ಬ್ರೇಕಿಂಗ್ ನ್ಯೂಸ್
28-09-24 01:12 pm Mangalore Correspondent ಕರಾವಳಿ
ಮಂಗಳೂರು, ಸೆ.28: ಸೋನಿ ಟಿವಿಯಲ್ಲಿ ಪ್ರಸಾರಗೊಳ್ಳುವ ಖ್ಯಾತ ನಟ ಅಮಿತಾಬ್ ಬಚ್ಚನ್ ನಿರ್ವಹಣೆಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಕುಡ್ಲದ ಕುವರಿಯೊಬ್ಬಳು ಕಾಣಿಸಿಕೊಂಡು ಮಿಂಚು ಹರಿಸಿದ್ದಾರೆ. ಮಂಗಳೂರಿನ ಪಂಪ್ವೆಲ್ ನಿವಾಸಿ ಲೋಕನಾಥ ಶೆಟ್ಟಿ ಎಂಬವರ ಪುತ್ರಿ ಅಪೂರ್ವ ಶೆಟ್ಟಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಲ್ಲದೆ, ಕಾರ್ಯಕ್ರಮದಲ್ಲಿ ತಂದೆ ಮತ್ತು ಮಾವನ ಜೊತೆಗೆ ಮಾತೃಭಾಷೆ ತುಳುವಿನಲ್ಲೇ ಮಾತನಾಡಿ ದೊಡ್ಡ ವೇದಿಕೆಯಲ್ಲಿ ಸ್ಥಳೀಯ ಭಾಷೆಯ ಕಂಪು ಹರಿಸಿದ್ದಾರೆ.
ಕೌನ್ ಬನೇಗಾ ಕರೋಡ್ ಪತಿ ಸೆ.27ರ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರಗೊಂಡಿದ್ದು, ಅಪೂರ್ವ 11 ಪ್ರಶ್ನೆಗಳಿಗೆ ಉತ್ತರಿಸಿ 6.40 ಲಕ್ಷ ರೂ. ಬಹುಮಾನ ಗೆದ್ದುಕೊಂಡಿದ್ದಾರೆ. 10 ಪ್ರಶ್ನೆಗಳಲ್ಲಿ 6.40 ಲಕ್ಷ ಗೆದ್ದುಕೊಂಡಿದ್ದ ಅಪೂರ್ವ ಶೆಟ್ಟಿಗೆ 11ನೇ ಪ್ರಶ್ನೆಯಾಗಿ ಮ್ಯಾನ್ ಗ್ರೋವ್ ಫಾರೆಸ್ಟ್ ಹೆಚ್ಚಿರುವ ದೇಶ ಯಾವುದು ಎಂಬ ಪ್ರಶ್ನೆ ಎದುರಾಗಿತ್ತು. ಆಪ್ಶನ್ ಉತ್ತರಗಳಲ್ಲಿ ಬ್ರೆಜಿಲ್, ನೈಜೀರಿಯಾ, ಬಾಂಗ್ಲಾದೇಶ, ಇಂಡೋನೇಶ್ಯಾ ಇತ್ತು. ಸ್ವಲ್ಪ ಗೊಂದಲಕ್ಕೀಡಾದ ಅಪೂರ್ವ, ಉತ್ತರ ಕಂಡುಕೊಳ್ಳಲು ಅಂಕಲ್ ಗೆ ಫೋನ್ ಮಾಡಿದ್ದಾರೆ. ತನ್ನ ಮಾತೃಭಾಷೆ ತುಳುವಿನಲ್ಲೇ ಪ್ರಶ್ನೆಯನ್ನು ಕೇಳಿದ ಅಪೂರ್ವಗೆ, ಅಂಕಲ್ ಅಶೋಕ ಆಳ್ವ ನೈಜೀರಿಯಾ ಆಗಿರಬೇಕು ಎಂಬ ಸಂಶಯದ ಉತ್ತರ ನೀಡಿದರು.
ಅದಕ್ಕೂ ಮೊದಲೇ ಆಡಿಯನ್ಸ್ ಲೈನ್ ತೆಗೆದುಕೊಂಡಿದ್ದ ಅಪೂರ್ವಗೆ ಬೇರೆ ಆಪ್ಶನ್ ಇರಲಿಲ್ಲ. ನೈಜೀರಿಯಾ ಉತ್ತರದ ಬಗ್ಗೆ ಅಪೂರ್ವಗೆ ಅಳುಕು ಇತ್ತು. ಮ್ಯಾನ್ ಗ್ರೋವ್ ಅಂದರೆ ನದಿ, ಸಮುದ್ರ ಇರುವಲ್ಲಿ ಬೆಳೆಯುವ ಕಾಂಡ್ಲಾ ರೀತಿಯ ಸಸ್ಯವಾಗಿದ್ದು, ಆಫ್ರಿಕಾದ ನೈಜೀರಿಯಾ ಆಗಿರಲಿಕ್ಕಿಲ್ಲ. ಬಾಂಗ್ಲಾದೇಶ ಅಥವಾ ಇಂಡೋನೇಶ್ಯಾ ಆಗಿರಬೇಕು ಅನ್ನುವ ಖಾತ್ರಿ ಇತ್ತು. ಇದರಲ್ಲೊಂದು ಉತ್ತರ ಹೇಳಿ ತಪ್ಪಾದರೆ, ಸಿಕ್ಕಿದ 6.40 ಲಕ್ಷದಲ್ಲಿ ಅರ್ಧ ಕಟ್ ಆಗುವ ಸಾಧ್ಯತೆ ಇದ್ದುದರಿಂದ ಪ್ರಶ್ನೆಯಿಂದ ಕ್ವಿಟ್ ಆಗಿದ್ದಾರೆ. ಸರಿಯುತ್ತರ ಇಂಡೋನೇಶ್ಯಾ ಆಗಿತ್ತು. ಸ್ಥಳದಲ್ಲೇ ಅಮಿತಾಬ್ ಬಚ್ಚನ್ ಎಸ್ ಬಿಐ ಯೋನೋ ಏಪ್ ನಲ್ಲಿ 6.40 ಲಕ್ಷ ರೂ. ಹಣವನ್ನು ರವಾನಿಸುವುದನ್ನು ಮೊಬೈಲ್ ನಲ್ಲಿ ತೋರಿಸಿದ್ದಾರೆ.
ಈ ನಡುವೆ, ತಂದೆ ಲೋಕನಾಥ್ ಶೆಟ್ಟಿ ಅವರನ್ನು ಸ್ಮರಿಸಿದ ಅಪೂರ್ವ, ತನ್ನ ತಂದೆ ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ. ಅದಕ್ಕಾಗಿ ಅಮಿತಾಬ್ ನೇರವಾಗಿ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಲೋಕನಾಥ್ ಶೆಟ್ಟಿ ಆನಂದ ತುಂದಿಲರಾಗಿದ್ದು, ತುಳುವಿನಲ್ಲಿ ಮಗಳೇ ನಿನ್ನ ಕನಸೊಂದು ನನಸಾಯಿತಲ್ವಾ.. ಎಷ್ಟೋ ಕಾಲದಿಂದ ಆ ಸೀಟಿನಲ್ಲಿ ಕೂರಬೇಕೆಂದು ಕನಸು ಕಂಡಿದ್ದೆ ಎಂದು ಆನಂದಭಾಷ್ಪ ಸುರಿಸುತ್ತಾರೆ. ಅಪೂರ್ವಳಿಗೂ ಕಣ್ಣೀರು ಬರುವುದನ್ನು ನೋಡಿ, ಅಮಿತಾಬ್ ಎದ್ದು ನಿಂತು ಪೇಪರ್ ಕರ್ಚೀಫ್ ನೀಡುತ್ತಾರೆ. ಅಪೂರ್ವ ತಾನು ಐಎಎಸ್ ಪಾಸ್ ಮಾಡಬೇಕೆಂದಿದ್ದೇನೆ. ಅದಕ್ಕಾಗಿ ಓದುತ್ತಿದ್ದೇನೆ ಎಂದು ಹೇಳುತ್ತಾಳೆ. ಅಮಿತಾಬ್ ಬಚ್ಚನ್ ಅದಕ್ಕೆ ಶುಭ ಹಾರೈಕೆ ಮಾಡುತ್ತಾರೆ.
ದೇಶದಲ್ಲಿ ನಂಬರ್ ವನ್ ಪ್ರೋಗ್ರಾಂ ಆಗಿರುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮವನ್ನು ಕೋಟ್ಯಂತರ ಜನರು ನೋಡುತ್ತಾರೆ. ದೇಶ- ವಿದೇಶದಲ್ಲಿ ಅಭಿಮಾನಿಗಳಿದ್ದಾರೆ. ನಟನೆಯಿಂದ ದೂರ ಸರಿದ ಬಳಿಕ ಅಮಿತಾಬ್ ಅವರನ್ನು ಅಭಿಮಾನಿಗಳ ಜೊತೆಗೆ ಮುಖಾಮುಖಿಯಾಗಿಸಿದ ಕಾರ್ಯಕ್ರಮ ಇದಾಗಿತ್ತು. ಸಾವಿರಾರು ಮಂದಿ ಸಾಧಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೆಸರಿನ ಜೊತೆಗೆ ಹಣವನ್ನೂ ಗಳಿಸಿದ್ದಾರೆ. ಕನ್ನಡ, ಮಲಯಾಳ, ತಮಿಳಿನಲ್ಲಿ ಇಂತಹ ಕಾರ್ಯಕ್ರಮ ಪ್ರಸಾರ ಆಗಿದ್ದರೂ, ಹಿರಿಯ ನಟ ಅಮಿತಾಬ್ ನಿರೂಪಣೆ ಶೈಲಿ, ಹಿಂದಿ ಭಾಷೆಯಿಂದಾಗಿ ಈ ಕಾರ್ಯಕ್ರಮ ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸುವಂತಾಗಿತ್ತು. ಇಂತಹ ಕಾರ್ಯಕ್ರಮದಲ್ಲಿ ಮಂಗಳೂರಿನ ಕುವರಿ ಪಾಲ್ಗೊಂಡಿದ್ದಲ್ಲದೆ, ಅದರಲ್ಲಿ ಸ್ಥಳೀಯ ತುಳು ಭಾಷೆಯಲ್ಲೇ ಮಾತನಾಡಿ ಮಾತೃಭಾಷೆಯ ಮೇಲಿನ ಪ್ರೀತಿಯನ್ನು ತೋರಿಸಿದ್ದು ವಿಶೇಷ. ತಮ್ಮೂರು ಬಿಟ್ಟೊಡನೆ ಮಾತೃಭಾಷೆಯನ್ನೇ ಮರೆಯುವವರ ನಡುವೆ ಅಪೂರ್ವ ಮಾದರಿಯಾಗಿದ್ದಾರೆ.
The latest episode of Kaun Banega Crorepati 16 started with rollover contestant Akash Kumar Sharma, a Head Constable in the Indo Tibetan Border Police. He took home Rs 3,20,000 after wrongly answering the question for Rs 6,40,000. On the five-dollar banknote issued by the Reserve Bank of New Zealand, Sir Edmund Hillary is shown alongside which mountain? He selected Option A) Mount Everest but it was the wrong answer. The correct answer was Option C) Mount Cook.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm