ಬ್ರೇಕಿಂಗ್ ನ್ಯೂಸ್
04-03-25 05:17 pm Mangalore Correspondent ಕರಾವಳಿ
ಮಂಗಳೂರು, ಮಾ.4: ಬಿಜೆಪಿ ಸಂಸದೆ, ಬಾಲಿವುಡ್ ಚಿತ್ರನಟಿ ಕಂಗನಾ ರಣಾವತ್ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇವಿಯ ದರ್ಶನಕ್ಕೆ ಬಂದಿದ್ದೇನೆ. ನಿನ್ನೆ ಕಾಪು ಮಾರಿಗುಡಿ, ಇಂದು ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದೇನೆ. ತಾಯಿಯ ದರ್ಶನ ಪಡೆದಿದ್ದೇನೆ. ಬಹಳ ವರ್ಷಗಳಿಂದ ಈ ಭಾಗಕ್ಕೆ ಬರಬೇಕೆಂಬ ಅಭಿಲಾಷೆ ಇತ್ತು. ತಾಯಿ ತನ್ನ ಆಶೀರ್ವಾದ ನೀಡಲು ಈಗ ಕರೆಸಿಕೊಂಡಿದ್ದಾಳೆ ಎಂದಿದ್ದಾರೆ.
ಸಂಭಾಜಿ ಕುರಿತ ಛಾವಾ ಚಿತ್ರದ ಬಗ್ಗೆ ಕೇಳಿದ ಪ್ರಶ್ನೆಗೆ, ಗುಲಾಮರ ದಿನಗಳು ಮುಗಿದು ಹೋಗಿವೆ. ಈಗ ಏನಿದ್ದರೂ ಶಿವಾಜಿ, ಸಂಭಾಜಿ ಮಹಾರಾಜರ ಯಶೋಗಾಥೆ ಮೊಳಗುತ್ತಿದೆ. ಹಿಂದೂ ಧರ್ಮದ ರಕ್ಷಣೆಗೆ, ಸ್ವರಾಜ್ಯಕ್ಕೆ ಪ್ರಾಣ ತ್ಯಾಗ ಮಾಡಿದವರ ಬಗ್ಗೆ ಹೆಚ್ಚೆಚ್ಚು ತಿಳಿದುಬರಬೇಕು. ನಮ್ಮ ರಸ್ತೆಗಳಿಗೆ ಅವರ ಹೆಸರನ್ನಿಡಬೇಕು ಎಂದು ಹೇಳಿದ್ದಾರೆ. ದೇಶದಲ್ಲಿ ಸನಾತನ ಧರ್ಮ, ಸಂಸ್ಕೃತಿಯ ಬಗ್ಗೆ ಜಾಗೃತಿ ಆಗುತ್ತಿದೆ. ದೇಶ ಉನ್ನತ ಪ್ರಗತಿಯತ್ತ ಸಾಗುತ್ತಿದೆ. ನಮ್ಮ ಸನಾತನ ಧರ್ಮದ ಬಗ್ಗೆ ಜನರು ಜಾಗೃತರಾಗಿದ್ದಾರೆ. ನಮ್ಮ ದೇವಾಲಯಗಳು ಕೇವಲ ದೇವರ ಆಲಯವಾಗಿ ಉಳಿದಿಲ್ಲ. ನಮ್ಮ ದೇವಾಲಯಗಳು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು ಆಸ್ಪತ್ರೆ, ಶಾಲೆಗಳನ್ನು ನಡೆಸುತ್ತಿವೆ. ಕೆಲವು ಕಡೆ ಆಶ್ರಮಗಳನ್ನೂ ನಡೆಸುತ್ತಿವೆ. ದೇಗುಲಗಳು ನಮ್ಮ ಧರ್ಮದ ಹೆಗ್ಗುರುತು ಎಂದು ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಚಿತ್ರರಂಗದ ನಟ- ನಟಿಯರ ಬಗ್ಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕೆಂಬ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಂಗನಾ ರಣಾವತ್, ವೀರಾಧಿ ವೀರರೇ ಕಲಾಕಾರರು ಆಗಿರುವ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇಂದ್ರ, ಅರ್ಜುನರು ಕಲಾವಿದರಾಗಿದ್ದ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಕಲಾವಿದರೊಂದಿಗೆ ತಾಯಿ ಸರಸ್ವತಿ ಇರುತ್ತಾಳೆ. ಹೀಗಾಗಿ ಕಲಾವಿರೊಂದಿಗೆ ದುರ್ವರ್ತನೆ ಸರಿಯಲ್ಲ. ಕಲಾವಿದರ ನಟ್ಟು ಬೋಲ್ಟ್ ಟೈಟ್ ಮಾಡಲು ಹೋದರೆ ಬೇರೆಯದ್ದೇ ಆಗಬಹುದು. ತುಳಿತಕ್ಕೊಳಗಾದವರ ರಕ್ಷಣೆಗೆ ವಿಷ್ಣು ಜನ್ಮ ತಾಳಿದ್ದು ಇದೆ. ಕಲಾವಿದರ ರಕ್ಷಣೆಗೆ ದೇವರು ಬಂದೇ ಬರುತ್ತಾರೆ ಎಂದು ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
Kangana Ranaut seeks blessings at kateel temple in Mangalore, slams DK Shivakumar over remarks on film industry. Earlier, she had shared a photo to her Instagram Stories and penned, "Honoured to be at the opening ceremony of Kapu Mariyamma temple with National General Secretary BJP BL Santosh ji."
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm