ಬ್ರೇಕಿಂಗ್ ನ್ಯೂಸ್
10-10-24 11:19 pm Mangalore Correspondent ಕರಾವಳಿ
ಮಂಗಳೂರು, ಅ.10: ತುಳು ಕರಾವಳಿ ಜನರ ಆಡು ಭಾಷೆಯಾಗಿದ್ದು, ಇಲ್ಲಿನ ಜನಪದ, ಸಂಸ್ಕೃತಿ, ಇತಿಹಾಸ, ಭಾಷಾ ಜ್ಞಾನದ ಬಗ್ಗೆ ತಿಳಿಯುವ ಉದ್ದೇಶದಿಂದ ಎಂಎ ಸ್ನಾತಕೋತ್ತರ ಅಧ್ಯಯನಕ್ಕೆ ವಿದ್ಯಾರ್ಥಿಗಳು ಬರುತ್ತಾರೆ ವಿನಾ ಯಾವುದೇ ಉದ್ಯೋಗದ ಭರವಸೆಯಿಂದಲ್ಲ. ಆದರೆ, ತುಳುನಾಡನ್ನು ಪ್ರತಿನಿಧಿಸುವ ಮಂಗಳೂರು ವಿವಿಯಲ್ಲಿ ತುಳು ಎಂಎ ಅಧ್ಯಯನಕ್ಕೆ ಏಕಾಏಕಿ ಶುಲ್ಕವನ್ನು ದುಪ್ಪಟ್ಟುಗೊಳಿಸಿದ್ದು ವಿದ್ಯಾರ್ಥಿಗಳಿಗೆ ತೀವ್ರ ಹೊರೆಯಾಗಿಸಿದೆ ಎಂದು ತುಳು ಎಂಎ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಕಣ್ವತೀರ್ಥ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತುಳು ಅಕಾಡೆಮಿ ಸ್ಥಾಪನೆಯಿಂದಾಗಿ ತುಳು ಭಾಷಾ ಚಳವಳಿಗೆ ಸಂಘಟನಾತ್ಮಕ ನೆಲೆ ದೊರಕಿತ್ತು. 2018ರಲ್ಲಿ ತುಳು ಅಕಾಡೆಮಿಯ ಒತ್ತಾಸೆಯಿಂದಲೇ ಮಂಗಳೂರು ವಿವಿಯ ಸಂಧ್ಯಾ ಕಾಲೇಜಿನಲ್ಲಿ ತುಳು ಎಂಎ ತರಗತಿ ಆರಂಭಿಸಲಾಗಿತ್ತು. ಆರಂಭದಲ್ಲಿ 15 ಸಾವಿರ ಶುಲ್ಕ ಇದ್ದುದನ್ನು ಸ್ಥಳೀಯ ಭಾಷಾ ಅಧ್ಯಯನಕ್ಕೆ ಮಂಗಳೂರು ವಿವಿಯಿಂದ ವಿಶೇಷ ರಿಯಾಯಿತಿ ನೀಡಬೇಕೆಂದು ಮನವಿ ಮಾಡಿದ್ದಕ್ಕೆ 2021ರಲ್ಲಿ ಮತ್ತೆ 4 ಸಾವಿರ ಕಡಿತ ಮಾಡಲಾಗಿತ್ತು. ಆದರೆ, ಈತನಕ 11 ಸಾವಿರ ಇದ್ದ ವಾರ್ಷಿಕ ಶುಲ್ಕವನ್ನು ಈ ಬಾರಿ 22 ಸಾವಿರಕ್ಕೆ ಏರಿಸಲಾಗಿದೆ.
ಇದಲ್ಲದೆ, ಕೋರ್ಸ್ ಮುಂದುವರಿಸಲು ಕನಿಷ್ಠ 15 ಮಂದಿ ವಿದ್ಯಾರ್ಥಿಗಳ ಮಾನದಂಡವನ್ನು ಕಡ್ಡಾಯ ಮಾಡಿದ್ದಾರೆ. ಇದರಿಂದಾಗಿ ತುಳು ಭಾಷಾ ಅಧ್ಯಯನಕ್ಕೆ ತೀವ್ರ ತೊಡಕಾಗಿದೆ. ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು, ರಾಜ್ಯದಲ್ಲಿ ದ್ವಿತೀಯ ಅಧಿಕೃತ ಭಾಷೆಯಾಗಿಸಬೇಕು ಎನ್ನುವ ನೆಲೆಯಲ್ಲಿ ಬಲವಾದ ಆಗ್ರಹ ಕೇಳಿಬರುತ್ತಿರುವಾಗಲೇ ತುಳು ಭಾಷೆಯ ಉನ್ನತ ಶಿಕ್ಷಣದ ಅವಕಾಶವನ್ನು ಕಡಿತಗೊಳಿಸುವ ಸ್ಥಿತಿಯಾಗಿದೆ. ಈ ಬಗ್ಗೆ ಮಂಗಳೂರು ವಿವಿಯ ಕುಲಪತಿಗಳು ಹಾಗೂ ಸಿಂಡಿಕೇಟ್ ಸದಸ್ಯರ ಗಮನಕ್ಕೂ ತರಲಾಗಿದೆ ಎಂದರು.
ತುಳು ಎಂಎ ವಿದ್ಯಾರ್ಥಿಗಳ ಶುಲ್ಕವನ್ನು ಭರಿಸಲು ದಾನಿಗಳು ಮುಂದೆ ಬರಬೇಕು, ಭಾಷಾ ಅಧ್ಯಯನಕ್ಕೆ ತೊಡಕಾಗದಂತೆ ಶಾಸಕರು, ಸಂಸದರು ಕ್ರಮ ವಹಿಸಬೇಕು ಎಂಬ ಒತ್ತಾಯವನ್ನೂ ಮಾಡುತ್ತಿದ್ದೇವೆ. ಈತನಕ ತುಳು ಎಂಎ ಕಲಿಕೆಯಲ್ಲಿ 81 ಮಂದಿ ಸ್ನಾತಕ ಪದವಿ ಪಡೆದಿದ್ದಾರೆ. ಉನ್ನತ ಶಿಕ್ಷಣ ಸಾಧ್ಯವಾದರೆ, ಪಿಯುಸಿ, ಪದವಿಗಳಲ್ಲಿ ತುಳು ಕಲಿಕೆಯನ್ನು ಪ್ರಚುರಪಡಿಸಬಹುದು ಎನ್ನುವ ದೃಷ್ಟಿಯಿಂದ ತುಳು ಎಂಎ ಆರಂಭಿಸಲಾಗಿತ್ತು. ಆದರೆ, ಮಂಗಳೂರು ವಿವಿಯಲ್ಲಿ ಆರ್ಥಿಕ ಮುಗ್ಗಟ್ಟು ಎಂಬ ಕಾರಣಕ್ಕೆ ತುಳು ಭಾಷೆಯ ಎಂಎ ಕಲಿಕೆಗೆ ಅಡ್ಡಿ ತರುವುದು ಎಷ್ಟು ಸರಿ ಎಂದು ಸುಭಾಶ್ಚಂದ್ರ ಕಣ್ವತೀರ್ಥ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ತುಳು ಎಂಎ ಹಳೆ ವಿದ್ಯಾರ್ಥಿ ಸಂಘದ ಚಂದ್ರಹಾಸ ಕಣಂತೂರು, ಹರೀಶ್ ಅಮೈ, ಪ್ರಶಾಂತಿ ಶೆಟ್ಟಿ ಇರುವೈಲು ಉಪಸ್ಥಿತರಿದ್ದರು.
Tulu MA degree fee double is a big burden for students slams alumni student in Mangalore.
18-09-25 05:34 pm
Bangalore Correspondent
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
18-09-25 08:14 pm
HK News Desk
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
18-09-25 07:40 pm
Mangalore Correspondent
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
ಪೊಲೀಸರಿಂದ ಅಧಿಕಾರ ದುರುಪಯೋಗ, ದಬ್ಬಾಳಿಕೆ ; ಬೆನ್ನು...
18-09-25 04:31 pm
Mangalore, Traffic Police: ನಂಗೆ ಕೈಮಾಡಲು ನಿಂಗೇ...
18-09-25 02:42 pm
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm