ಬ್ರೇಕಿಂಗ್ ನ್ಯೂಸ್
16-12-20 04:48 pm Mangalore Correspondent ಕರಾವಳಿ
ಮಂಗಳೂರು, ಡಿ.16: ಕರ್ನಾಟಕದ ದರಿದ್ರ ಬಿಜೆಪಿ ಸರಕಾರ ಪಂಚಾಯತ್ ಚುನಾವಣೆಯನ್ನೂ ಸರಿಯಾಗಿ ನಿರ್ವಹಿಸುತ್ತಿಲ್ಲ. ಮೀಸಲಾತಿ ವಿಚಾರದಲ್ಲಿ ಆಟವಾಡಿದ ಬಿಜೆಪಿ ಈಗ ಕಾಂಗ್ರೆಸ್ ಬೆಂಬಲಿತರನ್ನು ಹೆದರಿಸುವ ಪ್ರಯತ್ನ ಮಾಡುತ್ತಿದೆ. ಹೆದರಿಸಿ, ಬೆದರಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಿಸಿ, ಕೆಲವು ಕಡೆ ಅವಿರೋಧ ಆಯ್ಕೆ ಆಗಿದೆ. ಹೀಗಾಗಿ ಈ ಬಾರಿ ಪಾರದರ್ಶಕವಾಗಿ ಚುನಾವಣೆ ನಡೆಯುತ್ತದೆ ಎನ್ನುವ ಭರವಸೆ ಇಲ್ಲ. ಪಾರದರ್ಶಕ ಚುನಾವಣೆ ನಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ರಮಾನಾಥ ರೈ, ಬಿಜೆಪಿಯ ಈ ರೀತಿಯ ವರ್ತನೆಗೆ ಈ ಬಾರಿ ಮತದಾರರೇ ತಕ್ಕ ಉತ್ತರ ನೀಡಬೇಕಾಗಿದೆ. ಜನವಿರೋಧಿ ಸರಕಾರದ ವಿರುದ್ಧ ಮತದಾರರು ಮತ ಚಲಾವಣೆಯ ಮೂಲಕ ಉತ್ತರ ನೀಡಬೇಕು. ಆದರೆ, ಇದು ಪಾರದರ್ಶಕ ಚುನಾವಣೆ ನಡೆದರಷ್ಟೇ ಸಾಧ್ಯ ಎಂದು ಹೇಳಿದರು.
ಪರಿಷತ್ತಿನಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಅಷ್ಟೇ !
ಇದೇ ವೇಳೆ, ವಿಧಾನ ಪರಿಷತ್ತಿನಲ್ಲಿ ಘಟನೆ ಬಗ್ಗೆ ಕೇಳಿದ ಪ್ರಶ್ನೆಗೆ, ಅದಕ್ಕೆ ಬಿಜೆಪಿಯೇ ಕಾರಣ. ಒಂದ್ಕಡೆ ಸಭಾಪತಿಯ ಪೀಠದಲ್ಲಿ ಉಪ ಸಭಾಪತಿಯನ್ನು ಕೂರಿಸಲಾಗಿತ್ತು. ಮತ್ತೊಂದ್ಕಡೆ ಬಿಜೆಪಿಯವರು ಬಾಗಿಲು ಹಾಕಿ ಸಭಾಪತಿಯನ್ನು ತಡೆದಿದ್ದರು. ಹೀಗೆ ತಡೆದಿದ್ದು ಕಾಂಗ್ರೆಸ್ ಸದಸ್ಯರನ್ನು ಪ್ರಚೋದಿಸುವಂತೆ ಮಾಡಿತ್ತು. ಇದರಿಂದ ಕೆರಳಿ, ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿಯವರು ಬಾಗಿಲು ಹಾಕಿದ್ದು ಸರಿಯಾ ಎಂದು ಪ್ರಶ್ನೆ ಮಾಡಿದ್ರು. ಬಿಜೆಪಿಯವರ ಈ ರೀತಿಯ ಕ್ರಿಯೆಗೆ ಆ ರೀತಿಯ ಪ್ರತಿಕ್ರಿಯೆ ಆಗಿದೆ ಅಷ್ಟೇ. ಈ ಹಿಂದೆಯೂ ಯಡಿಯೂರಪ್ಪ ಸರಕಾರ ಇದ್ದಾಗ, ಇಂಥದ್ದೇ ಘಟನೆ ನಡೆದಿತ್ತು. ಬಾಗಿಲು ಹಾಕಿ ಕಲಾಪ ನಡೆಸಿದ್ದರು. ಯಡಿಯೂರಪ್ಪ ಸರಕಾರ ಇರುವಾಗಲೇ ಯಾಕೆ ಇಂಥ ಘಟನೆಗಳಾಗುತ್ತವೆ ಎಂದು ಪ್ರಶ್ನಿಸಿದರು.
Video:
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
25-08-26 11:38 am
HK News Staffer
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm