ಬ್ರೇಕಿಂಗ್ ನ್ಯೂಸ್
14-10-24 01:54 pm Mangalore Correspondent ಕರಾವಳಿ
ಮಂಗಳೂರು, ಅ.14: ಎರಡು ದಿನಗಳ ಹಿಂದೆ ಮಂಗಳೂರಿನಲ್ಲಿ ಖಾಸಗಿ ಬಸ್ ಸಿಬಂದಿ ಪರಸ್ಪರ ಹೊಡೆದಾಟ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಘಟನೆ ಸಂಬಂಧಿಸಿ ಇದೀಗ ಎರಡೂ ಬಸ್ಸಿನ ಸಿಬಂದಿ ಆಸ್ಪತ್ರೆಗೆ ದಾಖಲಾಗಿ ದೂರು- ಪ್ರತಿದೂರು ನೀಡಿದ್ದು ಕದ್ರಿ ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ. ಓವರ್ ಟೇಕ್ ಮಾಡಿದ್ದಕ್ಕೆ ಹಲ್ಲೆ ಎಂದು ಒಂದು ತಂಡ ದೂರಿದ್ದರೆ, ಮತ್ತೊಂದರಲ್ಲಿ ಉಗಿದು ಅವಾಚ್ಯ ನಿಂದನೆ ಮಾಡಿದ್ದಕ್ಕಾಗಿ ಹಲ್ಲೆಯೆಂದು ದೂರಿತ್ತಿದ್ದಾರೆ.
ವಿಟ್ಲ – ಮಂಗಳೂರು ರೂಟಿನಲ್ಲಿ ಓಡಾಡುವ ಸೆಲಿನಾ ಬಸ್ಸಿನ ಸಿಬಂದಿ ಮತ್ತು ಮತ್ತೊಂದು ಖಾಸಗಿ ಬಸ್ ಧರಿತ್ರಿ ಬಸ್ ಸಿಬಂದಿ ಮಂಗಳೂರಿನ ಕಂಕನಾಡಿ ವೃತ್ತದ ಬಳಿ ಬಸ್ಸಿನ ಒಳಗಡೆಯೇ ಹೊಡೆದಾಡಿದ್ದರು. ಅ.10ರಂದು ಘಟನೆ ನಡೆದಿದ್ದು, ಒಂದು ಬಸ್ಸಿನ ಸಿಬಂದಿ ಉಗಿದ ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಗಿತ್ತು ಎಂದು ಹೇಳಲಾಗಿತ್ತು. ಇದೀಗ ಸೆಲಿನಾ ಬಸ್ಸಿನ ಚಾಲಕ ಸಂದೀಪ್ ನೀಡಿದ ದೂರಿನಲ್ಲಿ ಅ.10ರಂದು ವಿಟ್ಲದಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ತೆರಳಿದ್ದ ಬಸ್ ಮರಳುತ್ತಿದ್ದಾಗ ಕಂಕನಾಡಿ ಸಿಗ್ನಲ್ ಬಳಿ ಧರಿತ್ರಿ ಬಸ್ಸಿನ ಚಾಲಕ ಸುರೇಶ್ ಮತ್ತು ನಿರ್ವಾಹಕ ರಾಕೇಶ್ ಬಸ್ಸನ್ನು ಅಡ್ಡಹಾಕಿದ್ದು, ಬಳಿಕ ತನಗೆ ಮತ್ತು ನಿರ್ವಾಹಕ ಭುವನೇಶ್ವರ್ ಮೇಲೆ ಹಲ್ಲೆ ನಡೆಸಿದ್ದಾರೆಂದು ತಿಳಿಸಿದ್ದಾರೆ. ಚಾಲಕ ಸಂದೀಪ್ ಆಸ್ಪತ್ರೆಗೆ ದಾಖಲಾಗಿದ್ದು, ಬಿಸಿ ರೋಡ್ ಬಳಿ ಬಸ್ಸನ್ನು ಓವರ್ ಟೇಕ್ ಮಾಡಿದ್ದ ಕಾರಣಕ್ಕೆ ಹಲ್ಲೆ ನಡೆಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರಿತ್ರಿ ಬಸ್ಸಿನ ಚಾಲಕ ಸುರೇಶ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪ್ರತಿ ದೂರು ನೀಡಿದ್ದಾರೆ. ಸೆಲಿನಾ ಬಸ್ಸಿನ ನಿರ್ವಾಹಕ ಭುವನೇಶ್ವರ್ ಜ್ಯೋತಿ ವೃತ್ತದ ಬಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾತನಾಡಿದ್ದಾನೆ, ಉಗಿದು ನಿಂದಿಸಿದ್ದಾನೆ. ಬಳಿಕ ಕಂಕನಾಡಿ ಸಿಗ್ನಲ್ ಬಳಿ ತಮ್ಮ ಬಸ್ಸನ್ನು ಅಡ್ಡಹಾಕಿ ಗಾಡಿ ತೊಳೆಯುವ ಬ್ರಶ್ ನಲ್ಲಿ ಹಲ್ಲೆ ನಡೆಸಿದ್ದಾಗಿ ದೂರಿದ್ದಾರೆ. ಎರಡು ದೂರನ್ನು ಗಮನಿಸಿದರೆ ಕ್ಷುಲ್ಲಕ ವಿಚಾರದಲ್ಲಿ ಬಸ್ ಸಿಬಂದಿ ಪ್ರಯಾಣಿಕರ ಎದುರಲ್ಲೇ ಹೊಡೆದಾಡಿದ್ದು ಕಂಡುಬರುತ್ತದೆ. ವಿಡಿಯೋ ಕೊನೆಯಲ್ಲಿ ಭುವನೇಶ್ವರ್ ಪ್ರಯಾಣಿಕರನ್ನು ಇಳಿಯಲು ಹೇಳಿ ಬಸ್ಸನ್ನು ಪೊಲೀಸ್ ಠಾಣೆಗೆ ಒಯ್ಯುವುದಾಗಿ ಹೇಳುವುದು ದಾಖಲಾಗಿದೆ.
ಬಸ್ ಸಿಬಂದಿಯ ಹೊಡೆದಾಟದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರ ಎದುರಲ್ಲೇ ಬಸ್ಸನ್ನು ನಿಲ್ಲಿಸಿ ಬೀದಿ ಕಾಳಗ ನಡೆಸಿರುವುದನ್ನು ಖಂಡಿಸಿದ್ದಲ್ಲದೆ ಬಸ್ ಸಿಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ನಿಜಕ್ಕಾದರೆ ಈ ಘಟನೆ ಬಗ್ಗೆ ವಿಡಿಯೋ ಆಧರಿಸಿ ಪೊಲೀಸರೇ ಕೇಸು ದಾಖಲಿಸಿ ಕ್ರಮ ಜರುಗಿಸಬೇಕಿತ್ತು. ಇದೀಗ ಎರಡೂ ಬಸ್ಸಿನ ಸಿಬಂದಿಯೇ ಪೊಲೀಸ್ ದೂರು ನೀಡಿದ್ದು ಪರಸ್ಪರ ಆರೋಪ- ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.
Mangalore Private bus drivers fight in broad daylight, police take no action even after counter complaint. The reckless behaviour of private bus drivers in Dakshina Kannada and Udupi districts is not a new phenomenon. Hundreds of private buses have long been operating in blatant disregard of transportation rules, with little to no action from the authorities, despite their awareness of the issue.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
27-07-25 03:26 pm
Bangalore Correspondent
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm