ಬ್ರೇಕಿಂಗ್ ನ್ಯೂಸ್
17-02-25 09:20 pm Mangalore Correspondent ಕರಾವಳಿ
ಮಂಗಳೂರು, ಫೆ.17: ಉಡುಪಿಯ ಪಡುಬಿದ್ರೆಯಿಂದ ಕಾಸರಗೋಡಿಗೆ 400 ಕೆವಿ ವಿದ್ಯುತ್ ಲೈನ್ ಅಳವಡಿಸುವುದಕ್ಕಾಗಿ 115 ಕಿಮೀ ಉದ್ದಕ್ಕೆ ಖಾಸಗಿ ಕಂಪನಿಯೊಂದು ಸರ್ವೆ ನಡೆಸುತ್ತಿದ್ದು, ಭೂಸ್ವಾಧೀನಕ್ಕೆ ಮುಂದಾಗಿದೆ. ಇದರಿಂದ ಲಕ್ಷಾಂತರ ಗಿಡ, ಮರಗಳು ನಾಶವಾಗಲಿವೆ. ಅಭಿವೃದ್ಧಿ ಹೆಸರಲ್ಲಿ ಸಮೃದ್ಧ ಕೃಷಿ ಭೂಮಿ ಹಾಳುಗೆಡವುತ್ತಿದ್ದಾರೆ. ಜಿಲ್ಲಾಡಳಿತದಿಂದ ಅಧಿಕೃತವಾಗಿ ಯಾವುದೇ ಸೂಚನೆ ನೀಡದೆ ಜನರನ್ನು ಒಕ್ಕಲೆಬ್ಬಿಸುವ ಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಸಂತ್ರಸ್ತ ಕೃಷಿಕರು ಒಕ್ಕೊರಲಿನ ವಿರೋಧ ಹೊಂದಿದ್ದು, ಫೆ.20ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಜಾಥಾ ನಡೆಸಲಿದ್ದಾರೆ.
ಈ ಬಗ್ಗೆ ವಿವಿಧ ಕ್ರಿಯಾ ಸಮಿತಿಗಳ ವತಿಯಿಂದ ಜಂಟಿ ಸುದ್ದಿಗೋಷ್ಟಿ ನಡೆದಿದ್ದು, ಸಂತ್ರಸ್ತ ಕೃಷಿಕರು ತಮ್ಮ ನೋವು ಹೇಳಿಕೊಂಡಿದ್ದಾರೆ. ಚಂದ್ರಹಾಸ ಶೆಟ್ಟಿ ಇನ್ನಾ ಮಾತನಾಡಿ, ನಾಲ್ಕು ವರ್ಷಗಳಿಂದ ಯುಪಿಸಿಎಲ್ ನಿಂದ ಸ್ಟಾರ್ ಲೈಟ್ ಪವರ್ ಕಂಪನಿಯವರು 400 ಕೆವಿ ವಿದ್ಯುತ್ ಲೈನ್ ಅಳವಡಿಸಲು ಗುತ್ತಿಗೆ ಪಡೆದಿದ್ದು, ಈವರೆಗೆ ಹತ್ತು ಶೇಕಡಾ ಜಾಗವನ್ನೂ ಪಡೆಯಲು ಸಾಧ್ಯವಾಗಿಲ್ಲ. ಎಲ್ಲ ಕಡೆಯೂ ಸಮೃದ್ಧ ಕೃಷಿ ಭೂಮಿಯಿದ್ದು, ಜನರು ಭೂಮಿ ಬಿಟ್ಟು ಕೊಡಲು ಒಪ್ಪುತ್ತಿಲ್ಲ. ಭೂಸ್ವಾಧೀನ ಮಾಡದೆ 400 ಕಿಲೋ ವ್ಯಾಟ್ ವಿದ್ಯುತ್ ಹರಿಸಲು ಸರ್ಕಾರಿ ಜಾಗದಲ್ಲಿ ಟವರ್ ಹಾಕುತ್ತಿದ್ದಾರೆ. ನಾವು ಅಭಿವೃದ್ಧಿ ವಿರೋಧಿಗಳಲ್ಲ, ಆದರೆ ಈ ರೀತಿ ಮಾಡುವುದಕ್ಕಷ್ಟೆ ವಿರೋಧ. ಇದರ ಬದಲು ಭೂಗತ ಕೇಬಲ್ ಅಳವಡಿಕೆ ಮಾಡಲಿ, ಪಡುಬಿದ್ರೆಯಿಂದ ಸಮುದ್ರ ಮುಖೇನ ಕೇರಳಕ್ಕೆ ವಿದ್ಯುತ್ ಒಯ್ಯಬಹುದು. ಅದನ್ನು ಬಿಟ್ಟು ಜಾಗ ಓಪನ್ನಾಗಿ ತಂತಿಯಲ್ಲಿ ವಿದ್ಯುತ್ ಒಯ್ಯುವುದನ್ನು ಮಾಡಿದರೆ ಅದರ ಪರಿಣಾಮ ಜನರ ಮೇಲಾಗುತ್ತದೆ. ಅಯಸ್ಕಾಂತೀಯ ಪರಿಣಾಮಗಳಿಂದ ಜನರಲ್ಲಿ ನಾನಾ ರೀತಿಯ ಆರೋಗ್ಯ ತೊಂದರೆಗಳಾಗುತ್ತದೆ ಎಂದರು.
ಉಡುಪಿಯ ಕಾಪು ತಾಲೂಕಿನ ಎಲ್ಲೂರಿನಿಂದ ದ.ಕ. ಜಿಲ್ಲೆಯ ಪುಣಚದ ವರೆಗಿನ 115 ಕಿಮೀ ಉದ್ದಕ್ಕೆ, 46 ಮೀಟರ್ ಅಗಲಕ್ಕೆ ಯೋಜನೆ ಜಾರಿಗೊಂಡಲ್ಲಿ 1150 ಸಮೃದ್ಧ ಕೃಷಿ ಭೂಮಿ ಸೇರಿ ಒಟ್ಟು 3450 ಎಕರೆ ಭೂಮಿ ನಾಶವಾಗುತ್ತದೆ. 2.5 ಲಕ್ಷ ಅಡಿಕೆ ಮರಗಳು, 1 ಲಕ್ಷ ತೆಂಗಿನ ಮರಗಳು, 4.5 ಲಕ್ಷದಷ್ಟು ಕಾಳು ಮೆಣಸಿನ ಬಳ್ಳಿ, 1.5 ಲಕ್ಷ ರಬ್ಬರ್ ಮರಗಳು, 2.5 ಲಕ್ಷ ಮಾವು, ನೇರಳೆ ಇನ್ನಿತರ ಜಾತಿಯ ಮರಗಳು ನಾಶಗೊಳ್ಳಲಿವೆ. 328 ವಾಸ್ತವ್ಯದ ಮನೆಗಳು, 26 ದೈವಸ್ಥಾನ, 16 ದೇವಸ್ಥಾನ, 8 ಮಸೀದಿ, 14 ಶಾಲೆಗಳು, 13 ಇಗರ್ಜಿಗಳು ಬಲಿಯಾಗಲಿವೆ ಎಂದು ವಿವರಿಸಿದರು.
ಫೆ.20ರಂದು ಬೆಳಗ್ಗೆ 9.30ಕ್ಕೆ 15 ಸಾವಿರಕ್ಕೂ ಹೆಚ್ಚು ಸಂತ್ರಸ್ತರು ಮಂಗಳೂರಿನ ಬಲ್ಮಠದಿಂದ ಮಿನಿ ವಿಧಾನಸೌಧ ವರೆಗೆ ಕಾಲ್ನಡಿಗೆ ಜಾಥಾ ಕೈಗೊಂಡು ಬೃಹತ್ ಪ್ರತಿಭಟನಾ ಸಭೆ ನಡೆಸಲಾಗುವುದು. ಕೆಥೋಲಿಕ್ ಸಭಾ, ಮಂಗಳೂರು ಚರ್ಚ್ ಧರ್ಮಪ್ರಾಂತ್ಯ, ರೈತ ಸಂಘ, ಕೃಷಿಕರ ಸಂಘಟನೆಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಪ್ರತಿಭಟನೆಗೆ ಕೈಜೋಡಿಸಲಿದ್ದಾರೆ ಎಂದು ಕೆಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ ಹೇಳಿದರು. ಈಗಾಗಲೇ ಹಲವು ಕಡೆ ಏಜಂಟರನ್ನು ನುಗ್ಗಿಸಿ ಜಮೀನು ಪಡೆಯುವ ಕೆಲಸ ಆಗುತ್ತಿದ್ದು, ಈ ಬಗ್ಗೆ ನಾವು ರಾಜ್ಯ ಸಚಿವರಿಂದ ಹಿಡಿದು ಕೇಂದ್ರ ಸಚಿವರ ವರೆಗೂ ದೂರು ನೀಡಿದ್ದೇವೆ. ಸರ್ಕಾರ ಯಾವುದೇ ಬಲವಂತ ಮಾಡಿದರೂ ನಾವು ಭೂಮಿ ನೀಡುವುದಿಲ್ಲ ಎಂದು ಸಂತ್ರಸ್ತರಾದ ವಿಕ್ಟರ್ ಡಿಸೋಜ ಕಡಂದಲೆ, ಅಲ್ಫೋನ್ಸ್ ಡಿಸೋಜ, ಕೃಷ್ಣಪ್ರಸಾದ್ ತಂತ್ರಿ ಹೇಳಿದರು.
In a significant display of public dissent, a coalition of farmers, environmental activists, and concerned citizens has announced a mass protest march and rally in response to the ongoing Udupi-Kasaragod 400 KV power line project (UKTL) spearheaded by UKTL-Sterlite Power. This initiative, which has faced mounting opposition over the past five years, is set to culminate in a large-scale demonstration on February 20, 2025, in Mangalore, aimed at drawing attention to the environmental and social ramifications of the project.
20-02-25 04:45 pm
HK News Desk
ಉದಯಗಿರಿ ಗಲಭೆ ಪ್ರಕರಣ ; ಪ್ರಚೋದನಕಾರಿ ಭಾಷಣ ಮಾಡಿದ್...
20-02-25 02:47 pm
Yellapur car lorry accident, Arbail ghat: ಯಲ್...
19-02-25 10:34 pm
Bird flu Karnataka, Bidar: ಆಂಧ್ರ, ಮಹಾರಾಷ್ಟ್ರದ...
19-02-25 10:19 pm
Koppal, Tungabhadra river, Hyderabad: 20 ಅಡಿ...
19-02-25 07:59 pm
19-02-25 11:00 pm
HK News Desk
ಬಾಲಕನಿದ್ದಾಗ ನುಂಗಿದ್ದ ಪೆನ್ ಕ್ಯಾಪ್ ; 21 ವರ್ಷ ಕಳ...
19-02-25 06:41 pm
Maha Kumbh river, NGT Board: ಕುಂಭಮೇಳ ನದಿ ನೀರು...
19-02-25 01:54 pm
ಇಬ್ಬರು ಹೆಂಡಿರ ಮುದ್ದಿನ ಗಂಡ ; ವಾರದ 3 ದಿನ ಅಲ್ಲಿ....
18-02-25 10:49 pm
Hindu idols Bishop House, Pala diocese, Kera...
18-02-25 10:45 pm
19-02-25 01:56 pm
Mangalore Correspondent
Satish Jarkiholi, Mangalore: ಕೆಪಿಸಿಸಿ ಅಧ್ಯಕ್ಷ...
18-02-25 12:36 pm
Dinesh Gundurao, Munner katipalla, Sand Mafia...
17-02-25 10:56 pm
Sterlite Power, Protest, 400kv Power, Mangalo...
17-02-25 09:20 pm
Mangalore, Dinesh Gundurao, Mines Krishnaveni...
17-02-25 09:14 pm
20-02-25 01:22 pm
Mangalore Correspondent
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm
Madikeri police, Fake Scheme, Mangalore crime...
18-02-25 06:04 pm
Mangalore Crime, Surathkal, Car: ಮದುವೆ ಸಮಾರಂಭ...
18-02-25 12:11 pm