ದ.ಕ. ವಿಧಾನ ಪರಿಷತ್ ಉಪ ಚುನಾವಣೆ ; ಉಭಯ ಜಿಲ್ಲೆಗಳಿಗೆ ಕೆಪಿಸಿಸಿಯಿಂದ ಚುನಾವಣಾ ಉಸ್ತುವಾರಿಗಳ ನಿಯೋಜನೆ 

11-10-24 09:54 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕಾರ್ಯ ನಿರ್ವಹಿಸಲು, ಪ್ರಚಾರ ಕಾರ್ಯಗಳನ್ನು ಯಶಸ್ವಿಯಾಗಿ ನೋಡಿಕೊಳ್ಳಲು ಮತ್ತು ಕೆಪಿಸಿಸಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಉಭಯ ಜಿಲ್ಲೆಗಳಿಗೆ ಚುನಾವಣಾ ಉಸ್ತುವಾರಿಗಳನ್ನು ನಿಯೋಜಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ.

ಮಂಗಳೂರು, ಅ.11 : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕಾರ್ಯ ನಿರ್ವಹಿಸಲು, ಪ್ರಚಾರ ಕಾರ್ಯಗಳನ್ನು ಯಶಸ್ವಿಯಾಗಿ ನೋಡಿಕೊಳ್ಳಲು ಮತ್ತು ಕೆಪಿಸಿಸಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಉಭಯ ಜಿಲ್ಲೆಗಳಿಗೆ ಚುನಾವಣಾ ಉಸ್ತುವಾರಿಗಳನ್ನು ನಿಯೋಜಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ.

ಉಡುಪಿ-ದಕ್ಷಿಣ ಕನ್ನಡ ವಿಧಾನ ಪರಿಷತ್ ಉಪ ಚುನಾವಣೆಯ ಉಸ್ತುವಾರಿಗಳಾಗಿ ಕೆಪಿಸಿಸಿಯ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಯೋಜಿಸಲಾಗಿದೆ. 

Guv's permission to prosecute Karnataka CM politically motivated: KPCC  working president Manjunath Bhandari

Dinesh Gundu Rao district-in-charge minister of Dakshina Kannada, Laxmi  Hebbalkar for Udupi | Dinesh Gundu Rao, Dinesh Gundu Rao: ಡಿಕೆಶಿಗೆ ಬೆಂಗಳೂರು  ಹೊಣೆ ; ದ. ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿಗೆ ...

ದ.ಕ. ಜಿಲ್ಲಾ ಉಸ್ತುವಾರಿಗಳಾಗಿ ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಜೆ.ಆರ್.ಲೋಬೊ, ವಿಧಾನಸಭಾ ಅಭ್ಯರ್ಥಿಗಳಾದ ಮಿಥುನ್ ರೈ, ರಕ್ಷಿತ್ ಶಿವರಾಂ,  ಇನಾಯತ್ ಅಲಿ, ಜಿ.ಕೃಷ್ಣಪ್ಪ, ಉಸ್ತುವಾರಿ ಪದಾಧಿಕಾರಿಗಳಾಗಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಸಿ.ವೇಣುಗೋಪಾಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಹೆಗ್ಗಡೆ, ಜಿ.ಎ.ಬಾವ, ನಿವೇದಿತ್ ಆಳ್ವ, ಲಲಿತ್ ರಾಘವ್, ಜುಲ್ಫಿಕರ್ ಅಹಮದ್ ಖಾನ್, ಮಟಿಲ್ಡ ಡಿಸೋಜ, ಪ್ರವೀಣ್ ಪೀಟರ್ ಅವರನ್ನು ನಿಯೋಜಿಸಲಾಗಿದೆ.

ಉಡುಪಿ ಜಿಲ್ಲಾ ಉಸ್ತುವಾರಿಗಳಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ, ಎಂಎಲ್ಸಿ-ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಸುಕುಮಾರ ಶೆಟ್ಟಿ, ವಿಧಾನಸಭಾ ಅಭ್ಯರ್ಥಿಗಳಾದ ಎಂ.ದಿನೇಶ್ ಹೆಗ್ಡೆ, ಪ್ರಸಾದ್ ರಾಜ್ ಕಾಂಚನ್, ಉದಯ ಶೆಟ್ಟಿ, ಉಸ್ತುವಾರಿ ಪದಾಧಿಕಾರಿಗಳಾಗಿ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ  ಮಂಜುನಾಥ ಗೌಡ, ಇನಾಯತ್ ಅಲಿ, ಮಿಥುನ್ ರೈ, ರಕ್ಷಿತ್ ಶಿವರಾಂ, ಲಾವಣ್ಯ ಬಳ್ಳಾಲ್ ಅವರನ್ನು ನಿಯೋಜಿಸಲಾಗಿದೆ.

ಸಂಚಾಲಕರಾಗಿ ದ.ಕ.ಜಿಲ್ಲಾ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ್, ಕೆಪಿಸಿಸಿ ಕಾರ್ಯಾಧ್ಯಕ್ಷರ ಸಂಯೋಜಕರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಬಾಲರಾಜ್ ಅವರು ನೇಮಕಗೊಂಡಿದ್ದಾರೆ.

By elections, incharge election committee ordered to inspect vidhan parishad elections in both DK and Udupi.