ಬ್ರೇಕಿಂಗ್ ನ್ಯೂಸ್
04-10-24 07:22 pm Udupi Correspondent ಕರಾವಳಿ
ಕಾನ್ಪುರ, ಅ.4: ಮುಖ ಸುಕ್ಕುಗಟ್ಟುತ್ತಿರುವ ವೃದ್ಧರಿಗೆ ಇಂತಿಷ್ಟು ಹಣ ಕೊಟ್ಟರೆ ಯುವಕರನ್ನಾಗಿಸುತ್ತೇವೆ ಅಂದರೆ, ಯಾರಿಗೆ ಬೇಡ ಹೇಳಿ. ಯಾರಿಗೂ ವೃದ್ಧಾಪ್ಯ ಬೇಡ, ಸದಾ ಹುಮ್ಮಸ್ಸಿನ ಯೌವ್ವನವನ್ನೇ ಜನ ಬಯಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಉತ್ತರ ಪ್ರದೇಶದ ದಂಪತಿ, ಹಲವಾರು ವೃದ್ಧ ದಂಪತಿಯನ್ನು ನಂಬಿಸಿ ಬರೋಬ್ಬರಿ 35 ಕೋಟಿಗೂ ಹೆಚ್ಚು ಹಣವನ್ನು ಪೀಕಿಸಿಕೊಂಡು ತಲೆಮರೆಸಿಕೊಂಡಿದ್ದಾರೆ.
ರಾಜೀವ ಕುಮಾರ್ ದುಬೆ ಮತ್ತು ಆತನ ಪತ್ನಿ ರಶ್ಮಿ ಈ ಖತರ್ನಾಕ್ ಐಡಿಯಾ ಮೂಲಕ ಕೋಟ್ಯಂತರ ರೂಪಾಯಿ ಗಳಿಸಿದವರು. ದೂರು ದಾಖಲಾಗುತ್ತಲೇ ನಾಪತ್ತೆಯಾಗಿದ್ದು, ವಿದೇಶಕ್ಕೆ ಪರಾರಿಯಾಗಿದ್ದಾರೆ ಎನ್ನುವ ಶಂಕೆಯೂ ಮೂಡಿದೆ. ಕಾನ್ಪುರದ ಕಿದ್ವಾಯಿ ನಗರದಲ್ಲಿ ಇವರು ರೀವೈವಲ್ ವರ್ಲ್ಡ್ ಎನ್ನುವ ಹೆಸರಲ್ಲಿ ಆಕ್ಸಿಜನ್ ಥೆರಪಿ ನೀಡುತ್ತೇವೆಂದು ಚಿಕಿತ್ಸಾ ಕೇಂದ್ರ ತೆರೆದಿದ್ದರು. ನಮ್ಮಲ್ಲಿ ಇಸ್ರೇಲ್ ನಿರ್ಮಿತ ಮೆಷಿನ್ ಇದ್ದು, ಅದನ್ನು ಬಳಸಿ ವೃದ್ಧರನ್ನು ಕೇವಲ 90 ಸಾವಿರ ರೂ.ಗೆ 25 ವರ್ಷದ ಯುವಕರನ್ನಾಗಿಸುತ್ತೇವೆ ಎಂದು ನಂಬಿಸುತ್ತಿದ್ದರು. ಖಾನ್ಪುರದಲ್ಲಿ ತೀವ್ರ ಮಾಲಿನ್ಯದಿಂದಾಗಿ ಬೇಗನೆ ವೃದ್ಧಾಪ್ಯ ಬರುತ್ತಿದ್ದು, ಟೈಮ್ ಮೆಷಿನ್ ಮೂಲಕ ಕಡಿಮೆ ಸಮಯದಲ್ಲಿ ನಿಮಗೆ ಯೌವ್ವನ ಮರಳಿಸುತ್ತೇವೆ ಎಂದು ಹೇಳುತ್ತಿದ್ದರು.
ಇವರ ಮೋಡಿ ಮಾತಿಗೆ ಮರುಳಾಗಿ ಹಲವಾರು ಮಂದಿ ಹಣ ತೆತ್ತು ಚಿಕಿತ್ಸೆಗೆ ಮುಂದಾಗಿದ್ದರು. ಹೆಚ್ಚೆಚ್ಚು ಗ್ರಾಹಕರನ್ನು ತಂದುಕೊಟ್ಟಲ್ಲಿ ಅಂಥವರಿಗೆ ಚಿಕಿತ್ಸೆಯಲ್ಲಿ ಡಿಸ್ಕೌಂಟ್ ಕೊಡಿಸುವ ಭರವಸೆ ನೀಡುತ್ತಿದ್ದರು. ಗೋವಿಂದನಗರ ಎಸ್ಪಿ ಅಂಜಲಿ ವಿಶ್ವಕರ್ಮ ಪ್ರತಿಕ್ರಿಯೆ ನೀಡಿದ್ದು, ಈವರೆಗೆ ಮೂವರು ಈ ಬಗ್ಗೆ ದೂರು ಕೊಟ್ಟಿದ್ದಾರೆ. ಅವರ ಪ್ರಕಾರ, 25ಕ್ಕೂ ಹೆಚ್ಚು ಮಂದಿ ಈ ರೀತಿ ಹಣ ಕಳಕೊಂಡಿದ್ದಾರಂತೆ ಎಂದು ತಿಳಿಸಿದ್ದಾರೆ. ಪೊಲೀಸರಿಗೆ ದೂರು ನೀಡಿರುವವರಲ್ಲಿ ರೇಣು ಸಿಂಗ್ ಚಂದೇಲ್ ಎಂಬವರು ತನ್ನಿಂದ 10.75 ಲಕ್ಷ ರೂಪಾಯಿ ದೋಚಿದ್ದಾರೆಂದು ತಿಳಿಸಿದ್ದಾರೆ. ಪೊಲೀಸರು ದಂಪತಿ ವಿರುದ್ಧ ಬಿಎನ್ಎಸ್ ಸೆಕ್ಷನ್ 318(4) ಪ್ರಕಾರ ಮೋಸದ ಪ್ರಕರಣ ದಾಖಲಿಸಿದ್ದಾರೆ.
ರೇಣು ಸಿಂಗ್ ಅವರಲ್ಲಿ ಮುಂದಿನ ಸೆಷನ್ ನಿಮಗೆ ಫ್ರೀ ಮಾಡುತ್ತೇವೆ, ಇನ್ನಷ್ಟು ಗ್ರಾಹಕರನ್ನು ಕೊಡಿಸಿದಲ್ಲಿ ನಿಮ್ಗೆ ಮುಂದೆ ಫ್ರೀ ಚಿಕಿತ್ಸೆ ಎಂದು ನಂಬಿಸಿದ್ದರು. ರೇಣು ಅವರೇ ಹಲವಾರು ಮಂದಿ ಗ್ರಾಹಕರನ್ನು ಕೊಡಿಸಿದ್ದು ದಂಪತಿಗೆ ಲಕ್ಷಾಂತರ ರೂ. ಹಣವನ್ನೂ ಕೊಟ್ಟಿದ್ದರಂತೆ. 65 ವರ್ಷದವರೂ 25 ವರ್ಷದ ಯುವಕರಂತಾಗುತ್ತಾರೆ, ಆದರೆ ಪ್ರತಿ ಬಾರಿ ಆಕ್ಸಿಜನ್ ಥೆರಪಿ ಸೆಷನ್ನಿಗೆ ಹಾಜರಾಗಬೇಕು ಎಂದು ರಾಜೀವ ಕುಮಾರ್ ದುಬೆ ನಂಬಿಸುತ್ತಿದ್ದ. ರೇಣು ಸಿಂಗ್ ಅವರಲ್ಲಿ 9 ಲಕ್ಷ ಮತ್ತು ಪ್ಲಾಂಟ್ ವಿಸ್ತರಣೆಗೆಂದು ಮತ್ತೆ 3.50 ಲಕ್ಷ ರೂ. ಪಡೆದಿದ್ದ. ಇಸ್ರೇಲಿನಿಂದ ಅತ್ಯಾಧುನಿಕ ಮೆಷಿನ್ ತರಿಸುತ್ತಿದ್ದೇನೆ, ಆನಂತರ ನಿಮ್ಮ ಹಣ ವಾಪಸ್ ಮಾಡುತ್ತೇವೆ ಎಂದಿದ್ದರು. ಆದರೆ ಇದೇ ರೀತಿ ಖಾನ್ಪುರದಲ್ಲಿ ಹಲವರಿಂದ ಹಣ ಪಡೆದಿದ್ದಾರೆಂದು ತಿಳಿದುಬಂದಿದ್ದು, 35 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ನಾಪತ್ತೆಯಾಗಿದ್ದಾರೆ. ಸದ್ಯಕ್ಕೆ ವಿದೇಶಕ್ಕೆ ಪರಾರಿಯಾಗಿದ್ದಾರೆ ಎನ್ನುವ ಶಂಕೆ ಮೂಡಿದೆ.
If you are getting old, the promise of an “elixir” to make you young again does seem enchanting. However, as foolish as it may sound, dozens of elderly people from Kanpur fell for this captivating assurance and lost crores of rupees when a couple approached them with the idea of turning back the clock to make them young again.
19-09-25 10:04 pm
Bangalore Correspondent
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
Traffic Violation, Bangalore: ರಾಜ್ಯದಲ್ಲಿ ಸಂಚಾ...
18-09-25 05:34 pm
19-09-25 05:45 pm
HK News Desk
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
19-09-25 10:46 pm
Mangalore Correspondent
ಕಟೀಲು ದೇಗುಲದಲ್ಲಿ ಸೇವಾ ದರ ಏಕಾಏಕಿ ದುಪ್ಪಟ್ಟು ; ಬ...
19-09-25 10:21 pm
ಧರ್ಮಸ್ಥಳ ಕೇಸ್ ; ಅನೇಕ ಶವಗಳನ್ನು ಹೂತಿದ್ದೆವು ಎಂದಿ...
19-09-25 09:59 pm
Kadri, Mangalore, Smart City: ‘ಸ್ಮಾರ್ಟ್ ಸಿಟಿ’...
19-09-25 07:53 pm
ಇನ್ಸ್ಟಾ ಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ; ಆರೋಪಿ...
19-09-25 04:58 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm