ಬ್ರೇಕಿಂಗ್ ನ್ಯೂಸ್
15-10-24 09:17 pm Mangalore Correspondent ಕರಾವಳಿ
ಉಳ್ಳಾಲ, ಅ.15: ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಸರಕಾರದಲ್ಲಿ ಹಿಂದೂ ದೈವ, ದೇವರುಗಳನ್ನ ತುಚ್ಚವಾಗಿ ನಿಂದಿಸಿದವರಿಗೆ ಪುರಸ್ಕಾರ ನೀಡಲಾಗುತ್ತಿದೆ. ಆದರೆ ಹಿಂದೂ ಧರ್ಮದ ಬಗ್ಗೆ ಜಾಗೃತಿಯ ಭಾಷಣ ಮಾಡಿದವರ ಮೇಲೆ ಕೇಸುಗಳನ್ನ ಹಾಕಿ ದಮನಿಸುವ ಕಾರ್ಯ ನಡೆಯುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಆಕ್ರೋಶ ವ್ಯಕ್ತಪಡಿಸಿದರು.
ಸಾಹಿತಿ ಡಾ.ಅರುಣ್ ಉಳ್ಳಾಲ್ ಮಾಡಿದ ಹಿಂದೂ ಧರ್ಮ ಜಾಗೃತಿಯ ಭಾಷಣದ ವಿರುದ್ಧ ದಾಖಲಾಗಿರುವ ಸುಮೊಟೋ ಕೇಸನ್ನು ಹಿಂಪಡೆಯಲು ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಉಳ್ಳಾಲ ಪ್ರಖಂಡ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಮಂಗಳವಾರ ಸಂಜೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಉಪನ್ಯಾಸಕರಾಗಿರುವ ಅರುಣ್ ಉಳ್ಳಾಲ್ ಅವರು ಹಿಂದೂ ಸಮಾಜದ ಮಕ್ಕಳಿಗೆ ಧರ್ಮ ಶಿಕ್ಷಣ ನೀಡುತ್ತಿರುವುದೇ ಮಹಾಪರಾಧವಾಗಿದೆ. ಮೂರು ತಿಂಗಳ ಹಿಂದೆಯೇ ಅರುಣ್ ಅವರು ಕೆಲಸ ಮಾಡುತ್ತಿದ್ದ ಮಂಗಳೂರಿನ ಕ್ರೈಸ್ತ ಧರ್ಮೀಯರ ಕಾಲೇಜು ಆಡಳಿತವು ಕೆಂಗಣ್ಣು ಬೀರಿದ್ದು ನಿಮಗೆ ಇನ್ನು ಇಲ್ಲಿ ಜಾಗ ಇಲ್ಲ ಅನ್ತಾರೆ. ಅರುಣ್ ಅವರೊಬ್ಬರಲ್ಲದೆ ಹನ್ನೆರಡು ಹಿಂದೂ ಶಿಕ್ಷಕರನ್ನ ಅಲ್ಲಿ ಕೆಲಸದಿಂದ ತೆಗೆದಿದ್ದಾರೆ. ಇದು ಇವರ ಜಾತ್ಯತೀತತೆಯೇ ಎಂದು ಪ್ರಶ್ನಿಸಿದ್ದಾರೆ.
ನವ ದಂಪತಿಗಳ ಸಮಾವೇಶದಲ್ಲಿ ನವ ವಿವಾಹಿತರಾಗಿ ಭಾಗವಹಿಸಿದ್ದ ಅರುಣ್ ಅವರು ಹಿಂದೂಗಳು ಹಿಂದೂಗಳ ಸಭಾಂಗಣಗಳಲ್ಲೇ ಮದುವೆಯಾಗಿ ಎಂದು ಸಮಾಜಕ್ಕೆ ಕಿವಿಮಾತು ಹೇಳಿದ್ದಾರೆಯೇ ಹೊರತು ಯಾವುದೇ ಧರ್ಮವನ್ನ ಅಣಕಿಸಿ ನಿಂದಿಸಿಲ್ಲ. ಧರ್ಮದ ಬಗ್ಗೆ ಜಾಗೃತಿ ಮಾತುಗಳನ್ನಾಡಲೂ ಇಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲವೇ..? ನಮ್ಮ ದೈವ, ದೇವರನ್ನ ಹೀಯಾಳಿಸಿದ ಜೆರೋಸಾ ಶಾಲಾ ಶಿಕ್ಷಕಿಯ ವಿರುದ್ಧ ಯಾವ ಕಠಿಣ ಕಾನೂನು ಕ್ರಮ ಜರಗಿಸಿದ್ದಾರೆ. ಸಿದ್ಧರಾಮಯ್ಯ ಸರಕಾರವು ಹುಬ್ಬಳ್ಳಿ ಕೇಸನ್ನ ಹಿಂತೆಗೆದಿದೆ. ಹಿಂದೂಗಳು ಇನ್ನೂ ಸುಮ್ಮನಿದ್ದರೆ ಡಿಜೆ ಹಳ್ಳಿ, ಕೆಜೆ ಹಳ್ಳಿಯ ಕೇಸನ್ನೂ ಹಿಂಪಡೆಯುತ್ತಾರೆ. ಯಾವುದೇ ತಪ್ಪು ಮಾಡದ ವಿದ್ಯಾವಂತ ಸಾಹಿತಿ ಅರುಣ್ ಉಳ್ಳಾಲ್ ಮೇಲಿನ ಕೇಸು ಖಂಡನೀಯ. ಉದ್ಯೋಗ ಭದ್ರತೆಯ ಬಗ್ಗೆಯೂ ವಿ.ಹಿಂ.ಪ ಅರುಣ್ ಅವರಿಗೆ ವಿಶ್ವಾಸ ನೀಡಿದೆ ಎಂದರು.
ಬಜರಂಗದಳದ ಉಳ್ಳಾಲ ನಗರ, ಪ್ರಖಂಡ ಸಂಯೋಜಕರಾದ ಅರ್ಜುನ್ ಮಾಡೂರು ಮಾತನಾಡಿ ಜೆರೊಝಾ ಶಾಲೆಯ ಘಟನೆ ಹಿಂದೂಗಳಿಗೆ ಪಾಠವಾಗಬೇಕಿತ್ತು. ಹಿಂದೂಗಳ ದೈವ, ದೇವರನ್ನ ನಿಂದಿಸಿ ನಮ್ಮ ಭಾವನೆಗಳನ್ನ ಘಾಸಿಗೊಳಿಸಿದ್ದ ಶಿಕ್ಷಕಿ ವಿರುದ್ಧ ಹಿಂದೂ ಸಮಾಜವು ಪ್ರತಿಭಟಿಸಿದರೂ ರಾಜ್ಯದ ಕಾಂಗ್ರೆಸ್ ಸರಕಾರವು ಆಕೆಯ ವಿರುದ್ಧ ಸುಮೊಟೊ ಕೇಸ್ ದಾಖಲಿಸಿಲ್ಲ. ಬದಲಾಗಿ ಪ್ರತಿಭಟನಾಕಾರರ ವಿರುದ್ದವೇ ಕೇಸ್ ದಾಖಲಿಸುವ ಹುನ್ನಾರ ಮಾಡಿತ್ತು. ಭಾರತ ಮಾತೆಗೆ ಜೈಕಾರ ಹಾಕಿದವರ ಮೇಲೆ ಕೇಸ್ ಹಾಕುವ ಸರಕಾರ ಇದ್ದರೆ ಅದು ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ. ಪೊಲೀಸ್ ಠಾಣೆಗೆ ಕಲ್ಲೆಸೆದವರ ಮೇಲೆ ಕೇಸಿಲ್ಲ. ಮಂಗಳೂರಿನ ಬೀದಿಗಳಲ್ಲಿ ನಮಾಝ್ ಮಾಡಿದವರ ಮೇಲೆ ಸುಮೊಟೊ ಕೇಸ್ ಮಾಡಿದ ಪೊಲೀಸ್ ಅಧಿಕಾರಿಯನ್ನ ಎತ್ತಂಗಡಿ ಮಾಡ್ತಾರೆ. ಅರುಣ್ ಉಳ್ಳಾಲ್ ಏಕಾಂಗಿಯಲ್ಲ ಹಿಂದೂ ಸಮಾಜ, ಹಿಂದೂ ಸಂಘಟನೆಗಳು ಅವರ ಜತೆ ನಿಲ್ಲುತ್ತದೆ ಎಂದರು.
ವಿಶ್ವ ಹಿಂದೂ ಪರಿಷತ್ ಮಠ, ಮಂದಿರ, ಅರ್ಚಕ ವಿಭಾಗ ಪ್ರಮುಖ್ ಪೊಳಲಿ ಗಿರಿಪ್ರಕಾಶ್ ತಂತ್ರಿ, ವಿ.ಹಿಂ.ಪ ಜಿಲ್ಲಾಧ್ಯಕ್ಷರಾದ ಹೆಚ್.ಕೆ ಪುರುಷೋತ್ತಮ್, ಉಪಾಧ್ಯಕ್ಷರಾದ ಮನೋಹರ್ ಸುವರ್ಣ, ಪ್ರಮುಖರಾದ ಕೃಷ್ಣ ಮೂರ್ತಿ, ಗೋಪಾಲ ಕುತ್ತಾರು, ನಾರಾಯಣ ಕುಂಪಲ, ರವಿ ಅಸೈಗೋಳಿ, ಗುರುಪ್ರಸಾದ್ ಕಡಂಬಾರ್, ಆಶಿಕ್ ಗೋಪಾಲಕೃಷ್ಣ, ಶಿವಪ್ರಸಾದ್ ಕೊಣಾಜೆ, ಕಿಶನ್ ತಾರಿಪಡ್ಪು, ಹರಿಪ್ರಸಾದ್ ಕೈರಂಗಳ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ನಾಗೇಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರಾಧ್ಯಕ್ಷರಾದ ಜಗದೀಶ ಆಳ್ವ ಕುವೆತ್ತಬೈಲು, ಕ್ಷೇತ್ರ ಮಹಿಳಾ ಮೋರ್ಚದ ಅಧ್ಯಕ್ಷೆ ಮಾಧವಿ ಉಳ್ಳಾಲ್, ಯುವಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆ, ಪ್ರಮುಖರಾದ ಚಂದ್ರಶೇಖರ್ ಉಚ್ಚಿಲ್, ಲಲಿತಾ ಸುಂದರ್, ಜಗದೀಶ ಶೇಣವ ಮೊದಲಾದವರು ಉಪಸ್ಥಿತರಿದ್ದರು.
VHP protest at ullal against congress government for Sumoto case against Arun ullal Mangalore. Slams CM Siddaramaiah as anti hindu. If hindus do anything they will be booked for no reason.
19-09-25 10:04 pm
Bangalore Correspondent
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
Traffic Violation, Bangalore: ರಾಜ್ಯದಲ್ಲಿ ಸಂಚಾ...
18-09-25 05:34 pm
19-09-25 05:45 pm
HK News Desk
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
19-09-25 10:46 pm
Mangalore Correspondent
ಕಟೀಲು ದೇಗುಲದಲ್ಲಿ ಸೇವಾ ದರ ಏಕಾಏಕಿ ದುಪ್ಪಟ್ಟು ; ಬ...
19-09-25 10:21 pm
ಧರ್ಮಸ್ಥಳ ಕೇಸ್ ; ಅನೇಕ ಶವಗಳನ್ನು ಹೂತಿದ್ದೆವು ಎಂದಿ...
19-09-25 09:59 pm
Kadri, Mangalore, Smart City: ‘ಸ್ಮಾರ್ಟ್ ಸಿಟಿ’...
19-09-25 07:53 pm
ಇನ್ಸ್ಟಾ ಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ; ಆರೋಪಿ...
19-09-25 04:58 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm