ಬ್ರೇಕಿಂಗ್ ನ್ಯೂಸ್
25-02-25 09:34 pm Mangalore Correspondent ಕರಾವಳಿ
ಮಂಗಳೂರು, ಫೆ.25: ಕರ್ನಾಟಕದ ಮೊದಲ ಸಿ – ಬ್ಯಾಂಡ್ ಡೋಪ್ಲಾರ್ ವೆದರ್ ರಾಡಾರ್ (ಡಿಡಬ್ಲ್ಯುಆರ್) ಮಂಗಳೂರಿನ ಶಕ್ತಿನಗರದಲ್ಲಿ ಸ್ಥಾಪನೆಯಾಗುತ್ತಿದ್ದು, ಮಾರ್ಚ್ ವೇಳೆಗೆ ಕಾರ್ಯಾರಂಭ ಮಾಡಲಿದೆ. ಈಗಾಗಲೇ ರಾಡಾರ್ ಸ್ಥಾಪನೆ ಕಾಮಗಾರಿ 80 ಶೇಕಡಾ ಪೂರ್ತಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ಮುಖ್ಯಸ್ಥ ಎನ್. ಪುವಿಯರಸನ್ ತಿಳಿಸಿದ್ದಾರೆ.
ರಾಡಾರ್ ವ್ಯವಸ್ಥೆ ಜಾರಿಗೆ ಬಂದಲ್ಲಿ ಹವಾಮಾನ ವೈಪರೀತ್ಯ, ಬಿಸಿಲು, ಗಾಳಿಯಲ್ಲಿ ಬದಲಾವಣೆ, ಮೋಡಗಳ ಸಾಂದ್ರತೆ, ಮಳೆ, ಚಂಡಮಾರುತ ಕಾಣಿಸಿಕೊಳ್ಳುವ ಸಾಧ್ಯತೆ ಬಗ್ಗೆ ಕರಾರುವಾಕ್ ಮಾಹಿತಿ ಪಡೆಯಬಹುದು. ಮಂಗಳೂರಿನ ಶಕ್ತಿನಗರದಲ್ಲಿ ಎತ್ತರದ ಜಾಗವನ್ನು ಗುರುತಿಸಿ ರಾಡಾರ್ ಸ್ಥಾಪನೆ ಮಾಡಲಾಗಿದ್ದು, ಕೆಲಸ ಪೂರ್ತಿಯಾದ ಕೂಡಲೇ ನಾವು ಟ್ರಯಲ್ ನೋಡುತ್ತೇವೆ. ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಮುಗಿಯಬಹುದೆಂಬ ನಿರೀಕ್ಷೆ ಇದೆ. ಎಪ್ರಿಲ್ ವೇಳೆಗೆ ಕಾರ್ಯಾರಂಭ ಮಾಡಬಹುದು ಎಂದು ಪುವಿಯರಸನ್ ಹೆಡ್ ಲೈನ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.




ಅಂದಹಾಗೆ, ಮಂಗಳೂರಿನ ಡೋಪ್ಲರ್ ರಾಡಾರ್ ರಾಜ್ಯದ ಮೊದಲ ಈ ಮಾದರಿಯ ವ್ಯವಸ್ಥೆಯಾಗಿದ್ದು, ಸದ್ಯದಲ್ಲೇ ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲಾಗುವುದು. ಎತ್ತರದ ಜಾಗ ಆಗಬೇಕಿರುವುದರಿಂದ ಅಲ್ಲಿ ಇನ್ನೂ ಸರಿಯಾದ ಜಾಗ ಗುರುತಿಸಲು ಸಾಧ್ಯವಾಗಿಲ್ಲ. ಆನಂತರ, ಧಾರವಾಡ ಮತ್ತು ಬಳ್ಳಾರಿ ಅಥವಾ ಕಲಬುರಗಿಯಲ್ಲೂ ರಾಡಾರ್ ಸ್ಥಾಪಿಸುವ ಉದ್ದೇಶ ಇದೆ. ಆಮೂಲಕ ಇಡೀ ಕರ್ನಾಟಕದಲ್ಲಿ ಮಳೆ ವೈಪರೀತ್ಯ ಇನ್ನಿತರ ಹವಾಮಾನ ಸಂಬಂಧಿತ ವಿಚಾರಗಳನ್ನು ಮೊದಲೇ ಅರಿತುಕೊಳ್ಳಲು ಸಾಧ್ಯವಿದೆ. ಒಂದು ಡೋಪ್ಲರ್ ರಾಡಾರ್ ವ್ಯವಸ್ಥೆ 250 ಕಿಮೀ ವ್ಯಾಪ್ತಿ ಹೊಂದಿದ್ದು, ಕರಾವಳಿ ಭಾಗವನ್ನು ಪೂರ್ತಿಯಾಗಿ ಕವರ್ ಮಾಡುತ್ತದೆ. ಪೂರ್ವದಲ್ಲಿ ಘಟ್ಟ ಇರುವುದರಿಂದ ಆ ಭಾಗದ ಸಿಗ್ನಲ್ ಕೊಂಚ ಕಡಿಮೆಯಾಗಬಹುದು ಎಂದವರು ಹೇಳಿದ್ದಾರೆ.
ಕೇರಳದಲ್ಲಿ ಕೊಚ್ಚಿ ಮತ್ತು ತಿರುವನಂತಪುರದಲ್ಲಿ ರಾಡಾರ್ ಡೋಪ್ಲರ್ ವ್ಯವಸ್ಥೆ ಇದೆ. ತಮಿಳುನಾಡಿನಲ್ಲಿ ಚೆನ್ನೈ ಮತ್ತು ಕರೈಕಲ್ ನಲ್ಲಿ ಇದೆ. ಕರ್ನಾಟಕದಲ್ಲಿ ಇಂತಹ ವ್ಯವಸ್ಥೆ ಈಗಷ್ಟೇ ಜಾರಿಗೆ ಬರುತ್ತಿದೆ. ಕರಾವಳಿಯಲ್ಲಿ ಆಗಿಂದಾಗ್ಗೆ ಅತಿ ಹೆಚ್ಚು ಮಳೆಯಾಗುವುದು, ಅದರಿಂದ ಹವಾಮಾನ ವೈಪರೀತ್ಯಗಳು ಆಗುತ್ತಿರುವುದರಿಂದ ರಾಡಾರ್ ಜಾರಿಗೆ ಒತ್ತು ನೀಡಲಾಗಿದೆ. ಒಂದು ರಾಡಾರ್ ಸ್ಥಾಪನೆಗೆ 8ರಂದ 10 ಕೋಟಿ ಖರ್ಚು ತಗಲುತ್ತದೆ ಎಂದು ಪುವಿಯರಸನ್ ಮಾಹಿತಿ ನೀಡಿದ್ದಾರೆ.
Karnataka's first C-Band Doppler Weather Radar (DWR), currently under construction in Mangaluru, is expected to be operational by March, according to N. Puviarasan, head of the India Meteorological Department's (IMD) Bengaluru center. The installation of this radar will enhance weather monitoring and forecasting capabilities in the region, providing timely and accurate information that is crucial for disaster management and agricultural practices.
09-06-26 07:04 pm
HK News Staffer
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
ಎಂಬಿಬಿಎಸ್ ಪದವಿ ಮುಗಿಸಿದ ಬೆನ್ನಲ್ಲೇ ಸರ್ಕಾರಿ ಆಸ್ಪ...
05-06-26 07:14 pm
08-06-26 09:11 pm
HK News Staffer
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
ಯೋಗಿಜೀ ನಮ್ಮನ್ನು ಕ್ಷಮಿಸಿ..! ಇನ್ನೆಂದೂ ಅಪರಾಧ ಕೃತ...
04-06-26 04:19 pm
09-06-26 08:58 pm
ರಿಚರ್ಡ್ | Richard
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
ಮಳೆಗಾಲ ಹಿನ್ನೆಲೆ ; ರಸ್ತೆ ಹೊಂಡಕ್ಕೆ ಬಿದ್ದು ಪ್ರಾಣ...
08-06-26 09:21 pm
ಮಂಗಳೂರಿನಲ್ಲಿ ಡಿಎಚ್ಓಗೆ ಸಚಿವ ಯು.ಟಿ ಖಾದರ್ ಕ್ಲಾಸ್...
08-06-26 04:55 pm
UT Khader, Mangalore: ಎಂಬಿಬಿಎಸ್ ಆದವರಿಗೆ ಕಲಿತ...
07-06-26 03:38 pm
10-06-26 01:48 pm
HK News Staffer
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm