ಬ್ರೇಕಿಂಗ್ ನ್ಯೂಸ್
09-10-24 05:59 pm Mangalore Correspondent ಕರಾವಳಿ
ಮಂಗಳೂರು, ಅ.9: ಉದ್ಯಮಿ ಮುಮ್ತಾಜ್ ಆಲಿ ಆತ್ಮಹತ್ಯೆಗೆ ಕಾರಣವಾದ ಬ್ಲಾಕ್ಮೇಲ್ ಮತ್ತು ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ಮುಖಂಡ ಅಬ್ದುಲ್ ಸತ್ತಾರ್, ಮುಸ್ತಫಾ ಮತ್ತು ಶಾಫಿ ನಂದಾವರ ಬಂಧಿತರು.
ಬ್ಲಾಕ್ಮೇಲ್ ಪ್ರಕರಣದ ಸೂತ್ರಧಾರೆ ಎನ್ನಲಾದ ಆಯೆಷಾ ರೆಹ್ಮತ್ ಮತ್ತು ಆಕೆಯ ಪತಿ ಶೋಯೆಬ್ ಎಂಬವರನ್ನು ಈಗಾಗಲೇ ಬಂಧಿಸಿದ್ದು, ಕಾವೂರು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಮತ್ತೆ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ಕಾವೂರು ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.
ಆಯೆಷಾ ರೆಹ್ಮತ್, ಉದ್ಯಮಿ ಮುಮ್ತಾಜ್ ಆಲಿ ನಡೆಸುತ್ತಿದ್ದ ಕಾಲೇಜಿನಲ್ಲಿ ಕೆಲಸಕ್ಕಿದ್ದ ಮಹಿಳೆಯಾಗಿದ್ದು, ಆಲಿಯೊಂದಿಗೆ ಹತ್ತಿರದ ಒಡನಾಟ ಹೊಂದಿದ್ದರು. ಈ ಬಗ್ಗೆ ಆಯೆಷಾ ಜೊತೆಗೆ ಆರೋಪಿಗಳಲ್ಲೊಬ್ಬ ಮಾತನಾಡಿದ್ದ ಆಡಿಯೋದಲ್ಲಿ ಇವರಿಬ್ಬರ ಸಂಬಂಧ ಮತ್ತು ಇನ್ನಿತರ ವಿಚಾರಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ. ಅದೇ ಆಡಿಯೋವನ್ನು ಮುಂದಿಟ್ಟು ಅಬ್ದುಲ್ ಸತ್ತಾರ್, ಉದ್ಯಮಿ ಮುಮ್ತಾಜ್ ಆಲಿಯನ್ನು ಬ್ಲಾಕ್ಮೇಲ್ ನಡೆಸಿದ್ದು ಹಣಕ್ಕಾಗಿ ಪೀಡಿಸಿದ್ದ ಎನ್ನಲಾಗುತ್ತಿದೆ.
ಅಬ್ದುಲ್ ಸತ್ತಾರ್ ಕೈಕಂಬ ಬಳಿಯ ಸೂರಲ್ಪಾಡಿ ನಿವಾಸಿಯಾಗಿದ್ದು ಕಳೆದ ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬರ ಜೊತೆಗೆ ಹತ್ತಿರದ ಒಡನಾಟ ಇರಿಸಿಕೊಂಡಿದ್ದ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಪುಢಾರಿಯ ರೀತಿ ಪೋಸು ನೀಡುತ್ತಿದ್ದ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮೊಯ್ದೀನ್ ಬಾವ ಜೆಡಿಎಸ್ ನಲ್ಲಿ ಸ್ಪರ್ಧಿಸಿದಾಗ, ಅವರಿಗೆದುರಾಗಿ ಅಬ್ದುಲ್ ಸತ್ತಾರ್ ಮತ್ತು ಆತನ ಪಟಾಲಂ ಕೆಲಸ ಮಾಡಿದ್ದರು. ಸತ್ತಾರ್ ಜೊತೆಗೆ ಈಗ ಪ್ರಕರಣದಲ್ಲಿ ಆರೋಪಿಗಳೆಂದು ಗುರುತಿಸಲ್ಪಟ್ಟವರೂ ಇದ್ದರು.
ಇದೇ ಕಾರಣಕ್ಕೆ ಬ್ಲಾಕ್ಮೇಲ್ ಕುರಿತು ನೀಡಿರುವ ದೂರಿನಲ್ಲಿ ರಾಜಕೀಯ ವಿರೋಧಿಯಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಗಳು ಮುಮ್ತಾಜ್ ಆಲಿಯನ್ನು ಬ್ಲಾಕ್ಮೇಲ್ ಮಾಡಿದ್ದರೆಂದು ಉಲ್ಲೇಖಿಸಲಾಗಿತ್ತು. ಈ ತಂಡವು ಸೇರಿಕೊಂಡು ಈಗಾಗಲೇ 50 ಲಕ್ಷ ಹಣ ಪಡೆದಿದ್ದು, ಮತ್ತೆ 25 ಲಕ್ಷದ ಚೆಕ್ ಪಡೆದಿದ್ದಾಗಿಯೂ ದೂರಿನಲ್ಲಿ ಹೇಳಲಾಗಿದೆ. ಈ ಹಣವನ್ನು ಪೊಲೀಸರು ಸೀಜ್ ಮಾಡುತ್ತಾರೆಯೇ ಎನ್ನುವುದು ಗೊತ್ತಾಗಿಲ್ಲ. ಬಂಟ್ವಾಳ ತಾಲೂಕಿನ ನಂದಾವರ ನಿವಾಸಿಯಾಗಿರುವ ಶಾಫಿ ಮರಳು ದಂಧೆ ನಡೆಸುತ್ತಿರುವುದಲ್ಲದೆ, ಇದೇ ರೀತಿ ಹಲವರನ್ನು ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ಹಣ ವಸೂಲಿ ಮಾಡಿದ್ದಾನೆ ಎನ್ನುವ ವದಂತಿಗಳಿವೆ. ಈ ಹಿಂದೆ ಧಾರ್ಮಿಕ ಮುಖಂಡರೊಬ್ಬರನ್ನೂ ಹನಿಟ್ರ್ಯಾಪ್ ಮಾಡಲು ಯತ್ನಿಸಿ ಆಡಿಯೋ ಮುಂದಿಟ್ಟು ಹಣ ವಸೂಲಿ ಮಾಡಿದ್ದಾಗಿಯೂ ಆರೋಪ ಕೇಳಿಬರುತ್ತಿದೆ.
Mangalore Mumtaz Ali Suicide Case, another three including congress member arrested over blackmail. The arrested individuals, identified as Abdul Satthar, Mustafa, and Shafi, are believed to have played a crucial role in the events leading to Ali's tragic death. Abdul Satthar is marked A2 in the FIR and is said to be as mastermind of the crime.
19-09-25 10:04 pm
Bangalore Correspondent
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
Traffic Violation, Bangalore: ರಾಜ್ಯದಲ್ಲಿ ಸಂಚಾ...
18-09-25 05:34 pm
19-09-25 05:45 pm
HK News Desk
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
19-09-25 10:46 pm
Mangalore Correspondent
ಕಟೀಲು ದೇಗುಲದಲ್ಲಿ ಸೇವಾ ದರ ಏಕಾಏಕಿ ದುಪ್ಪಟ್ಟು ; ಬ...
19-09-25 10:21 pm
ಧರ್ಮಸ್ಥಳ ಕೇಸ್ ; ಅನೇಕ ಶವಗಳನ್ನು ಹೂತಿದ್ದೆವು ಎಂದಿ...
19-09-25 09:59 pm
Kadri, Mangalore, Smart City: ‘ಸ್ಮಾರ್ಟ್ ಸಿಟಿ’...
19-09-25 07:53 pm
ಇನ್ಸ್ಟಾ ಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ; ಆರೋಪಿ...
19-09-25 04:58 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm