ಬ್ರೇಕಿಂಗ್ ನ್ಯೂಸ್
03-03-25 04:45 pm Mangalore Correspondent ಕರಾವಳಿ
ಮಂಗಳೂರು, ಮಾ.3: ಶಕ್ತಿನಗರದ ಶ್ರೀಕೃಷ್ಣ ಮಂದಿರದ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದ್ದು, ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಉಪ್ಪು ಖಾರ ಸುರಿದಿದ್ದಾರೆ. ದೇವಸ್ಥಾನಕ್ಕೆ ಕಲ್ಲು ಹೊಡೆದವರು ನೀವ್ಯಾಕೆ ಬಂದಿದ್ದೀರಿ ಎಂದು ಶಾಸಕರು ಕಾಂಗ್ರೆಸಿಗರನ್ನುದ್ದೇಶಿಸಿ ಪ್ರಶ್ನೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಕಾರ್ಯಕರ್ತರಾದ ಅಶ್ವಿತ್ ಕೊಟ್ಟಾರಿ, ಮಣಿ, ಜಯಪ್ರಕಾಶ್ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಶಕ್ತಿನಗರ ಕೃಷ್ಣ ಮಂದಿರಕ್ಕೆ ಭಾನುವಾರ ರಾತ್ರಿ 8 ಗಂಟೆ ವೇಳೆಗೆ ಶಾಸಕ ವೇದವ್ಯಾಸ ಕಾಮತ್ ಬಂದಿದ್ದು, ಈ ವೇಳೆ ತನ್ನನ್ನು ಎದುರುಗೊಂಡ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ದೇವಸ್ಥಾನಕ್ಕೆ ಕಲ್ಲು ಹೊಡೆದವರು ಎಂದು ಹೇಳಿ ನಿಂದಿಸಿದ್ದಾರೆ.
ಆಬಳಿಕ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗಲೂ ಶಾಸಕ ಕಾಮತ್, ಇದೇ ರೀತಿಯ ಮಾತನ್ನು ಹೇಳಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿದೆ. ಹೀಗಾಗಿ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದ ಶಾಸಕರನ್ನು ಅಡ್ಡಹಾಕಿ ಕಾಂಗ್ರೆಸ್ ಕಾರ್ಯಕರ್ತರಾದ ಯಶವಂತ ಪ್ರಭು, ಆಶಾಲತಾ, ದಯಾನಂದ ನಾಯ್ಕ್ ಅವರು ಪ್ರಶ್ನೆ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು ಯಶವಂತ ಪ್ರಭು ಮೇಲೆ ಹಲ್ಲೆ ನಡೆಸಿದ್ದಾರೆ. ಆನಂತರ, ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಇಷ್ಟರಲ್ಲಿ ಅಲ್ಲಿಗೂ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದಾರೆ. ಅಲ್ಲದೆ, ಬಿಜೆಪಿ ಕಾರ್ಯಕರ್ತ ಮಣಿ ಎಂಬಾತನೂ ಆಸ್ಪತ್ರೆಗೆ ದಾಖಲಾಗಿದ್ದಲ್ಲದೆ, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಅಟ್ರಾಸಿಟಿ ಕೇಸು ದಾಖಲಿಸಿದ್ದಾರೆ. ಹೀಗಾಗಿ ಎರಡು ತಂಡದ ವಿರುದ್ಧವೂ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
The Kankanady Town police have registered an FIR against a group of people including Mangalore City South MLA D Vedavyasa Kamath (fourth accused), for allegedly provoking his acquaintances to assault a District Congress Committee (DCC) member. The congress worker had allegedly questioned the MLA over his remark during the stage programme of brahmakalashotsava at Shri Krishna Bhajana Mandira at Padavu Shaktinagara on Sunday night.
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
08-02-26 10:18 pm
HK News Desk
25 ವರ್ಷಗಳ ಬಳಿಕ ಮುಂಬೈ ಪಾಲಿಕೆ ಬಿಜೆಪಿ ತೆಕ್ಕೆಗೆ ;...
07-02-26 10:53 pm
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
08-02-26 11:17 pm
HK News Desk
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
ಬೈಂದೂರು ಕ್ಷೇತ್ರದ ಮಾಜಿ ಶಾಸಕ, ಜನತಾ ಪರಿವಾರದ ಹಿರಿ...
07-02-26 12:55 pm
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
08-02-26 02:07 pm
Mangalore Correspondent
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm
ಫ್ರೀ ಫೈರ್ ಗೇಮ್ ಚಟ ; ಅಕ್ಕನ ಮಗನ ಕೊಂದಿದ್ದ ಮಾವ, ಪ...
07-02-26 10:48 pm
ಡಿಜಿಟಲ್ ಅರೆಸ್ಟ್ ; ಮಹಿಳೆಗೆ 15 ನಿಮಿಷದಲ್ಲಿ 50 ಲಕ...
07-02-26 10:07 pm