ಬ್ರೇಕಿಂಗ್ ನ್ಯೂಸ್
05-10-24 03:54 pm Mangalore Correspondent ಕರಾವಳಿ
ಮಂಗಳೂರು, ಅ.5: ರಾಜ್ಯದ ಕಾಂಗ್ರೆಸ್ ಸರಕಾರ ಅಭಿವೃದ್ಧಿಯನ್ನೇ ಕಡೆಗಣಿಸಿದೆ. ಹಿಂದೆ ಯಡಿಯೂರಪ್ಪ, ಬೊಮ್ಮಾಯಿ ಸರಕಾರವಿದ್ದಾಗ ಅಭಿವೃದ್ಧಿಗೆ ಅತೀ ಹೆಚ್ಚು ಅನುದಾನ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಅನ್ನೋದು ಕನಸಿನ ಮಾತಾಗಿದೆ. ದಕ್ಷಿಣ ಕನ್ನಡದ ಹಾಲಿನ ಡೈರಿಗಳು ಲಾಸ್ ನಲ್ಲಿವೆ. ಶಾಸಕರ ಹಕ್ಕಿನ ಶಾಸಕತ್ವ ನಿಧಿಯನ್ನೂ ಬಿಡುಗಡೆ ಮಾಡಲಾಗುತ್ತಿಲ್ಲ. ನಮ್ಮ ವಿರುದ್ಧ 40 ಶೇ. ಭ್ರಷ್ಟಾಚಾರದ ಆರೋಪ ಮಾಡಿದ್ದ ಕಾಂಗ್ರೆಸಿನದ್ದು ಈಗ 80 ಶೇ. ಸರಕಾರವಾಗಿದೆ. ಇದು ಕಳ್ಳರ ಸರಕಾರ, ಭ್ರಷ್ಟಾಚಾರಿಗಳ ಸರಕಾರ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ತನ್ನ ವಿರುದ್ಧ ಎಫ್ಐಆರ್ ದಾಖಲಾದ ಬಳಿಕ ನೈತಿಕತೆಯಿಂದ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ಮೈಸೂರು ದಸರಾದಲ್ಲಿ ತನ್ನ ಹೆಗ್ಗಳಿಕೆ, ಭ್ರಷ್ಟಾಚಾರದ ಆರೋಪ, ಆತ್ಮಸಾಕ್ಷಿ ಬಗ್ಗೆ ಹೇಳಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರಿಗೆ ಆತ್ಮವೇ ಇಲ್ಲ ಮತ್ತು ಆತ್ಮಸಾಕ್ಷಿ ಎಲ್ಲಿರಬೇಕು. ಆತ್ಮಸಾಕ್ಷಿ ಇದ್ದಿದ್ದರೆ ಈ ರೀತಿ ನಡೆದುಕೊಳ್ಳದೇ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸುತ್ತಿದ್ದರು.
ಕಾಂಗ್ರೆಸ್ ಸರಕಾರದಡಿ ಹಲ್ಲೆ, ಗಲಭೆ, ಹಿಂದೂ ಮುಸ್ಲಿಂ ಗಲಾಟೆಗಳು ನಡೆಯುತ್ತಿದೆ. ಪಾಕಿಸ್ತಾನ ಪರ ಘೋಷಣೆ ಹಾಕಿದವರ ಬಂಧನವಾಗಿಲ್ಲ. ಹಿಂದೂ ಸಮಾಜದ ಮೇಲೆ ದಾಳಿಯಾಗುವ ಕೆಲಸವಾಗುತ್ತಿದೆ. ಇದನ್ನ ಹತ್ತಿಕ್ಕುವ ಕೆಲಸಗಳು ಆಗುತ್ತಿಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ದ್ವೇಷ ರಾಜಕಾರಣ ನಡೆಸುತ್ತಿದೆ. ನಮ್ಮ ಸರಕಾರದ ಮೇಲೆ ಆರೋಪ ಮಾಡಿದ್ದರು. ಆದರೆ ದಾಖಲೆ ಇರಲಿಲ್ಲ. ಕೆಂಪಣ್ಣ ಹಿಡಿದು ರಾಜಕೀಯ ಮಾಡಿದ್ರೆ ಹೊರತು ನಮ್ಮ ವಿರುದ್ಧದ ಯಾವುದೇ ಕೇಸು ನಿಲ್ಲಲಿಲ್ಲ. ಆದರೆ ನಾವು ಯಾರ ಮೇಲೂ ಕೇಸ್ ಹಾಕಿಲ್ಲ. ಸಿದ್ದರಾಮಯ್ಯ ಮೇಲೆ ಆರೋಪ ಮಾತ್ರ ಅಲ್ಲ, ಕಾನೂನಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಆತ್ಮಸಾಕ್ಷಿ ನ್ಯಾಯಾಲಯದ ಮೊರೆ ಹೋಗುತ್ತೇನೆ ಎನ್ನುತ್ತಾರೆ. ತನಿಖೆಗೆ ಆದೇಶ ಆಗಿದೆ, ಆದರೆ ಇವರು ರಾಜ್ಯಪಾಲರ ಆದೇಶವನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ಇವರಿಗೆ ಆತ್ಮವೇ ಇಲ್ಲ, ಇನ್ನು ಆತ್ಮ ಸಾಕ್ಷಿ ಎಲ್ಲಿಂದ ಬಂತು. ಸಿದ್ದರಾಮಯ್ಯ ಮೊದಲಿಗೆ ರಾಜೀನಾಮೆ ಕೊಟ್ಟು ತನಿಖೆಗೆ ಆದೇಶ ಮುಂದಾಗಬೇಕಿತ್ತು. ಆಗ ಅವರ ಆದರ್ಶಗಳ ಬೆಲೆ ಇನ್ನಷ್ಟು ಗೌರವ ಹೆಚ್ಚುತ್ತಿತ್ತು ಎಂದು ಬಿಜೆಪಿ ಮಾಜಿ ರಾಜ್ಯಾದ್ಯಕ್ಷರೂ ಆದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಚುನಾವಣೆ ಬಾಂಡ್ ವಿಷಯದಲ್ಲಿ ಎಫ್ಐಆರ್ ದಾಖಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಬಾಂಡ್ ಸರಿಯಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇಸ್ ಹಾಕಿದವರು ಯಾರೋ ಸಂಬಂಧವೇ ಇಲ್ಲದವರು. ಕೇಸ್ ಹಾಕಿದವರು ಮೂರನೇ ವ್ಯಕ್ತಿ, ಎಫ್ ಐ ಆರ್ ಆಗಿದೆ. ಸದ್ಯ ತಡೆಯಾಜ್ಞೆ ಸಿಕ್ಕಿದೆ. ಸಿದ್ದರಾಮಯ್ಯ ಕೇಸ್ ಹಾಗಲ್ಲ, ಮುಡಾ ಹಾಗೂ ವಾಲ್ಮೀಕಿ ಹಗರಣ ಎರಡರಲ್ಲೂ ಸಿಕ್ಕಿಬಿದ್ದಿದ್ದಾರೆ ಎಂದರು.
Former BJP State President Nalin Kumar Kateel has accused the Siddaramaiah-led Karnataka government of withholding development funds for the past one and a half years, resulting in stalled projects across the state.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm