ಬ್ರೇಕಿಂಗ್ ನ್ಯೂಸ್
28-02-25 06:13 pm Mangalore Correspondent ಕರಾವಳಿ
ಮಂಗಳೂರು, ಫೆ.28: ಫರಂಗಿಪೇಟೆಯ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿ ಎರಡು ದಿನ ಕಳೆದರೂ ಪತ್ತೆಯಾಗಿಲ್ಲ. ಫರಂಗಿಪೇಟೆಯ ಸುತ್ತಮುತ್ತ ಡ್ರಗ್ಸ್, ಗಾಂಜಾ ವ್ಯಸನಿಗಳ ಒಂದು ದೊಡ್ಡ ತಂಡ ಇದೆ ಎಂಬುದು ಅಲ್ಲಿಯ ಅಕ್ಕಪಕ್ಕದ ಜನ ಮಾತನಾಡುತ್ತಿ ದ್ದಾರೆ. ಆದ್ದರಿಂದ ಈ ನಾಪತ್ತೆಯ ಹಿಂದೆ ಹಲವು ಸಂಶಯಗಳು ವ್ಯಕ್ತವಾಗುತ್ತಿದ್ದು ಇದರ ಹಿಂದೆ ಗಾಂಜಾ ವ್ಯಸನಿಗಳ ತಂಡದ ಕೈವಾಡ ಇರಬಹುದು ಎಂಬ ಸಂಶಯವನ್ನು ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿ ನಾಪತ್ತೆ ಹಿನ್ನೆಲೆಯಲ್ಲಿ ಹಿಂದು ಸಂಘಟನೆ ಪ್ರಮುಖರ ನಿಯೋಗ, ದಿಗಂತ್ ಮನೆಗೆ ಭೇಟಿ ನೀಡಿ ಗಾಬರಿಗೊಂಡ ಮನೆಯವರಿಗೆ ಸಾಂತ್ವನ ಹೇಳಿತು. ಇದೇ ವೇಳೆ, ದಿಗಂತ್ ನಾಪತ್ತೆಯಾದ ಸಂದರ್ಭ ಮತ್ತು ಅದರ ಹಿಂದಿನ ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ದಿಗಂತ್ ನಾಪತ್ತೆಯಾದ ಸಮಯದಲ್ಲಿ ಅಪರಿಚಿತ ಕ್ವಾಲಿಸ್ ಕಾರು ಆ ಜಾಗದಲ್ಲಿ ಓಡಾಡಿದ್ದು ಫರಂಗಿಪೇಟೆಯ ಆಂಜನೇಯ ದೇವಸ್ಥಾನದ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಆ ಕಾರು ಯಾರದ್ದು ಮತ್ತು ಅದರಲ್ಲಿ ವಿದ್ಯಾರ್ಥಿಯನ್ನು ಅಪಹರಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ಮಾಡಬೇಕು. ನಾಪತ್ತೆಯಾದ ವಿದ್ಯಾರ್ಥಿಯನ್ನು ಶೀಘ್ರವಾಗಿ ಪತ್ತೆಹಚ್ಚಲು ವಿಶ್ವ ಹಿಂದೂ ಪರಿಷದ್ ಆಗ್ರಹಿಸುತ್ತದೆ. ದೇವಸ್ಥಾನಕ್ಕೆಂದು ಹೊರಟವನು ಮನೆಗೆ ಹಿಂದಿರುಗದಿರುವುದರಿಂದ ಮನೆಯವರೆಲ್ಲರೂ ಗಾಬರಿಗೊಂಡಿದ್ದಾರೆ. ಮನೆಯವರ ಪ್ರಶ್ನೆಗಳಿಗೆ ಪೊಲೀಸರು ಉತ್ತರ ನೀಡಬೇಕಾಗಿದೆ ಎಂದು ಶರಣ್ ಪಂಪವೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Hindu activist Sharan Pumpwell visits residence of missing student at Farangipete in Mangalore. Hindu organization leader Sharan Pumpwell visited the residence of missing student Diganth at Kidebettu, Farangipete, on Friday, February 28. Diganth, a student, went missing on the evening of Tuesday, February 25, after leaving home to visit a temple.
01-04-25 10:45 pm
HK News Desk
Karnataka diesel price hike: ಹಾಲು, ಟೋಲ್, ಕರೆಂ...
01-04-25 09:35 pm
ರಾಜ್ಯ ಸರ್ಕಾರದಿಂದ ಯುಗಾದಿಗೆ ಬೆಲೆ ಏರಿಕೆ ಕೊಡುಗೆ ;...
01-04-25 03:49 pm
Karnataka toll hike, Milk: ರಾಜ್ಯದ ಜನತೆಗೆ ಎಪ್ರ...
01-04-25 12:26 pm
ಕಳೆದ 11 ವರ್ಷಗಳಿಂದ ನೀವೇ ಅಧಿಕಾರದಲ್ಲಿ ಮೊಳೆ ಹೊಡೆ...
31-03-25 07:41 pm
31-03-25 09:34 pm
HK News Desk
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
01-04-25 09:38 pm
Mangalore Correspondent
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
Belthangady Accident, Mangalore: ಯಕ್ಷಗಾನ ಮುಗಿ...
31-03-25 12:26 pm
CCB Police, CM Medal, Mangalore: ಮಂಗಳೂರು ಪೊಲೀ...
30-03-25 11:02 pm
01-04-25 11:07 pm
Mangalore Correspondent
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm
Mangalore Muda Commissioner, FIR, Noor Zahara...
31-03-25 09:29 pm
Mangalore Derlakatte Robbery attempt; ದೇರಳಕಟ್...
30-03-25 08:59 am