ಬ್ರೇಕಿಂಗ್ ನ್ಯೂಸ್
22-02-25 05:21 pm Mangalore Correspondent ಕರಾವಳಿ
ಮಂಗಳೂರು, ಫೆ.22 : ಮುಖ್ಯಮಂತ್ರಿಗಳು ಸದ್ಯಕ್ಕೆ ಸಿದ್ದರಾಮಯ್ಯನವರೇ ಇರುತ್ತಾರೆ. ಉಪ ಮುಖ್ಯಮಂತ್ರಿಗಳು ಸದ್ಯಕ್ಕೆ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷರೂ ಕೂಡ ಅವರೇ ಇರುತ್ತಾರೆ.. ಹೀಗೆಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಮುಖ್ಯಮಂತ್ರಿ ರೇಸ್ ನಲ್ಲಿ ಡಿಕೆ ಶಿವಕುಮಾರ್ ಇದ್ದಾರೆ, ಆದರೆ ಸಿಎಂ ಬದಲಾವಣೆಗೆ ಸ್ಪಲ್ಪ ಸಮಯ ಬೇಕು ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಯ ಬಗ್ಗೆ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರೇ ಆಗಲಿ ಮಾಧ್ಯಮದಲ್ಲಿ ಹೇಳಿಕೆ ಕೊಟ್ಟರೆ ಸಚಿವರ ಬದಲಾವಣೆಯಾಗಲ್ಲ. ಆದರೆ, ಅವರು ಏನು ಹೇಳುತ್ತಾ ಇದ್ದಾರೋ ನನಗೇ ಗೊತ್ತಿಲ್ಲ. ಒಂದಂತೂ ಸ್ಪಷ್ಟವಾಗಿ ಹೇಳುತ್ತೇನೆ, ಜಾರಕಿಹೊಳಿಯವರು ಕೂಡ ಇದನ್ನೇ ಹೇಳಿದ್ದಾರೆ. ಮುಖ್ಯಮಂತ್ರಿ ಸದ್ಯಕ್ಕೆ ಸಿದ್ದರಾಮಯ್ಯ ಅವರೇ ಇರುತ್ತಾರೆ, ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಡಿಕೆಶಿ ಅವರೇ ಇರುತ್ತಾರೆ.
ಸತೀಶ್ ಜಾರಕಿಹೋಳಿ ಸದ್ಯಕ್ಕೆ ಲೋಕೋಪಯೋಗಿ ಸಚಿವ, ಪ್ರಿಯಾಂಕ್ ಖರ್ಗೆ ಸದ್ಯಕ್ಕೆ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದಾರೆ. ಎಲ್ಲಾ ಜವಾಬ್ದಾರಿಗಳನ್ನ ಹೈಕಮಾಂಡ್ ತೀರ್ಮಾನ ಮಾಡಿ ಕೊಟ್ಟಿದ್ದಾರೆ. ನಮ್ಮ ನಮ್ಮ ಜವಾಬ್ದಾರಿಗಳನ್ನ ನಾವು ಸರಿಯಾಗಿ ನಿಭಾಯಿಸುತ್ತಿದ್ದೇವೆ. ಸಿಎಂ ಬದಲಾವಣೆ, ಡಿಸಿಎಂ ಬದಲಾವಣೆ, ಪಿ ಡಬ್ಲ್ಯೂ ಡಿ ಸಚಿವರ ಬದಲಾವಣೆ ಇದೆಲ್ಲ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ರೆ ಆಗೋದಿಲ್ಲ.
ಎಲ್ಲಿ ಆಗಬೇಕು? ಯಾವಾಗ ಆಗಬೇಕು ? ಎಲ್ಲಿಂದ ಆಗಬೇಕು? ಯಾರಿಂದ ಆಗ್ಬೇಕು ? ಆಗುವಾಗ ಆಗುತ್ತೆ. ಎಐಸಿಸಿ ಯವರು ಎಲ್ಲಾ ಮಂತ್ರಿಗಳತ್ರ ರಿಪೋರ್ಟ್
ಕಾರ್ಡ್ ತೆಗೆದುಕೊಂಡಿದ್ದಾರೆ. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನ ಎಷ್ಟು ಈಡೇರಿಸಿದ್ದೀರಾ? ಯಾವ ಹೊಸ ನೀತಿಗಳನ್ನ ತಂದಿದ್ದೀರಾ? ಎಷ್ಟು ಅನುದಾನವನ್ನ ತಂದಿದ್ದೀರಾ? ಏನು ವಿನೂತನ ಕಾರ್ಯಕ್ರಮ ಮಾಡಿದ್ದೀರಾ ಅನ್ನೋ ಮಾಹಿತಿಯನ್ನ ಎ ಐ ಸಿಸಿ ಪಡೆದುಕೊಂಡಿದೆ.
ರಿಪೋರ್ಟ್ ಕಾರ್ಡ್ ನಾವು ಇಬ್ಬರಿಗೆ ಮಾತ್ರ ಕೊಡಬೇಕಿರೋದು. ಒಂದು ಹೈಕಮಾಂಡ್ ಗೆ ಇನ್ನೊಂದು ಜನರಿಗೆ. ನಮ್ಮ ಕೆಲಸ ನಾವು ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬದಲಾವಣೆ ಕುರಿತ ಹೇಳಿಕೆ ನೀಡುವವರಿಗೆ ಟಾಂಗ್ ನೀಡಿದ್ದಾರೆ. ಮಂಗಳೂರಿನ ಸಹ್ಯಾದ್ರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಿಯಾಂಕ ಖರ್ಗೆ, ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಗೃಹಲಕ್ಷ್ಮಿ ಹಣ ವಿಳಂಬ ಕುರಿತ ಪ್ರಶ್ನೆಗೆ, ವಿಳಂಬ ಆಗಿರೋದು ನಿಜ. ಸದ್ಯದಲ್ಲೇ ಹಾಕ್ತೀವಿ ಅಂತ ಸಿದ್ದರಾಮಯ್ಯನವರು ಹೇಳಿದ್ದಾರೆ. ಅದರಲ್ಲೇನಿದೆ, ಹಾಕ್ತಾರೆ. ಅದರಲ್ಲಿ ಬಿಜೆಪಿಯವರಿಗೇನು ಆಗಲಿಕ್ಕಿದೆ. ಬಿಟ್ಟಿ ಭಾಗ್ಯ ಎಂದವರಿಗೆ ಯಾಕಷ್ಟು ಅದರಲ್ಲಿ ಆಸಕ್ತಿ. ನಾವು ಕೊಡುತ್ತಿದ್ದೇವೆ, ಕೊಡ್ತೇವೆ. ಬಿಜೆಪಿಯವರು ಇದರ ಲಾಭ ಪಡೀತಿದ್ದಾರೆ ಅಲ್ವಾ ಎಂದರು. ಬಿಜೆಪಿಯವರು ಮೊದಲು ಕನ್ನಡಿಗರಿಗೆ, ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಕೇಂದ್ರಕ್ಕೆ ಹೋಗಿ ಪ್ರಶ್ನೆ ಮಾಡಲಿ, ನಮ್ಮ ಬಗ್ಗೆ ಪ್ರಶ್ನೆ ಬೇಡ ಎಂದರು.
ಪ್ರತಿ ಬಾರಿ ಸಚಿವರು, ಡಿಕೆಶಿ ಹೈಕಮಾಂಡ್ ಭೇಟಿ ಮಾಡ್ತಿದಾರಲ್ವಾ ಏನ್ ವಿಷಯ ಎಂಬ ಪ್ರಶ್ನೆಗೆ, ನಾವು ನಮ್ಮ ಹೈಕಮಾಂಡ್ ಭೇಟಿ ಮಾಡದೆ ಕೇಶವ ಕೃಪಾಕ್ಕೆ ಹೋಗಬೇಕಾ.. ಮೋದಿಯವರನ್ನು ಮೀಟ್ ಆಗೋಕೆ ಹೋಗಬೇಕಾ.. ನಮ್ಮ ಸಚಿವರು ನಮ್ಮ ನಾಯಕರಲ್ಲಿಗೆ ಹೋಗುತ್ತಾರೆ, ಅದರಲ್ಲೇನು ವಿಶೇಷ ಇಲ್ಲ ಎಂದರು.
Priyank Kharge, the Karnataka Minister for Rural Development and Panchayat Raj, announced today in Mangalore talking to media persons that Siddaramaiah will continue his role as Chief Minister of Karnataka, while DK Shivakumar will serve as the Deputy Chief Minister. This announcement comes amidst ongoing discussions within the state's ruling party regarding its leadership structure.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
20-07-25 10:35 pm
Mangalore Correspondent
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm