ಬ್ರೇಕಿಂಗ್ ನ್ಯೂಸ್
09-10-24 02:35 pm Mangalore Correspondent ಕರಾವಳಿ
ಉಳ್ಳಾಲ, ಅ.9: ಉಳ್ಳಾಲ ನಗರಸಭೆಯಿಂದ ತಡೆ ಆದೇಶವಿದ್ದರೂ ವಾಣಿಜ್ಯ ಕಟ್ಟಡವೊಂದರಲ್ಲಿ ರಾತೋರಾತ್ರಿ ಮೊಬೈಲ್ ಟವರ್ ಅಳವಡಿಸಿದ್ದರ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದು ಪ್ರತಿಭಟಿಸಿದ್ದು ಸ್ಥಳಕ್ಕೆ ಬಂದ ಪೊಲೀಸರು ಟವರ್ ಕಾಮಗಾರಿಯನ್ನ ಸ್ಥಗಿತಗೊಳಿಸಿದ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ.
ತೊಕ್ಕೊಟ್ಟು ಒಳಪೇಟೆಯ "ಗಟ್ಟಿ ಟವರ್ಸ್" ಬಹು ಮಹಡಿ ವಾಣಿಜ್ಯ ಕಟ್ಟಡದಲ್ಲಿ ನಿನ್ನೆ ರಾತ್ರಿ ಏಕಾಏಕಿ ಏರ್ಟೆಲ್ ಕಂಪನಿಯ ಟವರ್ ತಲೆ ಎತ್ತಿ ನಿಂತಿದೆ. ಕಟ್ಟಡದಲ್ಲಿ ಈ ಮೊದಲು ಜಿಯೋ ಕಂಪನಿಯ ಸಣ್ಣ ಟವರ್ ಅಳವಡಿಸಲಾಗಿದ್ದು ಇದಕ್ಕೆ ಸ್ಥಳೀಯರು ಚಕಾರ ಎತ್ತಿರಲಿಲ್ಲ. ಆದರೆ ಕಟ್ಟಡದಲ್ಲಿ ಏರ್ ಟೆಲ್ ಕಂಪನಿಯ ಮತ್ತೊಂದು ದೊಡ್ಡ ಟವರ್ ನಿರ್ಮಾಣವಾಗುವ ವಿಚಾರ ತಿಳಿದ ಸ್ಥಳೀಯರು ಟವರ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಉಳ್ಳಾಲ ನಗರಸಭೆಗೆ ದೂರು ನೀಡಿದ್ದರು. ಕಳೆದ ಜೂನ್ ತಿಂಗಳಲ್ಲೇ ನಗರಸಭೆಯ ಹಿಂದಿನ ಪೌರಾಯುಕ್ತೆ ವಾಣಿ ಆಳ್ವ ಟವರ್ ನಿರ್ಮಿಸದಂತೆ ತಡೆ ಆದೇಶ ನೀಡಿದ್ದರು. ವಾಣಿ ಆಳ್ವ ವರ್ಗಾವಣೆಗೊಂಡ ನಂತರ ಕಟ್ಟಡ ಮಾಲಕರು ಮತ್ತೆ ಟವರ್ ನಿರ್ಮಾಣಕ್ಕೆ ಮುಂದಾಗಿದ್ದರು.
ಸ್ಥಳೀಯರ ದೂರಿನನ್ವಯ ನಗರಸಭೆಯು ನಿನ್ನೆ (ಅ.8) ಕಟ್ಟಡ ಮಾಲಕ ಸತೀಶ್ ಗಟ್ಟಿ ಅವರಿಗೆ ಟವರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ತಡೆ ಆದೇಶ ನೀಡಿತ್ತು. ತಡೆ ಆದೇಶವನ್ನು ಧಿಕ್ಕರಿಸಿ ನಿನ್ನೆ ರಾತ್ರಿ ಕಟ್ಟಡದಲ್ಲಿ ಟವರ್ ಕಾಮಗಾರಿ ನಡೆಸಲಾಗಿತ್ತು. ಉಳ್ಳಾಲ ನಗರಸಭೆಯಲ್ಲಿ ಝಂಡಾ ಹೂಡಿರುವ ಭ್ರಷ್ಟ ಅಧಿಕಾರಿಯೋರ್ವನ ಸಲಹೆಯಂತೆ ರಾತ್ರಿ ಹೊತ್ತಲ್ಲಿ ಕಾಮಗಾರಿ ನಡೆಸಲಾಗಿದೆ ಎನ್ನಲಾಗಿದೆ. ಇಂದು ಬೆಳಗ್ಗೆಯೂ ಟವರ್ ಕಾಮಗಾರಿ ನಡೆಸುತ್ತಿದ್ದು ಸ್ಥಳೀಯ ನಿವಾಸಿಗಳು ಜಮಾಯಿಸಿ ತಡೆದಿದ್ದಾರೆ.
ಸ್ಥಳಕ್ಕೆ ಬಂದ ಕಟ್ಟಡ ಮಾಲಕ ಸತೀಶ್ ಗಟ್ಟಿ ಮತ್ತು ಅವರ ಪುತ್ರನನ್ನು ಸ್ಥಳೀಯ ನಿವಾಸಿಗಳು ತರಾಟೆಗೆತ್ತಿಕೊಂಡಿದ್ದು ಮಾತಿನ ಚಕಮಕಿ ನಡೆದಿದೆ. ಮಧ್ಯ ಪ್ರವೇಶಿಸಿದ ಉಳ್ಳಾಲ ಪೊಲೀಸರು ಕಾಮಗಾರಿಯನ್ನ ತಡೆದಿದ್ದು ಕಟ್ಟಡ ಮಾಲಕರನ್ನು ವಿಚಾರಣೆಗೆ ಠಾಣೆಗೆ ಕರೆದೊಯ್ದಿದ್ದಾರೆ. ಗಟ್ಟಿ ಟವರ್ಸ್ ಆಸುಪಾಸಿನಲ್ಲಿ ಐವತ್ತಕ್ಕೂ ಹೆಚ್ಚು ಮನೆಗಳಿವೆ. ಕಟ್ಟಡ ಮಾಲಕರು ದೂರದಲ್ಲಿ ನೆಲೆಸಿದ್ದಾರೆ. ಕೇವಲ ಹಣ ಗಳಿಸುವ ದುರುದ್ದೇಶದಿಂದ ಕಟ್ಟಡದಲ್ಲಿ ಟವರ್ ನಿರ್ಮಿಸುತ್ತಿರುವುದು ಖಂಡನೀಯ. ಟವರ್ ರೇಡಿಯೇಷನ್ ನಿಂದ ಆಸುಪಾಸಿನ ನಿವಾಸಿಗಳ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಯಾವುದೇ ಕಾರಣಕ್ಕೂ ನಾವು ಟವರ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲವೆಂದು ಸ್ಥಳೀಯ ನಿವಾಸಿ ನರೇಂದ್ರ ತೊಕ್ಕೊಟ್ಟು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ನಗರಸಭೆಯಿಂದ ತಡೆ ನೀಡಿದ್ದರೂ ರಾತ್ರಿ ವೇಳೆ ಟವರ್ ಕಾಮಗಾರಿ ನಡೆಸಲಾಗಿದೆ. ನಾವು ಕಾಮಗಾರಿಯನ್ನು ತಡೆಯುತ್ತೇವೆ. ಟವರ್ ನಿರ್ಮಾಣದ ಬಗ್ಗೆ ತಾಂತ್ರಿಕವಾಗಿ ಪರಿಶೀಲನೆ ನಡೆಸಲಾಗುವುದು. ಬಳಿಕ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಚರ್ಚಿಸಿ ಕಾನೂನಿನ ಪ್ರಕಾರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದೆಂದು ಉಳ್ಳಾಲ ನಗರಸಭೆಯ ಪೌರಾಯುಕ್ತರಾದ ಮತ್ತಡಿ ತಿಳಿಸಿದ್ದಾರೆ.
Mangalore Illegal mobile tower installed on building at Thokottu amid objection from Ullal town municipal, residents protest and slam building owner for installing mobile tower without any prior permission.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
28-07-25 10:41 pm
Mangalore Correspondent
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
28-07-25 11:20 pm
Mangalore Correspondent
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm