ಬ್ರೇಕಿಂಗ್ ನ್ಯೂಸ್
04-03-25 05:42 pm Mangalore Correspondent ಕರಾವಳಿ
ಮಂಗಳೂರು, ಮಾ.4: ಶಕ್ತಿನಗರ ಶ್ರೀಕೃಷ್ಣ ಮಂದಿರದಲ್ಲಿ ನಡೆದ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಮೇಲೆ ಕೇಸು ದಾಖಲಿಸಿದ ಕ್ರಮದ ಬಗ್ಗೆ ಶಕ್ತಿನಗರದ ಸ್ಥಳೀಯರು ಸುದ್ದಿಗೋಷ್ಟಿ ನಡೆಸಿದ್ದಾರೆ. ಶಾಸಕರು ತಮಾಷೆಯಾಗಿ ಆಡಿದ್ದ ಮಾತನ್ನೇ ದೊಡ್ಡದು ಮಾಡಿದ್ದಾರೆ. ಆ ರೀತಿಯ ಘಟನೆಯೇನೂ ನಡೆದೇ ಇಲ್ಲ. ಯಾರನ್ನೂ ಅವಾಚ್ಯವಾಗಿ ಮಾತನಾಡಿದ್ದೂ ಇಲ್ಲ. ಕಾಂಗ್ರೆಸ್ ನಾಯಕರು ಶಕ್ತಿನಗರದ ಊರಿಗೆ ಕಳಂಕ ತರುವ ರೀತಿ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಚ್.ಕೆ ಪುರುಷೋತ್ತಮ್, ಶಾಸಕರು ಸಂಜೆ 6.30ರ ವೇಳೆಗೆ ಕಾರ್ಯಕ್ರಮ ಸ್ಥಳಕ್ಕೆ ಬಂದಿದ್ದರು. ಆನಂತರ, ಸ್ವಲ್ಪ ಹೊತ್ತಿನಲ್ಲಿ ನಾನೂ ಅಲ್ಲಿಗೆ ಬಂದಿದ್ದೇನೆ. ಆನಂತರ, ಕಾರ್ಯಕ್ರಮದ ವೇದಿಕೆಯಲ್ಲಿ ನಾನು ಮತ್ತು ಐವಾನ್ ಡಿಸೋಜ ಅವರೂ ಇದ್ದರು. ಕಾರ್ಯಕ್ರಮದ ನಿರೂಪಣೆಯಲ್ಲಿ ಮಂಗಳೂರು ಉತ್ತರ ಮಂಡಲ ಕಾಂಗ್ರೆಸಿನ ಮಾಜಿ ಅಧ್ಯಕ್ಷ ಉಮೇಶ್ ದಂಡಕೇರಿ ನಿರ್ವಹಿಸಿದ್ದಾರೆ. ವೇದಿಕೆಯಲ್ಲಿದ್ದಾಗ ಅಂತಹ ಯಾವುದೇ ಘಟನೆ ನಡೆದಿಲ್ಲ.
ಕಾರ್ಯಕ್ರಮದ ನಡುವೆ ಯಶವಂತ ಪ್ರಭು, ಆಶಾಲತಾ ಮತ್ತು ದಯಾನಂದ ನಾಯ್ಕ್ ಬಂದು ನಾವು ಶಾಸಕರನ್ನು ಪ್ರಶ್ನೆ ಮಾಡುತ್ತೇವೆ, ಅವರು ನಮ್ಮನ್ನು ಪ್ರತಿ ಬಾರಿ ಗೇಲಿ ಮಾಡುತ್ತಾರೆ ಎಂದಿದ್ದರು. ಆ ಸಂದರ್ಭದಲ್ಲಿ ಆ ರೀತಿ ಏನೂ ಮಾಡಬೇಡಿ, ಶಾಸಕರಲ್ಲಿ ನಾನು ಮಾತನಾಡುತ್ತೇನೆ ಎಂದೂ ಹೇಳಿದ್ದೆ. ಆದರೆ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದಾಗ, ಯಶವಂತ ಪ್ರಭು ಮತ್ತು ಅವರ ಜೊತೆಗಿದ್ದವರು ಶಾಸಕರನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ಒಂದಷ್ಟು ಮಾತಿನ ಚಕಮಕಿ ಆಗಿತ್ತು. ಆಗ ನಾವು ವೇದಿಕೆಯಲ್ಲೇ ಇದ್ದೆವು. ಆನಂತರ, ನಾವು ಹೋಗುವಷ್ಟರಲ್ಲಿ ಎಲ್ಲವೂ ಮುಗಿದಿತ್ತು. ನಾವು ಕಾಂಗ್ರೆಸ್, ಬಿಜೆಪಿ ಅಂತ ಭೇದ ಇಲ್ಲ. ಕೃಷ್ಣ ಮಂದಿರ ಇತರೆಲ್ಲ ಸಂಸ್ಥೆಗಳಲ್ಲಿ ನಾವೆಲ್ಲ ಜೊತೆಗಿದ್ದೇವೆ. ಇದರ ನಡುವೆ ಸಣ್ಣ ವಿಷಯ ಮುಂದಿಟ್ಟು ಶಾಸಕರು ಮತ್ತು ಜೊತೆಗಿದ್ದವರ ಮೇಲೆ ಸುಳ್ಳು ಕೇಸು ದಾಖಲಿಸಿದ್ದು ನಮಗೆಲ್ಲ ಬೇಸರ ತಂದಿದೆ ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಶಕ್ತಿನಗರದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ನಮ್ಮ ಸರಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿ ಪಿಯು ಕಾಲೇಜು ಮಂಜೂರು ಮಾಡಿಸಿದ್ದಾರೆ. ಶಾಸಕರ ಜನಪ್ರಿಯತೆ ಸಹಿಸದೆ ಈ ರೀತಿ ಮಾಡಿದ್ದಾರೆ. ಯಶವಂತ ಪ್ರಭು ಹೊರಗಿನವರಲ್ಲ. ನಮ್ಮ ಕೃಷ್ಣ ಮಂದಿರದಲ್ಲಿ ಟ್ರಸ್ಟಿ ಆಗಿದ್ದಾರೆ. ವಿನಾಕಾರಣ ಈ ರೀತಿ ಅಪಪ್ರಚಾರ ಮಾಡಿದ್ದಾರೆ. ಆದರೂ, ಈ ಘಟನೆಗೂ ನಮ್ಮ ಕೃಷ್ಣ ಮಂದಿರಕ್ಕೂ ಸಂಬಂಧ ಇಲ್ಲ ಎಂದು ಸುದ್ದಿಗೋಷ್ಟಿಯಲ್ಲಿದ್ದ ಕೃಷ್ಣ ಮಂದಿರದ ಟ್ರಸ್ಟಿ ಹರೀಶ್ ಕುಮಾರ್ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಕುಶಾಲ್ ಕುಮಾರ್, ಪುಷ್ಪಾ ಬಿ. ಶೆಟ್ಟಿ, ಅಶೋಕ್ ನಾಯಕ್ ಇದ್ದರು.
Mangalore Trying to destroy the name of MLA Vedavyas kamath, no such incident took place at Shakthinagr says residents
04-03-25 07:20 pm
Bangalore Correspondent
Kasaragod, Manjeshwar Accident: ಮಂಜೇಶ್ವರ ; ಹೆ...
04-03-25 01:37 pm
Bird Flu, Eggs: ಹಕ್ಕಿಜ್ವರ ಪೀಡಿತ ಕೋಳಿ, ಮೊಟ್ಟೆ...
04-03-25 12:14 pm
Mla Ravi Ganiga, Rashmika Mandanna: ರಶ್ಮಿಕಾ ಕ...
03-03-25 11:03 pm
ಮೊಯ್ಲಿ ಮಾತು ಅಂತಿಮ ಅಲ್ಲ , ಹೈಕಮಾಂಡ್ ನೀಡುವ ಸೂಚನೆ...
03-03-25 10:35 pm
01-03-25 10:39 pm
HK News Desk
Trump Vs Zelenskyy, Talk fight: ಶ್ವೇತ ಭವನದಲ್ಲ...
01-03-25 05:35 pm
Pope Francis: ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗ...
01-03-25 01:20 pm
ಟ್ರಂಪ್ ಸುಂಕ ಬರೆಗೆ ನಲುಗಿದ ಷೇರುಪೇಟೆ ; NIFTY ಇತಿ...
28-02-25 08:11 pm
ಪಾಕಿಸ್ತಾನ ಮದ್ರಸಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ;...
28-02-25 07:46 pm
04-03-25 07:35 pm
Mangalore Correspondent
Mangalore MLA Vedavyas kamath, Shakthinagr: ವ...
04-03-25 05:42 pm
Kangana Ranaut, kateel temple Mangalore: ಗುಲಾ...
04-03-25 05:17 pm
Kangana Ranaut, Udupi Temple; ಕಾಪು ಮಾರಿಯಮ್ಮ ದ...
04-03-25 02:07 am
Puttur suicide, Bangalore: ಹತ್ತು ತಿಂಗಳ ಹಿಂದೆ...
03-03-25 09:59 pm
04-03-25 03:12 pm
HK News Desk
ಹರ್ಯಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಕೊಲೆಗೈದು ಸೂಟ...
03-03-25 01:51 pm
Bangalore Falcon Ponzi scheme, Fraud: ಇನ್ ವಾಯ...
02-03-25 06:37 pm
Bangalore KR Puram Police, Bike Robbery, Crim...
01-03-25 05:54 pm
Bike Robbery, Mangalore Police, Crime, TD Nag...
01-03-25 02:40 pm