲ್ಲಾಧಿಕಾರಿಯವರೇ ಕಾಮಗಾರಿಯ ಸಮಗ್ರ ಮಾಹಿತಿ ನೀಡಬೇಕೆಂದು ಪುರಸಭಾ ಸದಸ್ಯರು ಮುಖ್ಯಾಧಿಕಾರಿ ಮತ್ತಡಿಯವರನ್ನ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರಸಭಾ ಮುಖ್ಯಾಧಿಕಾರಿ ಮತ್ತಡಿ ಅವರು ನಗರೋತ್ಥಾನ ಯೋಜನೆಯ ಇಂಜಿನಿಯರ್ ಬಳಿ ಕಾಮಗಾರಿಯ ಬಗ್ಗೆ ಮಾಹಿತಿ ಕೇಳೋದಾಗಿ ಹೇಳಿದರು. ಪುರಸಭಾ ಕಾಂಗ್ರೆಸ್ ಸದಸ್ಯ ಯು.ಅಬ್ದುಲ್ ಸಲಾಮ್ ಮಾತನಾಡಿ ಪುರಸಭಾ ವ್ಯಾಪ್ತಿಯಲ್ಲಿ ಪ್ರಭಾವಿಗಳು ಮೂವತ್ತು ಸೆಂಟ್ಸ್ ನಷ್ಟು ಸರಕಾರಿ ಜಾಗವನ್ನ ಕಬಳಿಸಿ ಮನೆ ಕಟ್ಟಿದ್ದಾರೆ. ಇಪ್ಪತ್ತು ವರುಷದ ಹಿಂದೆಯೇ ಇದಕ್ಕೆ ಸೋಮೇಶ್ವರ ಗ್ರಾಮ ಸಭೆಯಿಂದ ಡೋರ್ ನಂಬರನ್ನು ಕೊಡಲಾಗಿದೆ. ಅಧಿಕಾರಿಗಳು ಸರಕಾರಿ ಜಾಗವೇ ಇಲ್ಲ ಅನ್ನುತ್ತಿದ್ದಾರೆ. ಅತಿಕ್ರಮಣ ಮಾಡಿರುವ ಸರಕಾರಿ ಜಾಗಗಳನ್ನ ಗುರುತಿಸುವ ಕಾರ್ಯ ನಡೆಯಬೇಕೆಂದರು.
ಅಮೃತ ನಗರೋತ್ಥಾನ ಯೋಜನೆಯ ಅಪ್ಪ-ಅಮ್ಮ ಯಾರೆಂದೇ ತಿಳಿಯುತ್ತಿಲ್ಲ. ಪುರಸಭೆ ಸದಸ್ಯರ ನಿಯೋಗವು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರನ್ನ ಭೇಟಿ ಮಾಡಿ ಸೋಮೇಶ್ವರದಲ್ಲಿ ಯೋಜನೆಯಡಿ ನಡೆದ ಕಾಮಗಾರಿಯ ಬಗ್ಗೆ ಸಮಗ್ರ ಮಾಹಿತಿಯನ್ನ ಕೇಳುತ್ತೇವೆ. ಸೋಮೇಶ್ವರ ವ್ಯಾಪ್ತಿಯಲ್ಲಿ ಬಡವರಿಗೆ ಮನೆ ಕಟ್ಟಲು ಸರಕಾರಿ ಜಾಗವೇ ಇಲ್ಲ.ಪ್ರಭಾವಿಗಳು ಮೂವತ್ತು ಸೆಂಟ್ಸ್ ಸರಕಾರಿ ಜಾಗ ಅತಿಕ್ರಮಿಸಿ ಮನೆ ಕಟ್ಟಿದರೂ ಅದಕ್ಕೆ ಅಧಿಕಾರಿಗಳು ಹೇಗೆ ಡೋರ್ ನಂಬರ್ ನೀಡಿದ್ದಾರೆ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸುತ್ತೇವೆಂದು ಸೋಮೇಶ್ವರ ಪುರಸಭಾ ಉಪಾಧ್ಯಕ್ಷರಾದ ರವಿಶಂಕರ್ ಸಭೆಯಲ್ಲಿ ಹೇಳಿದ್ದಾರೆ.
ಪುರಸಭಾ ವ್ಯಾಪ್ತಿಯ ಪಿಲಾರು ಪಲ್ಲ ಎಂಬಲ್ಲಿನ ಪಾಳು ಬಿದ್ದ ಬಾವಿಯ ಸುತ್ತಲೂ ಗಿಡ ಗಂಟೆಗಳು ಬೆಳೆದಿದ್ದು ಹೂಳು ತುಂಬಿದೆ. ಬಾವಿಯಲ್ಲಿ ಕೈಗೆಟಕುವ ಮಟ್ಟದಲ್ಲೇ ಸಮೃದ್ಧವಾದ ನೀರಿನ ಸೆಲೆ ಇದ್ದರೂ ಪುರಾತನವಾದ ಈ ಬಾವಿಯನ್ನ ನಿರ್ಲಕ್ಷಿಸಲಾಗಿದೆ. ಪ್ರದೇಶದಲ್ಲಿ ಬೇಸಿಗೆಯಲ್ಲಿ ಅತಿಯಾಗಿ ನೀರಿನ ಸಮಸ್ಯೆ ಕಾಡುತ್ತದೆ. ಈ ಬಾರಿ ಬೇಸಿಗೆ ಬರುವ ಮೊದಲು ಪಲ್ಲದಲ್ಲಿ ಪಾಳು ಬಿದ್ದಿರುವ ಬಾವಿಯ ಅಭಿವೃದ್ಧಿ ಕಾಮಗಾರಿ ನಡೆಸಿ ಪ್ರದೇಶದ ಜನರಿಗೆ ಕುಡಿಯುವ ನೀರು ಸಿಗುವಂತೆ ಮಾಡಬೇಕೆಂದು ಪುರಸಭಾ ಸದಸ್ಯರಾದ ಮನೋಜ್ ಕಟ್ಟೆಮನೆ ಅಧಿಕಾರಿಗಳನ್ನ ಆಗ್ರಹಿಸಿದ್ದಾರೆ.
Mangalore BJP Someshwara Panchyath Members turn angry over corruption.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm