ಬ್ರೇಕಿಂಗ್ ನ್ಯೂಸ್
12-03-25 05:23 pm Mangalore Correspondent ಕರಾವಳಿ
ಮಂಗಳೂರು, ಮಾ.12 : ಫರಂಗಿಪೇಟೆಯ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಹೈಕೋರ್ಟಿಗೆ ವರದಿ ಸಲ್ಲಿಸಿದ್ದಾರೆ.
ಫೆ.25ರಿಂದ 12 ದಿನಗಳ ಕಾಲ ನಾಪತ್ತೆಯಾಗಿದ್ದ ದಿಗಂತ್ ಮಾ.8ರಂದು ಉಡುಪಿಯಲ್ಲಿ ದಿಢೀರ್ ಎನ್ನುವಂತೆ ಪತ್ತೆಯಾಗಿದ್ದ. ಅಲ್ಲಿಂದ ಕರೆತಂದು ವಿಚಾರಣೆ ನಡೆಸಿದ ಬಳಿಕ ಪೊಲೀಸರು ಆತನನ್ನು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇರಿಸಿದ್ದರು. ಇದಕ್ಕೂ ಮುನ್ನ ಹೈಕೋರ್ಟಿನಲ್ಲಿ ಪೋಷಕರು ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿ ಬಾಲಕನನ್ನು ಪತ್ತೆ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದರು. ಇದರಂತೆ, ಮಾರ್ಚ್ 12ರಂದು ಪೊಲೀಸರು ಹೈಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದು, ಸದ್ಯಕ್ಕೆ ಹುಡುಗ ಮಕ್ಕಳ ರಕ್ಷಣಾ ಕೇಂದ್ರದಲ್ಲಿದ್ದು ಆತನಿಗೆ ಕೌನ್ಸಿಲಿಂಗ್ ಅಗತ್ಯ ಇರುವ ಬಗ್ಗೆ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.
ಹೈಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಪೋಷಕರ ಕಡೆಯ ವಕೀಲರು, ದಿಗಂತ್ ಪಿಯುಸಿ ವಿದ್ಯಾರ್ಥಿಯಾಗಿದ್ದು, ಸದ್ಯ ಪರೀಕ್ಷೆ ನಡೆಯುತ್ತಿದೆ. ಇನ್ನೂ ಕೆಲವು ಪರೀಕ್ಷೆ ಉಳಿದಿದ್ದು ಪೋಷಕರ ಅಪೇಕ್ಷೆಯಂತೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸಿಡಬ್ಲ್ಯುಸಿ ವರದಿಯಂತೆ ಪೊಲೀಸರು ಅಫಿಡವಿಟ್ ಹಾಕಿದ್ದಾರೆ. ಪರೀಕ್ಷೆ ಹೆಸರಲ್ಲಿ ಬಾಲಕನಿಗೆ ಒತ್ತಡ ಹೇರಬೇಡಿ, ಮುಂದಿನ ವಾರ ನಿಮ್ಮ ಅಹವಾಲು ಪರಿಗಣಿಸುವುದಾಗಿ ಹೇಳಿದ್ದಾರೆ.
ಇದೇ ವೇಳೆ, ಪೋಷಕರಿಗೆ ಮಗನನ್ನು ಭೇಟಿಯಾಗಲು ಅವಕಾಶ ಕೊಡಬೇಕೆಂದು ಕೇಳಿದ್ದಾರೆ. ಅದಕ್ಕೆ, ಅಪ್ರಾಪ್ತ ಮಗನ ಬಗ್ಗೆ ಆಸ್ಥೆ ವಹಿಸುವ ವಿಚಾರದಲ್ಲಿ ಪೋಷಕರಿಗೆ ಮೊದಲ ಆದ್ಯತೆ ಇರುತ್ತದೆ. ಜೊತೆಗೆ ನೀವು ಕೂಡ ಭೇಟಿಯಾಗಬಹುದು, ಅದಕ್ಕೇನೂ ಸರಕಾರಿ ವಕೀಲರ ಆಕ್ಷೇಪ ಇರಲಿಕ್ಕಿಲ್ಲ ಎಂದು ಪೋಷಕರ ಕಡೆಯ ವಕೀಲರಿಗೆ ಜಡ್ಜ್ ಹೇಳಿದರು. ಈ ವೇಳೆ ಹೈಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಜಡ್ಜ್ ಕಾಮೇಶ್ವರ ರಾವ್ ಮತ್ತು ಟಿಎಂ ನದಾಫ್ ಅವರಿದ್ದರು.
ಇದೇ ವೇಳೆ, ದಿಗಂತ್ ಮನೆಗೆ ಹೋಗಲು ಬಯಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾಗಿ ಸುದ್ದಿ ಹಬ್ಬಿಸಲಾಗುತ್ತಿದೆ. ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸೋಮವಾರ ಹುಡುಗನನ್ನು ಬಂಟ್ವಾಳದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಲ್ಲಿ ನ್ಯಾಯಾಧೀಶರ ಎದುರಲ್ಲಿ 164 ಕಾಯ್ದೆಯಡಿ ಹೇಳಿಕೆ ನೀಡಿದ್ದಾನೆ. ಆ ಸಂದರ್ಭದಲ್ಲಿ ಪೊಲೀಸರು ಜೊತೆಗೆ ಇರಲಿಲ್ಲ. ಈಗಾಗಲೇ ಎಸ್ಪಿ ಯತೀಶ್, ಹುಡುಗ ಪಿಯುಸಿ ಪರೀಕ್ಷೆ ಭಯದಿಂದ ನಾಪತ್ತೆಯಾಗಿದ್ದಾನೆ. ಬೇರಾವುದೇ ಆಯಾಮ ಇಲ್ಲ ಎಂದು ತಿಳಿಸಿದ್ದಾರೆ.
ಮಾರ್ಚ್ 9 ಮತ್ತು 10ರಂದು ಮನೆಯವರು ದಿಗಂತ್ ನನ್ನು ಭೇಟಿಯಾಗಿದ್ದು, ಆ ಸಂದರ್ಭದಲ್ಲಿ ಮನೆಗೆ ಬರುವುದಿಲ್ಲ ಎನ್ನುವ ರೀತಿ ಯಾವುದೇ ಮಾತು ಆಡಿಲ್ಲ. ಬದಲಿಗೆ, ಪರೀಕ್ಷೆ ವಿಚಾರದಲ್ಲಿ ನಮ್ಮಲ್ಲಿ ಕೇಳಿದ್ದಾನೆ. ಪರೀಕ್ಷೆ ಮತ್ತೆ ಬರೆಯಬಹುದು ಎಂದು ಸಂತೈಸಿದ್ದೇವೆ. ಈ ನಡುವೆ, ಮಗ ಮನೆಗೆ ಬರಲು ಒಪ್ಪುತ್ತಿಲ್ಲ ಎಂದು ಕೆಲವರು ಯಾಕೆ ಸುದ್ದಿ ಹಬ್ಬಿಸುತ್ತಿದ್ದಾರೋ ಗೊತ್ತಾಗಲ್ಲ ಎಂದು ಮನೆಮಂದಿ ಪ್ರಶ್ನೆ ಮಾಡಿದ್ದಾರೆ.
In the ongoing investigation of the Mangalore Diganth missing case, local police submitted a comprehensive report to the High Court today, detailing their findings and the status of the case. The court has ordered that Diganth, the individual at the center of the case, will remain in a remand home while further proceedings take place.
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 02:30 pm
Mangalore Correspondent
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am