ಬ್ರೇಕಿಂಗ್ ನ್ಯೂಸ್
12-03-25 09:17 pm Udupi Correspondent ಕರಾವಳಿ
ಉಡುಪಿ, ಮಾ.12 : ಇತ್ತೀಚೆಗೆ ಮಣಿಪಾಲದಲ್ಲಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಚೇಸಿಂಗ್ ಮಾಡಿಯೂ ತಪ್ಪಿಸಿಕೊಂಡಿದ್ದ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಹಿರಿಯಡ್ಕದಲ್ಲಿ ಮಣಿಪಾಲ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬುಧವಾರ ಸಂಜೆ ಹಿರಿಯಡ್ಕದಲ್ಲಿರುವ ಮಾಹಿತಿ ಪಡೆದು ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ, ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಕ್ಕಾಗಿ ಮಣಿಪಾಲ ಇನ್ಸ್ ಪೆಕ್ಟರ್ ದೇವರಾಜು ಫೈರ್ ಮಾಡಿದ್ದಾರೆ.
ಮಾ.4ರಂದು ಥಾರ್ ಜೀಪಿನಲ್ಲಿ ತನ್ನ ಕಾಸರಗೋಡು ಮೂಲದ ಪ್ರೇಯಸಿ ಜೊತೆಗೆ ಮಣಿಪಾಲಕ್ಕೆ ಬಂದಿದ್ದ ಇಸಾಕ್ ಬಂಧನಕ್ಕೆ ಬೆಂಗಳೂರಿನ ನೆಲಮಂಗಲ ಪೊಲೀಸರು ಬಲೆ ಬೀಸಿದ್ದರು. ದರೋಡೆ ಪ್ರಕರಣದಲ್ಲಿ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಿದ್ದರೂ, ಮಣಿಪಾಲ- ಉಡುಪಿ ಮಧ್ಯೆ ಹಲವು ವಾಹನಗಳಿಗೆ ಡಿಕ್ಕಿಯಾಗಿಸಿ ರಾತ್ರಿ ವೇಳೆ ಪರಾರಿಯಾಗಿದ್ದ.

ಆನಂತರ ಉಡುಪಿ ಪೊಲೀಸರು ಆತನ ಪ್ರೇಯಸಿಯನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದರು. ಆದರೆ, ಇಸಾಕ್ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಉಡುಪಿಯಲ್ಲೇ ಇರುವ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಇದೀಗ ಹಿರಿಯಡ್ಕದಲ್ಲಿ ಪೊಲೀಸರು ಶೂಟೌಟ್ ಮಾಡಿ ಬಂಧನ ಮಾಡಿದ್ದಾರೆ.
ಬೆಂಗಳೂರಿನ ನೆಲಮಂಗಲ ಠಾಣೆ ವ್ಯಾಪ್ತಿಯಲ್ಲಿ ಪುತ್ತೂರು ಮೂಲದ ಉದ್ಯಮಿಯನ್ನು ದರೋಡೆಗೈದ ಬಗ್ಗೆ ಪ್ರಕರಣ ದಾಖಲಾಗಿತ್ತು. ಗರುಡ ಗ್ಯಾಂಗ್ ಸದಸ್ಯರು ಕೃತ್ಯ ನಡೆಸಿರುವ ಮಾಹಿತಿ ಮೇರೆಗೆ ಪೊಲೀಸರು ಇಸಾಕ್ ಬೆನ್ನು ಹತ್ತಿದ್ದರು. ಮಣಿಪಾಲ ಠಾಣೆಯಲ್ಲಿ ಇಸಾಕ್ ಮತ್ತು ಆತನ ಪ್ರೇಯಸಿ ವಿರುದ್ಧ ಕೊಲೆಯತ್ನ ಹಾಗೂ ಆರ್ಮ್ಸ್ ಆಕ್ಟಿನಡಿ ಕೇಸು ದಾಖಲಿಸಲಾಗಿತ್ತು.
Udupi Police open fire on Notorious Garuda Gang criminal Isaac, hospitalised. A shootout took place in Hiriyadka, Udupi, when the police were transporting arrested notorious criminal Isaac, a most-wanted member of the Garuda Gang along with three others. The operation was carried out by Manipal police sub-inspector Devaraj and his team.
09-06-26 07:04 pm
HK News Staffer
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
ಎಂಬಿಬಿಎಸ್ ಪದವಿ ಮುಗಿಸಿದ ಬೆನ್ನಲ್ಲೇ ಸರ್ಕಾರಿ ಆಸ್ಪ...
05-06-26 07:14 pm
08-06-26 09:11 pm
HK News Staffer
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
ಯೋಗಿಜೀ ನಮ್ಮನ್ನು ಕ್ಷಮಿಸಿ..! ಇನ್ನೆಂದೂ ಅಪರಾಧ ಕೃತ...
04-06-26 04:19 pm
09-06-26 08:58 pm
ರಿಚರ್ಡ್ | Richard
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
ಮಳೆಗಾಲ ಹಿನ್ನೆಲೆ ; ರಸ್ತೆ ಹೊಂಡಕ್ಕೆ ಬಿದ್ದು ಪ್ರಾಣ...
08-06-26 09:21 pm
ಮಂಗಳೂರಿನಲ್ಲಿ ಡಿಎಚ್ಓಗೆ ಸಚಿವ ಯು.ಟಿ ಖಾದರ್ ಕ್ಲಾಸ್...
08-06-26 04:55 pm
UT Khader, Mangalore: ಎಂಬಿಬಿಎಸ್ ಆದವರಿಗೆ ಕಲಿತ...
07-06-26 03:38 pm
10-06-26 12:09 pm
HK News Staffer
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 98 ಲಕ್ಷ ರೂ. ದೋಚಿದ...
08-06-26 10:41 pm