ಬ್ರೇಕಿಂಗ್ ನ್ಯೂಸ್
14-10-24 03:38 pm Mangalore Correspondent ಕರಾವಳಿ
ಮಂಗಳೂರು, ಅ.14: ಮಂಗಳೂರು ದಸರಾ ಎಂದೇ ಹೆಸರಾಗಿರುವ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ 10 ದಿನಗಳಿಂದ ಪೂಜೆಗೊಂಡ ನವದುರ್ಗೆಯರು, ಶಾರದಾಂಬೆಯ ವಿಸರ್ಜನಾ ಮೆರವಣಿಗೆ ಭಾನುವಾರ ರಾತ್ರಿ ಅದ್ದೂರಿಯಾಗಿತ್ತು. ತುಂತುರು ಮಳೆಯ ನಡುವೆಯೂ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದು ವಿಶೇಷವಾಗಿತ್ತು.
ಆರು ಗಂಟೆ ವೇಳೆಗೆ ಕುದ್ರೋಳಿ ಕ್ಷೇತ್ರದಿಂದ ಮೆರವಣಿಗೆ ಹೊರಟಿದ್ದು, ಮಣ್ಣಗುಡ್ಡ –ಲೇಡಿಹಿಲ್ ದಾರಿಯಾಗಿ ಲಾಲ್ ಬಾಗ್ ವೃತ್ತಕ್ಕೆ ಬರುವಾಗ ರಾತ್ರಿ ಹತ್ತು ಗಂಟೆ ಆಗಿತ್ತು. ಈ ವೇಳೆಗೆ ಲಾಲ್ ಬಾಗ್ ವೃತ್ತ, ಬಳ್ಳಾಲ್ ಬಾಗ್ ವೃತ್ತ ಫುಲ್ ಜಾಮ್ ಆಗಿದ್ದು, ಅಷ್ಟೂ ಜಾಗದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಎಲ್ಲೆಲ್ಲಿಂದ ಬಂದು ಸೇರಿದ್ದ ಯುವಕ- ಯುವತಿಯರು, ಬೇರೆ ಬೇರೆ ಕಡೆಗಳಿಂದ ಕುಟುಂಬಸ್ಥರೊಂದಿಗೆ ಬಂದಿದ್ದ ಜನರು, ಹಿಂದಿ, ತೆಲುಗು ಭಾಷಿಗ ಬೇರೆ ಬೇರೆ ಕಡೆಯ ವಿದ್ಯಾರ್ಥಿಗಳು, ಕನ್ನಡ ಭಾಷಿಗ ಕಾರ್ಮಿಕ ಕುಟುಂಬಗಳು, ಹೀಗೆ ನಾನಾ ಮಾದರಿಯ ಜನಗಳು ಒಂದೆಡೆ ರಾಶಿ ಬಿದ್ದಂತಿದ್ದರು. ಜನ ಅತ್ತಿತ್ತ ಚಲಿಸುವುದಕ್ಕೂ ಸಾಧ್ಯವಾಗದಷ್ಟು ಜಾಮ್ ಟೈಟ್ ಆಗಿತ್ತು. ರಾತ್ರಿ 10ರಿಂದ 1 ಗಂಟೆ ವರೆಗೆ ಲಾಲ್ ಬಾಗ್- ಬಳ್ಳಾಲ್ ಬಾಗ್ ವರೆಗಿನ ಒಂದು ಕಿಮೀ ಉದ್ದಕ್ಕೆ ಜನರು ಕಿಕ್ಕಿರಿದು ತುಂಬಿದ್ದರು.
ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿದ ಯುವಕರು
ಶಾರದಾ ವಿಗ್ರಹದ ಬೆನ್ನಲ್ಲೇ ಕಾಳಿಚರಣ್ ಫ್ರೆಂಡ್ಸ್ ಬಳಗದ ಹುಲಿವೇಷ ಮತ್ತು ಇತರ ಮೂರು ಟ್ರಕ್ ಇತ್ತು. ಆನಂತರದಲ್ಲಿ ಬರ್ಕೆ ಫ್ರೆಂಡ್ಸ್ ತಂಡದ ನಾಲ್ಕು ಟ್ರಕ್ ಇತ್ತು. ಕಾಳಿಚರಣ್ ತಂಡದಲ್ಲಿ ಹಡಗಿನಲ್ಲಿ ಬರುವ ಕಡಲ್ಗಳ್ಳರ ಮಾದರಿಯ ಸ್ತಬ್ಧಚಿತ್ರ, ಬರ್ಕೆ ತಂಡದ ಜಗ್ಗಿ ವಾಸುದೇವ್ ಮತ್ತು ಇಶಾ ಫೌಂಡೇಶನ್ನಿನ ಶಿವನ ಪ್ರತಿಮೆಯ ಸ್ತಬ್ಧಚಿತ್ರ ಆಕರ್ಷಕವಾಗಿತ್ತು. ಇದರ ಬೆನ್ನಲ್ಲೇ ಬರ್ಕೆ ತಂಡದಿಂದ ಎದೆ ಸಿಡಿಯುವಂತಹ ಡಿಜೆ ಸದ್ದಿನೊಂದಿಗೆ ಮ್ಯೂಸಿಕ್ ಹಾಕಿದ್ದ ಟ್ರಕ್ ಬಂದಿತ್ತು. ಅದರ ಹಿಂದೆ ಯುವಕರು ಹುಚ್ಚೆದ್ದವರ ರೀತಿ ಕುಣಿಯುತ್ತಿದ್ದರು. ಡಿಜೆ, ಬ್ಯಾಂಡ್ ಹಾಕಿ ಕುಣಿಯುವುದಕ್ಕೆ ಅವಕಾಶ ಇಲ್ಲ ಎಂದಿದ್ದರೂ, ಕಿವಿಗಪ್ಪಳಿಸುವ ವಿಚಿತ್ರ ಮ್ಯೂಸಿಕ್ ನೊಂದಿಗೆ ಕುಣಿತ ಮತ್ತು ಯುವಕರ ವರ್ತನೆಗಳು ಸಭ್ಯರು ನಾಚಿಕೆಪಡುವಂತಿತ್ತು.
ಟ್ಯಾಬ್ಲೋ ವಿಳಂಬ, ಹಿಂದೆ ಉಳಿದ ಏಲಿಯನ್ಸ್ !
ಬಿರುವೆರ್ ಕುಡ್ಲ, ಶಿವ ಫ್ರೆಂಡ್ಸ್, ಬಳ್ಲಾಲ್ ಬಾಗ್ ಫ್ರೆಂಡ್ಸ್ ಹೀಗೆ ಹಲವು ತಂಡಗಳ ಹುಲಿ ವೇಷಗಳ ಟ್ಯಾಬ್ಲೋಗಳಿದ್ದವು. ಆದರೆ ನವದುರ್ಗೆಯರ ವಿಗ್ರಹಗಳು ಮೊದಲಿಗೆ ಸಾಗಿದ್ದರಿಂದ ಆಕರ್ಷಕ ಟ್ಯಾಬ್ಲೋಗಳು ಹಿಂದೆ ಉಳಿದಿದ್ದವು. ರಾತ್ರಿ 12 ಗಂಟೆ ಕಳೆದರೂ ಟ್ಯಾಬ್ಲೋಗಳು ಲಾಲ್ ಬಾಗ್ ತಲುಪಲಿಲ್ಲ. ಹೆಚ್ಚಿನ ಜನರು ಅಷ್ಟೊತ್ತಿಗೆ ನಿರ್ಗಮಿಸತೊಡಗಿದ್ದರು. ಏಲಿಯನ್ಸ್, ಅನಾರ್ಕಲಿ, ಕೋಳಿ ಮಾದರಿಯ ಚಿತ್ರ, ಅಸ್ಥಿಪಂಜರ ರೀತಿಯ ಟ್ಯಾಬ್ಲೋ, ದೇವದಾಸ್ ಕಾಪಿಕಾಡ್, ಚಾರ್ಲಿ ಚಾಪ್ಲಿನ್ ಮಾದರಿಯ ಬೃಹತ್ ಚಿತ್ರಗಳು ಹೆಚ್ಚಿನ ಜನರ ವೀಕ್ಷಣೆಗೆ ಸಿಗಲಿಲ್ಲ. ಅವೆಲ್ಲ ಲಾಲ್ ಬಾಗ್ ತಲುಪುವಾಗ ರಾತ್ರಿ ಎರಡು ಗಂಟೆ ಆಗಿತ್ತು. ಮೊದಲ ಸ್ವಾತಂತ್ರ್ಯ ಹೋರಾಟಗಾರ ರಾಮೇಗೌಡರ ಕುದುರೆ ಸವಾರಿಯ ಚಿತ್ರಣವೂ ಹಿಂದೆ ಉಳಿದುಕೊಂಡಿತ್ತು. ಶಾರದೆಯ ಜಲಸ್ತಂಭನ ಆಗುವ ರೀತಿಯ ಪದುವಾ ಫ್ರೆಂಡ್ಸ್ ವತಿಯಿಂದ ಮಾಡಿದ್ದ ಟ್ಯಾಬ್ಲೋ ಕೂಡ ಆಕರ್ಷಕವಾಗಿತ್ತು. ಲಾಲ್ ಬಾಗ್ ವೃತ್ತದಲ್ಲಿ ಆರ್ಕೆಸ್ಟ್ರಾ ಏರ್ಪಡಿಸಿದ್ದರಿಂದ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ನಡುವೆ, ಇಬ್ಬರು ವೇಷಧಾರಿಗಳು ವಿಭಿನ್ನ ಗರುಡನ ಮಾದರಿಯ ವೇಷ ತೊಟ್ಟು ದೇಣಿಗೆ ಸಂಗ್ರಹ ಮಾಡುತ್ತಿದ್ದರು. ಮಕ್ಕಳು, ಯುವತಿಯರು ಆ ವೇಷಧಾರಿಗಳ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ಟ್ರಾಫಿಕ್ಕಲ್ಲಿ ಪರದಾಡಿದ ವಾಹನ ಸವಾರರು
ಒಂದೆಡೆ ತುಂತುರು ಮಳೆ, ಮತ್ತೊಂದೆಡೆ ಅದರ ನಡುವೆಯೂ ಜನರು ದಾಂಗುಡಿ ಇಡುತ್ತಿದ್ದರು. ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ, ಸಿಕ್ಕಸಿಕ್ಕಲ್ಲಿ ನಿಲ್ಲಿಸಿದ್ದ ಜನರು ನಡೆಯುತ್ತಲೇ ಸಾಗಿದ್ದರು. ಲಾಲ್ ಬಾಗ್, ಬಳ್ಳಾಲ್ ಬಾಗ್, ಪಿವಿಎಸ್ ವೃತ್ತದ ವರೆಗಿನ ಆಸುಪಾಸಿನಲ್ಲಿ ಎಲ್ಲ ಕಡೆಯೂ ವಾಹನಗಳೆಲ್ಲ ಸೇರಿದ್ದವು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ದರಿಂದ, ರಾತ್ರಿಯಿಡೀ ಕೆಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಕೆಲವರು ತಮ್ಮ ವಾಹನಗಳನ್ನು ತೆಗೆಯಲಾಗದೆ ಪ್ರಯಾಸಪಟ್ಟರೆ, ಆಸುಪಾಸಿನ ನಿವಾಸಿಗಳು ತಮ್ಮ ಕಾರಿನಲ್ಲಿ ಬೇರೆ ಕಡೆಗೆ ಹೋಗಿದ್ದವರು ಮರಳಿ ಮನೆ ಸೇರಲಾಗದೆ ಕಷ್ಟ ಪಡುವಂತಾಗಿತ್ತು. ರಾತ್ರಿ ವೇಳೆಯಾಗಿದ್ದರಿಂದ ಪೊಲೀಸರೂ ಹೆಚ್ಚು ಇರಲಿಲ್ಲ. ಜನರೇ ವಾಹನಗಳ ಸಾಗಾಟಕ್ಕೆ ಅನುವು ಮಾಡಿಕೊಂಡು ಬೆಳಗ್ಗಿನ ವರೆಗೂ ಪ್ರಯಾಸಪಟ್ಟರು. ಕೆಲವು ಕಡೆ ವಾಹನಗಳಲ್ಲಿ ಕುಳಿತು ಯುವಕರು ಮದ್ಯಪಾನ ಮಾಡುತ್ತಿದ್ದರು. ರಾತ್ರಿ ಒಂದು ಗಂಟೆ ಕಳೆದರೂ ಕೆಎಸ್ಸಾರ್ಟಿಸಿ ಆಸುಪಾಸಿನ ಬಾರ್, ವೈನ್ ಶಾಪ್ಗಳು ತೆರೆದಿದ್ದವು.
ಭಾನುವಾರ ಆಗಿದ್ದರಿಂದಲೋ ಏನೋ, ಈ ಹಿಂದೆಂದಿಗಿಂತ ಈ ಬಾರಿ ಹೆಚ್ಚು ಜನರು ಸೇರಿದ ರೀತಿ ಕಂಡಿತ್ತು. ಲೇಡಿಹಿಲ್ ನಿಂದ ತೊಡಗಿ ಪಿವಿಎಸ್ ವೃತ್ತದ ವರೆಗಿನ ಎರಡು ಕಿಮೀ ಉದ್ದಕ್ಕೆ ಸಾಧಾರಣ 2-3 ಲಕ್ಷ ಜನರು ಸೇರಿದ್ದಿರಬಹುದು. ಕೆಲವರು ಕಾರು ಮಾಡಿಕೊಂಡು ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮಂಜೇಶ್ವರ, ಕುಂಬಳೆ ಹೀಗೆ ದೂರದ ಊರುಗಳಿಂದ ಬಂದವರೂ ಇದ್ದರು. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರುವುದು ಮತ್ತು ಯಾವುದೇ ತೊಂದರೆ ಇಲ್ಲದೆ ಸರಿರಾತ್ರಿಯಲ್ಲೇ ನಿರ್ಗಮಿಸುವುದು ಕೂಡ ವಿಶೇಷವೇ ಸರಿ.
ಶಾರದಾ ಮಾತೆಗೆ ಭಾವುಕ ಬೀಳ್ಕೊಡುಗೆ
ಇತ್ತ ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳನ್ನು ಮರಳಿ ಕುದ್ರೋಳಿ ಕ್ಷೇತ್ರದ ಪುಷ್ಕರಣಿ ಕೆರೆಗೆ ತಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಜಲಸ್ತಂಭನ ಮಾಡಲಾಯಿತು. ರಾತ್ರಿಯಿಡೀ ಜನ ಸಾಗರದಂತೆ ಹರಿದು ಬಂದಿದ್ದರೂ ಬೆಳಗ್ಗಿನ ಹೊತ್ತಿಗೆ ಕುದ್ರೋಳಿ ಪರಿಸರದಲ್ಲಿ ಜನರೇ ಇರಲಿಲ್ಲ. ಅಲ್ಲಿ ಅಗತ್ಯ ಸಿಬಂದಿಗಳು, ಭಕ್ತಿ ಭಾವದಿಂದ ಹತ್ತು ದಿನಗಳ ಕಾಲ ದೇವಸ್ಥಾನದಲ್ಲಿ ದುಡಿದಿದ್ದವರು, ಒಂದಷ್ಟು ಸ್ಥಳೀಯರು ಮಾತ್ರ ಇದ್ದರು. ಕೊನೆಗೆ ಶಾರದೆಯನ್ನು ನಿಧಾನಕ್ಕೆ ನೀರಿಗಿಳಿಸುತ್ತಲೇ ಹತ್ತು ದಿನಗಳ ಕಾಲ ತಾಯ ಮೊಗವನ್ನು ಕಣ್ತುಂಬಿಕೊಂಡವರ ಅಶ್ರುಗಳಲ್ಲಿ ನೀರು ಜಿನುಗಿತ್ತು.
The grand finale of Mangalore Kudroli Dasara 2024 throngs with vibrant procession, drawing thousands of devotees to the streets. The final day festivities have kicked off with great pomp, as the crowd immerses itself in the culmination of the Dussehra celebrations. Photo gallery of Dasara Mangalore.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
27-07-25 03:26 pm
Bangalore Correspondent
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm