Pili Nalike 2024, Mangalore: ಅ.12ರಂದು ಮಿಥುನ್ ರೈ ನೇತೃತ್ವದಲ್ಲಿ ಪಿಲಿ ನಲಿಕೆ ಸ್ಪರ್ಧೆ ; ಕ್ರಿಕೆಟಿಗ ಶಿವಂ ದುಬೆ, ಸುನಿಲ್ ಶೆಟ್ಟಿ, ರಿಷಬ್ ಶೆಟ್ಟಿ ಆಕರ್ಷಣೆ, 20 ಲಕ್ಷ ರೂ. ಬಹುಮಾನ ಮೊತ್ತ 

11-10-24 11:46 am       Mangalore Correspondent   ಕರಾವಳಿ

ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ನಡೆದುಬಂದ ಪಿಲಿನಲಿಕೆ ಸ್ಪರ್ಧೆ ಒಂಬತ್ತನೇ ಆವೃತ್ತಿ ಈ ಬಾರಿ ಅಕ್ಟೋಬರ್ 12 ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದ್ದು ಸ್ಪರ್ಧಾ ಕಣದಲ್ಲಿ ಹತ್ತು ಆಹ್ವಾನಿತ ಹುಲಿ ವೇಷ ತಂಡಗಳು ಭಾಗವಹಿಸಲಿವೆ.

ಮಂಗಳೂರು, ಅ.11: ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ನಡೆದುಬಂದ ಪಿಲಿನಲಿಕೆ ಸ್ಪರ್ಧೆ ಒಂಬತ್ತನೇ ಆವೃತ್ತಿ ಈ ಬಾರಿ ಅಕ್ಟೋಬರ್ 12 ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದ್ದು ಸ್ಪರ್ಧಾ ಕಣದಲ್ಲಿ ಹತ್ತು ಆಹ್ವಾನಿತ ಹುಲಿ ವೇಷ ತಂಡಗಳು ಭಾಗವಹಿಸಲಿವೆ. 

ಪಿಲಿನಲಿಕೆ -9 ರ ಪ್ರಥಮ ಸ್ಥಾನಿಗೆ ರೂ. 5 ಲಕ್ಷ, ದ್ವಿತೀಯ ಸ್ಥಾನಕ್ಕೆ ರೂ. ಮೂರು ಲಕ್ಷ ಹಾಗೂ ತೃತೀಯ ಸ್ಥಾನಕ್ಕೆ ರೂ. ಎರಡು ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಲಾಗುವುದು. ವೈಯಕ್ತಿಕ ವಿಭಾಗದಲ್ಲಿ ಮರಿ ಹುಲಿ, ಕಿರಿಯ ಹುಲಿ, ಉತ್ತಮ ಬಣ್ಣಗಾರಿಕೆ, ಉತ್ತಮ ತಾಸೆ, ಧರಣಿ ಮಂಡಲ, ಅಸ್ಥಿಮುಡಿ ಹಾರಿಸುವುದು ಇವುಗಳಿಗೆ ತಲಾ 50 ಸಾವಿರದ ಪ್ರಶಸ್ತಿ ಮೊತ್ತ ನೀಡಲಾಗುವುದು. ಮಾತ್ರವಲ್ಲ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೆ 50,000 ರೂ. ಪ್ರೋತ್ಸಾಹಕ ಧನವನ್ನಾಗಿ ನೀಡಲಾಗುವುದು ಎಂದು ಪಲಿನಲಿಕೆ ಪ್ರತಿಷ್ಠಾನ ಅಧ್ಯಕ್ಷ ಮಿಥುನ್ ರೈ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. 

ಕಾರ್ಯಕ್ರಮದಲ್ಲಿ ಈ ಬಾರಿ ರಾಷ್ಟ್ರ ಪ್ರಶಸ್ತಿ ಬಾಚಿಕೊಂಡ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಡಾಲಿ ಧನಂಜಯ್, ರವಿಶಂಕರ್, ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ, ಪುತ್ರ ಅಹಾನ್ ಶೆಟ್ಟಿ ಸೇರಿದಂತೆ ಕನ್ನಡ, ತುಳು, ಹಿಂದಿ ಭಾಷೆಯ ಚಲನಚಿತ್ರ ನಟ, ನಟಿಯರು ಆಗಮಿಸಲಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಸವ್ಯಸಾಚಿ ಶಿವಂ ದುಬೆ ವಿಶೇಷ ಆಕರ್ಷಣೆಯಾಗಿದ್ದಾರೆ. ವಿವಿಧ ಕ್ಷೇತ್ರದ ಸಾಧಕರು, ಗಣ್ಯರು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಲಿರುವರು ಎಂದವರು ತಿಳಿಸಿದ್ದಾರೆ. 

ಇದಲ್ಲದೆ, ಪಿಲಿನಲಿಕೆ ಸ್ಪರ್ಧೆಯಲ್ಲಿ ಆಯ್ಕೆಗೊಂಡ ತಂಡದ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿಯ ಉನ್ನತ ಶಿಕ್ಷಣಕ್ಕಾಗಿ ಒಂದು ಲಕ್ಷದ ವರೆಗೆ ವಿದ್ಯಾರ್ಥಿ ವೇತನ ನೀಡಲು ಉದ್ದೇಶಿಸಲಾಗಿದೆ. ಇದರ ಮೂಲಕ ಹುಲಿ ಕುಣಿತದ ಮೂಲಕ ಒಬ್ಬನನ್ನು ಉನ್ನತ ಶಿಕ್ಷಣ ಪಡೆಯುವಂತೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಮಿಥುನ್ ರೈ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಶಿವಚರಣ್ ಶೆಟ್ಟಿ, ನವೀನ್ ಶೆಟ್ಟಿ ಮತ್ತಿತರರು ಇದ್ದರು.

The ninth season of the Pili Nalike competition, organized by Pili Nalike Prathishtana in collaboration with Namma TV, will be held on Saturday at the Karavali Utsav Maidan. Eleven top teams from across the district will compete, with prizes worth Rs 18 lakh. The winning team will receive Rs 5 lakh and the opportunity to perform in Bahrain. Each team will be given an honorarium of Rs 50,000, and there will be six individual awards.