ಬ್ರೇಕಿಂಗ್ ನ್ಯೂಸ್
30-09-24 10:03 pm Mangalore Correspondent ಕರಾವಳಿ
ಮಂಗಳೂರು, ಸೆ.30: ತಿರುಪತಿಯ ಲಡ್ಡು ಪ್ರಸಾದಕ್ಕೆ ದನದ ಕೊಬ್ಬನ್ನು ಬಳಕೆ ಮಾಡಿದ್ದಾರೆಂಬ ಅಂಶದ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷತ್ ಎಚ್ಚರಗೊಂಡಿದ್ದು, ಹಿಂದುಗಳ ದೇವಸ್ಥಾನಗಳನ್ನು ಹಿಂದುಗಳಿಗೇ ಬಿಟ್ಟು ಕೊಡಬೇಕು. ಕ್ರೈಸ್ತರು, ಮುಸ್ಲಿಮರಿಗೆ ಇರುವ ರೀತಿಯಲ್ಲೇ ಹಿಂದು ಧರ್ಮದ ದೇವಸ್ಥಾನಗಳು ಹಿಂದುಗಳ ಕೈಯಲ್ಲೇ ಇರಬೇಕೆಂದು ನಿರ್ಣಯ ಸ್ವೀಕರಿಸಿದೆ. ಅಲ್ಲದೆ, ತಿರುಪತಿ ಅಪವಿತ್ರ ಆಗಲು ಕಾರಣರಾದವರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ನಗರದ ಡೊಂಗರಕೇರಿಯ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಹಿಂದು ಸಂತರು, ಸ್ವಾಮೀಜಿಗಳು, ವಿಶ್ವ ಹಿಂದು ಪರಿಷತ್ತಿನ ಪ್ರಮುಖರ ನೇತೃತ್ವದ ಧರ್ಮಾಗ್ರಹ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಸ್ವೀಕರಿಸಲಾಗಿದೆ. ಹಿಂದುಗಳ ದೇವಸ್ಥಾನದಿಂದ ಬರುವ ಆದಾಯವನ್ನು ಅಹಿಂದುಗಳಿಗೆ ವ್ಯಯ ಮಾಡಲಾಗುತ್ತಿದೆ. ಇದನ್ನು ನಾವು ಖಂಡಿಸುತ್ತಿದ್ದು, ಪ್ರಾಚೀನ ಕಾಲದಿಂದಲೂ ದೇವಸ್ಥಾನಗಳು ಹಿಂದುಗಳ ಕೈಯಲ್ಲೇ ಇದ್ದವು. ಅಲ್ಲಿನ ಆದಾಯವನ್ನು ಕೊಳ್ಳೆ ಹೊಡೆಯುವುದಕ್ಕಾಗಿ ದೇವಸ್ಥಾನಗಳನ್ನು ಸರಕಾರದ ವ್ಯಾಪ್ತಿಗೆ ತಂದಿದ್ದು ಬ್ರಿಟಿಷರು. ಅದೇ ನೀತಿಯನ್ನು ಆನಂತರದಲ್ಲಿ ಅನುಸರಿಸಿಕೊಂಡು ಬರಲಾಗಿದೆ. ಆದರೆ ಕ್ರೈಸ್ತರ ಚರ್ಚ್ ಮತ್ತು ಮುಸ್ಲಿಮರ ಮಸೀದಿಗಳಿಗೆ ಮಾತ್ರ ಈ ನೀತಿ ಅನ್ವಯಿಸಿಲ್ಲ.
ಹಿಂದುಗಳ ದೇವಸ್ಥಾನ ಮಂಡಳಿಗೆ ಮುಸ್ಲಿಮರನ್ನು ಸದಸ್ಯರನ್ನಾಗಿಸುವ ಯತ್ನ ನಡೆಯುತ್ತಿದೆ. ಹಾಗಾದ್ರೆ, ಚರ್ಚ್ ಮತ್ತು ಮಸೀದಿಗಳಿಗೂ ಹಿಂದುಗಳನ್ನು ಸದಸ್ಯರನ್ನಾಗಿ ಮಾಡುತ್ತೀರಾ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಧರ್ಮಾಗ್ರಹ ಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅಪವಿತ್ರ ತುಪ್ಪ ಎನ್ನುವ ಅಪವಾದ ನಿವಾರಣೆ ಮಾಡುವ ಸಲುವಾಗಿ ಎಲ್ಲ ದೇವಸ್ಥಾನಗಳಲ್ಲಿ ತುಪ್ಪ, ಹಾಲು, ನೈವೇದ್ಯ ತಯಾರಿಸುವುದಕ್ಕೆ ತಮ್ಮಲ್ಲೇ ಗೋವನ್ನು ಸಾಕಬೇಕು. ತಿರುಪತಿಯಲ್ಲಿ ಬೇಕಾದಷ್ಟು ತುಪ್ಪ ತಯಾರಿಸಲು 20 ಸಾವಿರ ದೇಸಿ ತಳಿಯ ಗೋವುಗಳನ್ನು ಸಾಕುವುದಕ್ಕೇನು ಸಮಸ್ಯೆ. ದೇಶದಲ್ಲೇ ಶ್ರೀಮಂತ ದೇವಸ್ಥಾನ ಆಗಿರುವ ತಿರುಪತಿ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲೂ ಗೋವುಗಳನ್ನು ಸಾಕುವ ವ್ಯವಸ್ಥೆ ಆಗಬೇಕು. ಯಾವುದೇ ಕಂಪನಿಗಳಿಗೆ ಗುತ್ತಿಗೆ ಕೊಟ್ಟಿದ್ದರಿಂದ ಕಲಬೆರಕೆ ಉಂಟಾಗಿದೆ. ಇದನ್ನು ಬದಲಿಸಲು ಆಂಧ್ರ ಪ್ರದೇಶ ಸರಕಾರಕ್ಕೆ ಆಗ್ರಹ ಮಾಡುತ್ತೇವೆ ಎಂದು ವಿಹಿಂಪ ಮುಖಂಡ ಎಂ.ಬಿ. ಪುರಾಣಿಕ್ ಹೇಳಿದ್ದಾರೆ.
ದೇವಸ್ಥಾನದಲ್ಲಿ ದೀಪಕ್ಕೆ ಹಾಕುವ ಎಣ್ಣೆ, ಇನ್ನಿತರ ಪದಾರ್ಥಗಳೆಲ್ಲ ಕಲಬೆರಕೆಯಿಂದ ಕೂಡಿದ್ದು ಎಲ್ಲವನ್ನೂ ಆಯಾ ದೇವಸ್ಥಾನದಲ್ಲೇ ಮಾಡಿದರೆ ಕಲಬೆರಕೆ ತೊಂದರೆ ಎದುರಾಗುವುದಿಲ್ಲ. ಕೆಲವು ದೇವಸ್ಥಾನಗಳಲ್ಲಿ ಗೋಗ್ರಾಸವನ್ನು ನಾಯಿಗೆ ಹಾಕುವ ಪ್ರಮೇಯಗಳಿವೆ. ಇದರ ಬದಲು ಗೋವನ್ನೇ ಸಾಕಿದರೆ, ಅದಕ್ಕೇ ಹಾಕಲು ಅವಕಾಶವಾಗುತ್ತದೆ. ಈ ರೀತಿ ಧರ್ಮ ಸಮ್ಮತವಾಗಿಯೇ ಎಲ್ಲವೂ ನಡೆಯಬೇಕು. ಸರಕಾರದ, ರಾಜಕೀಯ ಹಿಡಿತ ಇದ್ದವರ ಸುಪರ್ದಿಯಿಂದಾಗಿ ದೇವಸ್ಥಾನಗಳಲ್ಲಿ ಅಪವಿತ್ರ ಆಗುವ ಸ್ಥಿತಿಯಾಗಿದೆ. ಸರಕಾರ, ರಾಜಕೀಯ ಹಿಡಿತದ ಬದಲಾಗಿ ದೇವರ ಬಗ್ಗೆ ನಂಬಿಕೆಯುಳ್ಳವರೇ ಒಳಗೊಂಡ ರಾಷ್ಟ್ರೀಯ ಮತ್ತು ರಾಜ್ಯ ಧಾರ್ಮಿಕ ಪರಿಷತ್ತನ್ನು ಸ್ಥಾಪಿಸಿ ದೇವಸ್ಥಾನಗಳನ್ನು ನಿರ್ವಹಿಸಬೇಕು ಎಂದು ಧರ್ಮಾಗ್ರಹ ಸಭೆ ಆಗ್ರಹಿಸಿದೆ.
ಸಭೆಯಲ್ಲಿ ಒಡಿಯೂರು ಗುರುದೇವಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ, ಮಾತನಾಂದಮಯಿ ಶ್ರೀ, ವಿಖ್ಯಾತಾನಂದ ಶ್ರೀ ಸೇರಿದಂತೆ ವಿಶ್ವ ಹಿಂದು ಪರಿಷತ್ ಮತ್ತು ಇತರ ಹಿಂದು ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
Tirupati Laddu row, Mangalore VHP demands Tirupati temple to hand over to them after. The controversy erupted last week when Andhra Pradesh Chief Minister N Chandrababu Naidu said that lab reports had shown that laddus offered to the deity and then distributed to devotees every day at the famous Tirupati temple in the state were contaminated with animal and vegetable fat.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm