ಬ್ರೇಕಿಂಗ್ ನ್ಯೂಸ್
13-11-24 11:19 pm Mangalore Correspondent ಕರಾವಳಿ
ಮಂಗಳೂರು, ನ.13: ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕರಾವಳಿಯಲ್ಲಿ ಪ್ರತಿ ಮನೆಯಲ್ಲಿ ಚರ್ಚೆಯ ವಸ್ತುವಾಗಿದೆ. ಆತ ಯಾಕಾಗಿ ಪತ್ನಿ, ಮಗುವನ್ನು ಕೊಂದು ಬಿಟ್ಟ ಎನ್ನುವ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ಕೂಡ ಹರಸಾಹಸ ಪಡುತ್ತಿದ್ದಾರೆ.
ಇದೇ ವೇಳೆ, ಕಾರ್ತಿಕ್ ಭಟ್ ತನ್ನ 10 ಪವನ್ ಚಿನ್ನಾಭರಣವನ್ನು ಎಗರಿಸಿದ್ದಾನೆ ಎಂದು ಪಕ್ಷಿಕೆರೆ ಹೊಸಕಾಡು ನಿವಾಸಿ, ಸ್ಥಳೀಯ ಉದ್ಯಮಿ ಮಹಮ್ಮದ್ ಆರೋಪ ಮಾಡಿದ್ದಾರೆ. ಪಕ್ಷಿಕೆರೆ ಬ್ಯಾಂಕ್ ಒಂದರಲ್ಲಿ ತನ್ನ 10 ಪವನ್ ಚಿನ್ನವನ್ನು ಅಡವಿಟ್ಟು 1.60 ಲಕ್ಷ ರೂ. ಸಾಲ ಪಡೆದುಕೊಂಡಿದ್ದೆ. ಇನ್ನೂ ಹೆಚ್ಚಿನ ಸಾಲಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾಗಲೇ ಕಾರ್ತಿಕ್ ಸಹಾಯಕ್ಕೆಂದು ಬಂದಿದ್ದ.
ತಾನು ಮ್ಯಾನೇಜರ್ ಆಗಿರುವ ಸಹಕಾರಿ ಸಂಘದಲ್ಲಿ ಚಿನ್ನಾಭರಣ ಅಡವಿಟ್ಟರೆ ಹೆಚ್ಚಿನ ಸಾಲ ದೊರಕಿಸುವುದಾಗಿ ಭರವಸೆ ಕೊಟ್ಟಿದ್ದ. ಅದರಂತೆ ಪಕ್ಷಿಕೆರೆ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಚಿನ್ನಾಭರಣ ಬಿಡಿಸಿ, ಕಾರ್ತಿಕ್ ಬ್ರಾಂಚ್ ಮ್ಯಾನೇಜರ್ ಆಗಿದ್ದ ಸೊಸೈಟಿಯಲ್ಲಿ ಅಡವಿರಿಸಿದ್ದರು. ಅಲ್ಲಿ 3.04 ಲಕ್ಷ ರೂ. ಸಾಲವನ್ನೂ ಪಡೆದುಕೊಂಡಿದ್ದರು. ಕಾರ್ತಿಕ್ ಆತ್ಮಹತ್ಯೆ ಮಾಡಿದ ಕಾರಣ ಸಂಶಯಗೊಂಡ ಮಹಮ್ಮದ್ ಅವರು ಸೊಸೈಟಿಗೆ ತೆರಳಿ ತನ್ನ ಚಿನ್ನಾಭರಣದ ಬಗ್ಗೆ ವಿಚಾರಿಸಿದಾಗ ಅಡವಿಟ್ಟ ನಾಲ್ಕೇ ತಿಂಗಳಲ್ಲಿ ಅದನ್ನು ಬಿಡಿಸಲಾಗಿತ್ತು ಎಂದು ಸೊಸೈಟಿ ಅಧಿಕಾರಿಗಳು ಮಹಮ್ಮದ್ ಅವರಿಗೆ ತಿಳಿಸಿದ್ದಾರೆ.
ಮ್ಯಾನೇಜರ್ ಹುದ್ದೆಯಿಂದ ವಜಾಗೊಂಡಿದ್ದ
ಈ ನಡುವೆ, ಕಾರ್ತಿಕ್ ಭಟ್ ಬೇರೆ ಬೇರೆ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದ ಎನ್ನಲಾಗುತ್ತಿದ್ದು, ಇದೇ ಕಾರಣದಿಂದ ಆರ್ಥಿಕವಾಗಿ ಸಮಸ್ಯೆಗೀಡಾಗಿದ್ದ ಎನ್ನುವ ಮಾತು ಕೇಳಿಬರುತ್ತಿದೆ. ತಾನು ಕೆಲಸ ಮಾಡಿಕೊಂಡಿದ್ದ ಸೊಸೈಟಿಯಲ್ಲೂ ಅವ್ಯವಹಾರ ನಡೆಸಿದ್ದು, ಅದೇ ಕಾರಣಕ್ಕೆ ಕೆಲಸದಿಂದಲೇ ವಜಾಗೊಂಡಿದ್ದ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮಹಮ್ಮದ್ ಅಡವಿರಿಸಿದ್ದ 10 ಪವನ್ ಚಿನ್ನಾಭರಣವನ್ನು ಕಾರ್ತಿಕ್ ಬಿಡಿಸಿಕೊಂಡು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿರಲೂಬಹುದು ಅಥವಾ ಬೇರೆ ಕಡೆ ಅಡವಿರಿಸಿರುವ ಸಾಧ್ಯತೆಯೂ ಇದೆ.
Mangalore Mulki murder case, Karthik bhat huge debt, and irregularities in job exposed. Also friend of Karthik bhat has revealed that his 10 gram gold also has been taken from him and never Karthik has returned it back.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm