ಬ್ರೇಕಿಂಗ್ ನ್ಯೂಸ್
27-09-24 03:25 pm Mangalore Correspondent ಕರಾವಳಿ
ಮಂಗಳೂರು, ಸೆ.27: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಕರಣಿಕರು ಕೆಲಸದ ಒತ್ತಡ ಮತ್ತು ಮೊಬೈಲ್ ಏಪ್ ಗಳಿಂದಾಗುವ ಸಮಸ್ಯೆಯಿಂದ ಬೇಸತ್ತು ಮಂಗಳೂರಿನಲ್ಲಿ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗ್ರಾಮಗಳಿಂದ ಬಂದಿರುವ 150ಕ್ಕೂ ಹೆಚ್ಚು ಗ್ರಾಮ ಕರಣಿಕರು ಮಂಗಳೂರಿನ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಕರಣಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಪೂಜಾರಿ, ನಮ್ಮ ಜಿಲ್ಲೆಯಲ್ಲಿ ಒಟ್ಟು 325 ಗ್ರಾಮ ಕರಣಿಕರ ಹುದ್ದೆಗಳಿದ್ದರೂ, 90 ಹುದ್ದೆಗಳು ಖಾಲಿಯಿದ್ದು ಅದರ ಹೊಣೆಭಾರವನ್ನು ಉಳಿದವರ ಮೇಲೆ ಹೊರಿಸಿದ್ದಾರೆ. ಇದಲ್ಲದೆ, 20ಕ್ಕೂ ಹೆಚ್ಚು ಮೊಬೈಲ್ ಏಪ್ ಗಳನ್ನು ಬಳಸಿ ತಂತ್ರಜ್ಞಾನ ಆಧರಿತವಾಗಿ ಕೆಲಸ ಮಾಡಲು ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಶನಿವಾರ, ಭಾನುವಾರವೂ ರಜೆ ಇಲ್ಲದೆ ಕೆಲಸ ಮಾಡುವ ಸ್ಥಿತಿಯಾಗಿದೆ. 238 ಮಂದಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ತಾಲೂಕು ಕಚೇರಿ, ಡೀಸಿ ಕಚೇರಿಯಲ್ಲಿದ್ದಾರೆ. ಈಗ 138 ಸಿಬಂದಿ 422 ಗ್ರಾಮಗಳ ಹೊಣೆ ಭಾರ ಹೊತ್ತು ಕೆಲಸ ಮಾಡಬೇಕಾಗಿದೆ. ಇದರ ಬಗ್ಗೆ ಸರಕಾರದ ಗಮನ ಸೆಳೆಯುವುದಕ್ಕಾಗಿ ಧರಣಿ ಕುಳಿತಿದ್ದೇವೆ ಎಂದರು.
ಧರಣಿಯಲ್ಲಿ 50ಕ್ಕೂ ಹೆಚ್ಚು ಮಹಿಳಾ ಸಿಬಂದಿಯೂ ಕೈಜೋಡಿಸಿದ್ದಾರೆ. 2019ರಿಂದ ಗ್ರಾಮ ಕರಣಿಕರ ಹುದ್ದೆಗೆ ನೇಮಕಾತಿ ಆಗಿಲ್ಲ. ಹೀಗಾಗಿ ನಮ್ಮ ಮೇಲೆ ವಿಪರೀತ ಹೊಣೆ ಭಾರ ಹೊರಿಸಿದ್ದಾರೆ. ಕಂದಾಯ ಇಲಾಖೆಯ ಪ್ರತಿ ಕೆಲಸಕ್ಕೂ ವಿಎಗಳನ್ನು ಹೊಣೆಯಾಗಿಸಿ ಒತ್ತಡ ಹೇರುತ್ತಿದ್ದಾರೆ. ನಾವು ವೈಯಕ್ತಿಕ ಜೀವನವೇ ಇಲ್ಲದೆ ಕೆಲಸ ಮಾಡುವ ಸ್ಥಿತಿಯಾಗಿದೆ ಎಂದು ಉಷಾ ಎಂಬವರು ಅಲವತ್ತುಕೊಂಡರು. ಧರಣಿಯಲ್ಲಿ ಗ್ರಾಮ ಕರಣಿಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಪ್ರದೀಪ್ ಕುಮಾರ್, ಅವಿನಾಶ್ ಬಿಲ್ಲವ, ಪುತ್ತೂರು ವಿಭಾಗ ಮಟ್ಟದ ಉಪಾಧ್ಯಕ್ಷೆ ಅಶ್ವಿನಿ, ಉಮೇಶ್ ಕಾವಡಿ, ಪ್ರಸನ್ನ ಪಕಳ, ತೌಫೀಕ್, ಶಿವರಾಜ್ ಗಾಯಕವಾಡ್, ಪ್ರದೀಪ್ ಶೆಣೈ ಮತ್ತಿತರರು ಇದ್ದರು.
Mobile app issues at office and work load, Mangalore village accountants hold protest in city.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm